ಪಿಡಿಎಫ್, ಪಿಎಫ್‌ಐಒ, ಎಸ್ಡಿಪಿಐಒ ದೇಶದಲ್ಲಿ ಕುತಂತ್ರ ಮಾಡುತ್ತಿದ್ದಾರೆ. ದೇಶದ ಮಾಜಿ ಉಪರಾಷ್ಟ್ರಪತಿ ಪಾಕಿಸ್ತಾನದ ಏಜೆಂಟ್ ಆಗಿ ಕೆಲಸ ಮಾಡಿದ್ದು, ದೇಶದ ಜನರ ಮುಂದೆ ಬಹಿರಂಗಗೊಂಡಿದೆ: ಯತ್ನಾಳ್
ವಿಜಯಪುರ(ಜು.17): ಅಗ್ನಿಪಥ ದೇಶದ ಜನರ ಸಂರಕ್ಷಣೆಗೆ ರೂಪಿಸಿದ ಉತ್ತಮ ಯೋಜನೆ. ಇದನ್ನು ವಿರೋಧಿಸುವವರು ದೇಶದ್ರೋಹಿಗಳು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2047ಕ್ಕೆ ಹಿಂದೂಸ್ಥಾನವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಷಡ್ಯಂತ್ರ ನಡೆಸುತ್ತಿರುವ ವಿಚಾರದಿಂದ ಯಾವುದೇ ಹಿಂದೂಗಳು ಹೆದರಬೇಕಿಲ್ಲ. ಏಕೆಂದರೆ ಇಂಥ ಷಡ್ಯಂತ್ರ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಇರುವವರೆಗೆ ನಡೆಯುವುದಿಲ್ಲ ಎಂದರು. ಇಂಥ ಷಡ್ಯಂತ್ರ ತಡೆಯಲು ಈಗ ಕಾಲ ಪಕ್ವವಾಗಿದೆ. ಹಿಂದೂಗಳು ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಈ ಉದ್ದೇಶಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಗ್ನಿಪಥ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.
ಪಿಡಿಎಫ್, ಪಿಎಫ್‌ಐಒ, ಎಸ್ಡಿಪಿಐಒ ದೇಶದಲ್ಲಿ ಕುತಂತ್ರ ಮಾಡುತ್ತಿದ್ದಾರೆ. ದೇಶದ ಮಾಜಿ ಉಪರಾಷ್ಟ್ರಪತಿ ಪಾಕಿಸ್ತಾನದ ಏಜೆಂಟ್ ಆಗಿ ಕೆಲಸ ಮಾಡಿದ್ದು, ದೇಶದ ಜನರ ಮುಂದೆ ಬಹಿರಂಗಗೊಂಡಿದೆ. ಅದಕ್ಕಾಗಿಯೇ ಭವಿಷ್ಯ ಭಾರತವನ್ನು ಉಳಿಸಲು ಪ್ರಧಾನಿ ಮೋದಿ ಅವರು ಅಗ್ನಿಪಥ ಮಾಡಿದ್ದಾರೆ. ಅಗ್ನಿಪಥದಲ್ಲಿ 4 ವರ್ಷ ಸೇನೆಯಲ್ಲಿ ಕೆಲಸ ಮಾಡುತ್ತಾರೆ. 4 ವರ್ಷಗಳ ಆವಧಿಯಲ್ಲಿ ಸೇನೆಯಲ್ಲಿ ಉತ್ತಮ ಕೆಲಸ ಮಾಡಿದರೆ ಸೇನೆಯಲ್ಲಿ ಮುಂದುವರೆಯುತ್ತಾರೆ. ಸೇನೆಯಿಂದ ವಾಪಸ್ ಬಂದವರಿಗೆ ಇಲ್ಲಿನ ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಸಂಘ ಸಂಸ್ಥೆಗಳು ಸೆಕ್ಯೂರಿಟಿ ಕೆಲಸ ಕೊಡುತ್ತವೆ. ಅವರ ಅರ್ಹತೆ ಮೇರೆಗೆ ತಿಂಗಳಿಗೆ .20 ರಿಂದ 25 ಸಾವಿರ ಸಂಬಳ ನೀಡುತ್ತವೆ ಎಂದರು.
Bagalkote: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಲಿ: ಯತ್ನಾಳ ವ್ಯಂಗ್ಯ
ಪಿಡಿಎಫ್, ಪಿಎಫ್‌ಐಒ, ಎಸ್ಡಿಪಿಐಒ ಸಂಘಟನೆಗಳ ವಿರುದ್ದ ಸಾಕ್ಷ್ಯಾಧಾರಗಳು ಇದೀಗ ಸಿಗುತ್ತಿವೆ. ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕ ನಂತರ ಈ ಎಲ್ಲ ಸಂಘಟನೆಗಳನ್ನು ಬ್ಯಾನ್ ಮಾಡಲಾಗುತ್ತದೆ. ಇವುಗಳ ಹಿಂದಿರುವ ರಾಜಕಾರಣಿಗಳು, ರಾಜಕೀಯ ಪಕ್ಷಗಳ ಬಣ್ಣವೂ ಬಯಲಾಗುತ್ತದೆ ಎಂದು ಸಂಘಟನೆಗಳ ಬ್ಯಾನ್ ಮಾಡುವ ಕುರಿತು ಪ್ರತಿಕ್ರಿಯಿಸಿದರು.
ಗೋಷ್ಠಿಯಲ್ಲಿ ಪರಶುರಾಮ ರಜಪೂತ, ಎಂ.ಎಸ್.ರುದ್ರಗೌಡರ, ಸಂ.ಗು.ಸಜ್ಜನ, ಬಸಯ್ಯ ಹಿರೇಮಠ, ಎಂ.ಎಸ್.ಕರಡಿ, ರಾಘವ ಅಣ್ಣಿಗೇರಿ, ರಾಹುಲ್ ಜಾಧವ, ಲಕ್ಷ್ಮೇ ಕನ್ನೊಳ್ಳಿ, ಬಾಗಪ್ಪ ಕನ್ನೊಳ್ಳಿ ಮತ್ತಿತರರು ಇದ್ದರು.
ದೇಶದ ಅನ್ನ ತಿಂದು ದೇಶದ ವಿರುದ್ಧ ಕೆಲಸ ಮಾಡುವವರು ಹಿಂದೂಗಳ ಮೇಲೆ ಏನಾದರೂ ಮಾಡಬಹುದು. ಇಂಥವರನ್ನು ಮಟ್ಟಹಾಕಲು ನಮ್ಮ ಶಕ್ತಿ ಉಳಿಯಬೇಕಾದರೇ ಅಗ್ನಿಪಥ ಸೈನಿಕರು ಬೇಕಾಗಿದ್ದಾರೆ. ಇಸ್ರೇಲ್‌ನಲ್ಲಿ ಎಲ್ಲರೂ ಕಡ್ಡಾಯವಾಗಿ 10 ವರ್ಷ ಸೇನೆಯಲ್ಲಿ ಕೆಲಸ ಮಾಡಬೇಕೆಂಬ ನಿಯಮವಿದೆ. ಮೆಣಸಿನಕಾಯಿಯಷ್ಟು ಚಿಕ್ಕ ಇರುವ ಇಸ್ರೇಲ್ ದೇಶ ಜಗತ್ತಿನಲ್ಲಿ ಎಲ್ಲರನ್ನೂ ಹೆದರಿಸುತ್ತದೆ. ಅಗ್ನಿಪಥ ಸಮಾಜ, ಧರ್ಮದ ವಿರುದ್ಧ ಅಲ್ಲ. ಯಾರು ದೇಶದ ಅನ್ನ ತಿಂದು ಪಾಕಿಸ್ತಾನ ಎಜೆಂಟ್‌ರಂತೆ ವರ್ತಿಸುತ್ತಾರೆಯೋ ಅವರ ವಿರುದ್ಧ ಇದು ಕೆಲಸ ಮಾಡುತ್ತದೆ ಅಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.