ಧರ್ಮಸ್ಥಳ: ನದಿಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ

By Kannadaprabha NewsFirst Published Apr 1, 2020, 7:21 AM IST
Highlights

ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕೋಲ್ನ ನದಿಯಲ್ಲಿ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳೂರು(ಎ.01): ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕೋಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷ ಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ ಮಾರಣ ಹೋಮ ನಡೆದಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಹೇಳುವಂತೆ ಸೋಮವಾರ ರಾತ್ರಿ ಅಡಕೆ ತೋಟಕ್ಕೆ ಬಳಸುವ ಮೈಲುಸುತ್ತು ದ್ರಾವಣ ಬಳಸಿರುವ ಶಂಕೆ ವ್ಯಕ್ತಪಡಿಸಿದ್ದು 2 ಕಿ.ಮೀ. ದೂರ. ಮೀನುಗಳು ಸಾವನ್ನಪ್ಪಿವೆ.

ಹಕ್ಕಿ, ಹಂದಿ ಆಯ್ತು ಈಗ ಮೀನುಗಳ ಸಾವು ತಂದಿದೆ ಆತಂಕ

ಮಾರಕ ರೋಗವಾದ ಕೊರೊನಾ ಸೋಂಕಿನ ಭೀತಿಯ ನಡುವೆ ಲಾಕ್‌ ಡೌನ್‌ ಆಗಿದ್ದರೂ, ಮನೆಯಿಂದ ಹೊರಗೆ ಬರಬಾರದು ಎಂಬ ಕಳಕಳಿಯ ವಿನಂತಿಯ ನಡುವೆಯೂ ಕೆಲವು ಕಿಡಿಕೇಡಿಗಳು ವಿಷ ಪದಾರ್ಥ ಬಳಸಿ ನದಿ ಮೀನು ಹಿಡಿಯಲು ಮುಂದಾಗುವ ಮೂಲಕ ಅಮಾನುಷ ವರ್ತನೆ ತೋರಿದ್ದಾರೆ. ಇದೇ ನೀರನ್ನು ಕುಡಿದು ನವಿಲು ಸಾವನ್ನಪ್ಪಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು ಬಂದರಿಗೆ ಬಂದಿದೆ ಕೊರೋನಾ ಮೀನು..! ಕೆಜಿಗೆ 2 ಸಾವಿರ...

click me!