ಅತ್ತ ಪ್ರವಾಹದ ಸುಳಿ, ಇತ್ತ ಕಳ್ಳರ ಹಾವಳಿ: 10 ಅಂಗಡಿಗಳಿಗೆ ಕನ್ನ

By Web DeskFirst Published Aug 14, 2019, 3:49 PM IST
Highlights

ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಅಂಗಡಿಗಳನ್ನು ಟಾರ್ಗೆಟ್ ಮಾಡಿದ ಕಳ್ಳರು| ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಭಾಗದ ಅಂಗಡಿಗಳಿಗೆ ಕನ್ನ. ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ದೋಚಿದ ಖದೀಮರು.

ಕೊಡಗು, (ಆ.14): ಬಿಟ್ಟು ಬಿಡದೆ ಸುರಿದ ಭಾರೀ ಮಳೆಯಿಂದಾಗಿ ಕೊಡಗು ಜಿಲ್ಲೆಯ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.  ಈ ಭೀಕರ ಪ್ರವಾಹದ ನಡುವೆಯೂ ಕಳ್ಳರು ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.

ಒಂದೆಡೆ ಪ್ರವಾಹಕ್ಕೆ ಜನರು ಮನೆಮಠ ಕಳೆದುಕೊಂಡು ಕಂಗಾಲಾಗಿದ್ದರೆ, ಇನ್ನೊಂದೆಡೆ ಕಳ್ಳರು ಪ್ರವಾಹದಿಂದ ಲಾಭ ಪಡೆದಿದ್ದಾರೆ. ಪ್ರವಾಹಕ್ಕೆ ಮುಳುಗಡೆಯಾಗಿದ್ದ ಅಂಗಡಿಗಳನ್ನು ಟಾರ್ಗೆಟ್ ಮಾಡಿದ ಕಳ್ಳರು, ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಪ್ರವಾಹವನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರು
ಒಂದು ವಾರದಿಂದ ಗೋಣಿಕೊಪ್ಪಲು ಭಾಗದಲ್ಲಿ ಪ್ರವಾಹ ಉಂಟಾಗಿದ್ದ ಕಾರಣಕ್ಕೆ ಮಾಲೀಕರು ಅಂಗಡಿ ಕಡೆ ಹೋಗಿರಲಿಲ್ಲ. ಇದನ್ನೇ ನೋಡಿಕೊಂಡು ಸ್ಕೆಚ್ ಹಾಕಿದ ಕಳ್ಳರು ಅಂಗಡಿಗಳಿಗೆ ಕನ್ನ ಹಾಕಲು ಉಪಾಯ ಮಾಡಿದ್ದಾರೆ.

ಜಲಾವೃತಗೊಂಡಿದ್ದ ಅಂಗಡಿಗಳಿಗೆ ನುಗ್ಗಿ ಕೈಗೆಸಿಕ್ಕಿದ್ದನ್ನೆಲ್ಲಾ ದೋಚಿ ಎಸ್ಕೇಪ್ ಆಗಿದ್ದಾರೆ. ಅಂದಾಜು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಹಾಗೂ 20 ಸಾವಿರಕ್ಕೂ ಹೆಚ್ಚು ನಗದು ಹಣವನ್ನು ಕಳವು ಮಾಡಿದ್ದಾರೆ.

ಸದ್ಯ ಮಳೆ ಕಡಿಮೆಯಾಗಿ ಪ್ರವಾಹ ಇಳಿದಿರುವ ಹಿನ್ನೆಲೆ ಮಾಲೀಕರು ತಮ್ಮ ಅಂಗಡಿಗಳಿಗೆ ಹೋಗಿದ್ದಾಗ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಅಂಗಡಿ ಮಾಲೀಕರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

click me!