ಮನುಷ್ಯ ಎಷ್ಟೇ ದೊಡ್ಡ ಅಧಿಕಾರ, ಅಂತಸ್ತು, ಹಣ ಹೊಂದಿದ್ದರೂ ನೆಮ್ಮದಿ ಸಿಗಲು ಸಾಧ್ಯವಿಲ್ಲ, ಅದು ದೇವರ ಸಾನ್ನಿಧ್ಯದಲ್ಲಿ ಮಾತ್ರ ಸಂತೃಪ್ತಿ ಸಿಗÜಲು ಸಾಧ್ಯ ಇದರಿಂದಾಗಿ ಪ್ರತಿ ಊರು, ಗ್ರಾಮಗಳಲ್ಲಿ ದೇವಾಲಯಗಳು ಹಾಗೂ ಪುಣ್ಯ ಕ್ಷೇತ್ರಗಳ ಕಾಣುತ್ತಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ಹೊನ್ನಾಳಿ (ಫೆ.4) : ಮನುಷ್ಯ ಎಷ್ಟೇ ದೊಡ್ಡ ಅಧಿಕಾರ, ಅಂತಸ್ತು, ಹಣ ಹೊಂದಿದ್ದರೂ ನೆಮ್ಮದಿ ಸಿಗಲು ಸಾಧ್ಯವಿಲ್ಲ, ಅದು ದೇವರ ಸಾನ್ನಿಧ್ಯದಲ್ಲಿ ಮಾತ್ರ ಸಂತೃಪ್ತಿ ಸಿಗÜಲು ಸಾಧ್ಯ ಇದರಿಂದಾಗಿ ಪ್ರತಿ ಊರು, ಗ್ರಾಮಗಳಲ್ಲಿ ದೇವಾಲಯಗಳು ಹಾಗೂ ಪುಣ್ಯ ಕ್ಷೇತ್ರಗಳ ಕಾಣುತ್ತಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಪವಿತ್ರ ಕ್ಷೇತ್ರ ಸುಂಕದಕಟ್ಟೆಶ್ರೀ ಮಂಜುನಾಥ ಸ್ವಾಮಿ, ನರಸಿಂಹ ಸ್ವಾಮಿ ದೇವಸ್ಥಾನ ರಾಜಗೋಪುರ, ಪಂಚ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದ ಎರಡನೇ ದಿನವಾದ ಶುಕ್ರವಾರದಂದು ಮಾತನಾಡಿ ಮಠ, ದೇವಸ್ಥಾನಗಳು ಭಕ್ತಿ,ನೆಮ್ಮದಿ ಕಾಣುವ ತಾಣಗಳಾಗಿವೆ. ಕ್ಷೇತ್ರದಲ್ಲಿ ಮಾರಿಕೊಪ್ಪದ ಹಳದಮ್ಮದೇವಿ, ಹಿರೇಕಲ್ಮಠ, ರಾಘವೇಂದ್ರ ಮಠ, ಸಂತ ಸೇವಾಲಾಲ್ ಕ್ಷೇತ್ರ, ತೀರ್ಥರಾಮೇಶ್ವರ ಹೀಗೆ ಹಲವು ಪುಣ್ಯ ಕ್ಷೇತ್ರಗಳಿವೆ ಎಂದರು. ಸುಂಕದಕಟ್ಟೆದೇವಸ್ಥಾನದಲ್ಲಿ ಸಮುದಾಯ ಭವನದ ಸಮಸ್ಯೆ ಇದ್ದು, ಈ ಕಾರ್ಯ ಪೂರ್ಣವಾಗಲು ಸರ್ಕಾರಕ್ಕೆ ವಿಶೇಷ ಅನುದಾನ ಕೇಳಲಾಗಿದ್ದು ಹಣ ಬಿಡುಗಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಕಾಂಗ್ರೆಸ್‌ನಿಂದ ಸುಳ್ಳು ಭರವಸೆ ಮಾತ್ರ, ಅಭಿವೃದ್ಧಿ ಇಲ್ಲ: ಶಾಸಕ ರೇಣುಕಾಚಾರ್ಯ
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ ಮಾತನಾಡಿ, ಸುಂಕದಕಟ್ಟೆಯ ಈ ದೇವಾಲಯ ಅತ್ಯಂತ ಪುರಾತನವಾದ್ದು ಭಕ್ತರ ಪಾಲಿಗೆ ಶಕ್ತಿಕೇಂದ್ರವಾಗಿದೆ. ಹೊನ್ನಾಳಿ ಕ್ಷೇತ್ರದಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿದ್ದು ಕೆಲವೊಂದು ಪ್ರವಾಸಿ ತಾಣಗಳಾಗಿ ಮಾರ್ಪಾಡುಗುತ್ತಿದೆ. ಮುಖ್ಯವಾಗಿ ತೀರ್ಥರಾಮೇಶ್ವರ ಹಾಗೂ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಕ್ಷೇತ್ರಗಳು ಸಾಕ್ಷಿ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಆರುಣ್‌ಕುಮಾರ್, ಕಾಂಗ್ರೆಸ್ ಹಿರಿಯ ನಾಯಕ ಬಿ. ಸಿದ್ದಪ್ಪ,ಕಾಂಗ್ರೆಸ್ ಮುಖಂಡ ಎಚ್.ಎ.ಉಮಾಪತಿ, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಸದಸ್ಯರಾದ ಎಸ್.ಆರ್. ಮಂಜುನಾಥ್, ಮಾತನಾಡಿದರು. ಕಾರ್ಯಕ್ರಮದಲ್ಲಿ ಹೊನ್ನಾಳಿ ಪುರಸಭೆ ಅಧ್ಯಕ್ಷೆ ಸುಮಾ ಮಂಜುನಾಥ್ ಇಂಚರಾ, ಎಸ್.ಎಚ್.ನರಸಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಕರಿಬಸಪ್ಪ, ಗ್ರಾ.ಪಂ.ಸದಸ್ಯರಾದ ಚಂದ್ರಮ್ಮ, ಡಿ.ಬಿ.ಶ್ರೀನಿವಾಸ್, ಕರಿಯಮ್ಮ, ಡಿ.ಟಿ.ಗೌರಮ್ಮ, ಎಸ್.ಕೆ. ಕರಿಯಪ್ಪ, ಎ.ಕೆ. ಅಣ್ಣಪ್ಪ, ಎಚ್.ಆರ್.ರಾಕೇಶ್,ರೈತ ಮುಖಂಡ ಕರಿಬಸಪ್ಪ,ಜಗದೀಶ್, ಪ್ರಧಾನ ಅರ್ಚಕ ರಾಜುಸ್ವಾಮಿ, ತಹಸೀಲ್ದಾರ್ ತಿರುಪತಿ ಪಾಟೀಲ್, ಮುಂತಾದವರಿದ್ದರು. ಕ್ಷೇತ್ರದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲಾಗಿತ್ತು.ಪ್ರಧಾನಿ ಮೋದಿ ಎಲ್ಲ ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾದರಿ: ಶಾಸಕ ರೇಣುಕಾಚಾರ್ಯ