ಪಂಚೆ, ಶಲ್ಯ, ರುದ್ರಾಕ್ಷಿ ಧರಿಸಿ ಜನರಿಗೆ 'ನಾಮ' ಹಾಕ್ತಿದ್ದವನಿಗೆ ಬಿತ್ತು ಗೂಸಾ..!

Suvarna News   | Asianet News
Published : Jan 04, 2020, 01:52 PM ISTUpdated : Jan 04, 2020, 03:22 PM IST
ಪಂಚೆ, ಶಲ್ಯ, ರುದ್ರಾಕ್ಷಿ ಧರಿಸಿ ಜನರಿಗೆ 'ನಾಮ' ಹಾಕ್ತಿದ್ದವನಿಗೆ ಬಿತ್ತು ಗೂಸಾ..!

ಸಾರಾಂಶ

ದೇವಾಲಯಕ್ಕೆ ಡೊನೇಷನ್ ಕೇಳೋ ನೆಪದಲ್ಲಿ ಬ್ರಾಹ್ಮಣನ ವೇಷ ಧರಿಸಿ ಬಂದು ಕಳ್ಳತನ ಮಾಡುತ್ತಿದ್ದ ವ್ಯಕ್ತಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾನೆ. ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದ ಕಳ್ಳನಿಗೆ ಸ್ಥಳೀಯರು ಥಳಿಸಿರುವ ಘಟನೆ ನಡೆದಿದೆ.

ಮೈಸೂರು(ಜ.04): ದೇವಾಲಯಕ್ಕೆ ಡೊನೇಷನ್ ಕೇಳೋ ನೆಪದಲ್ಲಿ ಬ್ರಾಹ್ಮಣನ ವೇಷ ಧರಿಸಿ ಬಂದು ಕಳ್ಳತನ ಮಾಡುತ್ತಿದ್ದ ವ್ಯಕ್ತಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾನೆ. ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದ ಕಳ್ಳನಿಗೆ ಸ್ಥಳೀಯರು ಥಳಿಸಿರುವ ಘಟನೆ ನಡೆದಿದೆ.

ಬ್ರಾಹ್ಮಣರ ವೇಷ ಧರಿಸಿ ಕಳ್ಳತನ ಮಾಡಲು ಬಂದಿದ್ದವನನ್ನು ಸ್ಥಳೀಯರು ರೆಡ್ ಹ್ಯಾಂಡ್‌ ಆಗಿ ಹಿಡಿದು ಥಳಿಸಿದ್ದು, ಮೈಸೂರಿನ ರಾಮಾನುಜ ರಸ್ತೆಯಲ್ಲಿ ಘಟನೆ ನಡೆದಿದೆ. ದೇವಾಲಯಕ್ಕೆ ಡೊನೇಷನ್ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ ಮನೆಗಳಿಗೆ ತೆರಳಿ ಹಣ ಕದಿಯುತ್ತಿದ್ದ.

ಕಪಿಲಾ ನದಿಯಲ್ಲಿ ತೇಲುತ್ತಿತ್ತು ನವಜಾತ ಶಿಶುವಿನ ಮೃತದೇಹ..!

ಪಂಚೆ, ಶಲ್ಯ, ತುಳಸಿ ಹಾರ ಧರಿಸಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ ಐನಾತಿ ನಂತರ ಮನೆಯವರನ್ನು ನಂಬಿಸಿ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ತನ್ನನ್ನು ಪ್ರವೀಣ್ ಎಂದು ಹೇಳಿಕೊಂಡಿದ್ದಾನೆ.

"

ತಾನು ಭದ್ರಾವತಿಯ‌ ನಿವಾಸಿ ಎಂದು ಹೇಳಿಕೊಂಡಿರುವ ಪ್ರವೀಣ್‌ನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಎರಡನೇ ಬಾರಿ ಕದಿಯಲು ಬಂದು ಕಳ್ಳ ಸಿಕ್ಕಿ ಹಾಕಿಕೊಂಡಿದ್ದಾನೆ. ಮಠದ ಅರ್ಚಕ ವ್ಯಾಸಾತೀರ್ಥಾಚಾರ್ಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದು, ಈ ಹಿಂದೆ ಮನೆಯಲ್ಲಿ 50 ಸಾವಿರ ರೂ. ಕದ್ದಿದ್ದ. ಈಗ ಮನೆಯವರನ್ನು ಬೆಂಗಳೂರಿಗೆ ಕರೆಸಿ ಇಲ್ಲಿ ಕಳ್ಳತನ ಮಾಡಲು ಸ್ಕೆಚ್ ಹಾಕಿ ಸಿಕ್ಕಿಬಿದ್ದ ಕಳ್ಳನನ್ನು ಕೆ.ಆರ್.ಪೊಲೀಸರು ಬಂಧಿಸಿದ್ದಾರೆ.

ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸಜೀವ ದಹನ

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!