ವಿಜೃಂಭಣೆಯಿಂದ ಜರುಗಿದ ಆದಿಚುಂಚನಗಿರಿ ರಥೋತ್ಸವ

Suvarna News   | Asianet News
Published : Mar 28, 2021, 12:31 PM IST
ವಿಜೃಂಭಣೆಯಿಂದ ಜರುಗಿದ  ಆದಿಚುಂಚನಗಿರಿ ರಥೋತ್ಸವ

ಸಾರಾಂಶ

ಮಂಡ್ಯ ಪ್ರಸಿದ್ಧ ಆದಿಚುಂಚನಗಿರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. 

ಮಂಡ್ಯ  (ಮಾ.28):  ಮಂಡ್ಯದ ಆದಿಚುಂಚನಗಿರಿ ರಥೋತ್ಸವ  ವಿಜೃಂಭಣೆಯಿಂದ ಜರುಗಿದೆ.  

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದ್ದು, ಇಂದು  ಬೆಳಗ್ಗೆ 4 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ರಥೋತ್ಸವ ಜರುಗಿದೆ. 

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಪ್ರಸಿದ್ಧ ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು. 

ವಿಜ್ಞಾನ-ಆಧ್ಯಾತ್ಮಿಕತೆ ಎರಡೂ ಒಂದಕ್ಕೊಂದು ಪೂರಕ: ಚುಂಚಶ್ರೀ ...

ರಥೋತ್ಸವದ ಜತೆಯಲ್ಲಿ ಚುಂಚಶ್ರೀಗಳ ಅಡ್ಡಪಲ್ಲಕಿ ಉತ್ಸವವೂ ನಡೆದಿದ್ದು, ರಥಕ್ಕೆ ಹಣ್ಣು ಜವನ ಎಸೆದು ಭಕ್ತ ವೃಂದ ತನ್ನ ಭಕ್ತಿ ಸಮರ್ಪಿಸಿತು.  ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. 

ಆದಿಚುಂಚನಗಿರಿ ಶಾಖಾಮಠದ ಎಲ್ಲಾ ಸ್ವಾಮೀಜಿಗಳು ಸೇರಿದಂತೆ ಅನೇಕ ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥೋತ್ಸವದಲ್ಲಿ ಪಾಲ್ಗೊಳ್ಳಲು ಶನಿವಾರ ಬೆಳಿಗ್ಗೆಯಿಂದಲೇ ಕ್ಷೇತ್ರದಲ್ಲಿ ಭಕ್ತರು ಸೇರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು