ಆಸ್ಪತ್ರೆ ಕಟ್ಟಡಕ್ಕೆ ಬೆಟ್ಟದಲ್ಲಿ ಜಾಗವೇ ಸಿಗುತ್ತಿಲ್ಲ: ಒಂದುವರೆ ವರ್ಷವಾದರು ಆರಂಭವಾಗದ ಕಾಮಗಾರಿ

By Govindaraj S  |  First Published Jun 4, 2022, 9:17 PM IST

ಅದು ಆ ಕಾಡಂಚಿನ ಜನರ ಬಹು ವರ್ಷಗಳ ಬೇಡಿಕೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆರಿಸುವ ಭರವಸೆ ಕೊಟ್ಟಿದ್ದರು.


ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜೂ.04): ಅದು ಆ ಕಾಡಂಚಿನ ಜನರ ಬಹು ವರ್ಷಗಳ ಬೇಡಿಕೆ. ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆರಿಸುವ ಭರವಸೆ ಕೊಟ್ಟಿದ್ದರು. 30 ಬೆಡ್ ಆಸ್ಪತ್ರೆಯಾಗಿ ಈಗಾಗಲೇ ಘೋಷಣೆ ಕೂಡ ಆಗಿದೆ. ಆದರೆ ಒಂದೂವರೆ ವರ್ಷದಿಂದಲೂ ಕೂಡ ಆಸ್ಪತ್ರೆ ಮೇಲ್ದರ್ಜೆ ಮಾಡಲೂ ಪ್ರಯತ್ನ ಪಟ್ಟರು ಸಾಧ್ಯವಾಗ್ತಿಲ್ಲ. ಆಸ್ಪತ್ರೆ ನಿರ್ಮಾಣಕ್ಕೆ ನಾಲ್ಕು ಎಕರೆ ಜಾಗದ ಅವಶ್ಯಕತೆಯಿದೆ. ಆದ್ರೆ ಪ್ರಾಧಿಕಾರದ ಅಧಿಕಾರಿಗಳು ಜಮೀನು ಮಂಜೂರು ಮಾಡಿಕೊಡ್ತಿಲ್ಲ.ಇದರಿಂದ ಜನರ ಬೇಡಿಕೆ ಕನಸಾಗಿ ಉಳಿದುಕೊಳ್ತಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Tap to resize

Latest Videos

undefined

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ 18ಕ್ಕೂ ಹೆಚ್ಚು ಕಾಡಂಚಿನ ಗ್ರಾಮಗಳಿಗೆ ಒಂದೇ ಪ್ರಾಥಮಿಕ ಆರೋಗ್ಯ ಕೇಂದ್ರ. ಈ ಗ್ರಾಮಗಳ ಜನರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾದರಂತು ದೇವರೆ ಗತಿ. ಯಾವ ಸಮಯದಲ್ಲಾದರು ಸರಿ ಮಹದೇಶ್ವರ ಬೆಟ್ಟದಲ್ಲಿರುವ ಆಸ್ಪತ್ರೆಗೆ ಬರಬೇಕು. ಕಾಡು ಪ್ರಾಣಿಗಳ ಲೆಕ್ಕಿಸದೆ ಜನರು ರಾತ್ರಿಯೂ ಕೂಡ ಡೋಲಿ ಕಟ್ಟಿಕೊಂಡು ರೋಗಿಗಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸ್ತಿರೋದು ಸಾಮಾನ್ಯ ಸಂಗತಿಯಾಗಿದೆ. ಮಲೆ ಮಹದೇಶ್ವರ ಬೆಟ್ಟದ ಗ್ರಾ.ಪಂ.ವ್ಯಾಪ್ತಿಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ವಾಸ ಮಾಡ್ತಿದ್ದಾರೆ. 

Chamarajanagar: ಮರದ ಕೆಳಗೆ ಮಕ್ಕಳಿಗೆ ಪಾಠ: ಸ್ಟೋರ್ ರೂಮ್‌ನಲ್ಲಿ ತರಗತಿ!

ಪ್ರತಿ ನಿತ್ಯ ಮಲೆ ಮಹದೇಶ್ವರರ ದರ್ಶನಕ್ಕೆ 25 ಸಾವಿರಕ್ಕೂ ಹೆಚ್ಚು ಜನ ಬರ್ತಾರೆ. ಒಂದು ವೇಳೆ ಆರೋಗ್ಯ ಹದಗೆಟ್ರೆ, ಇಲ್ಲಾ ಅಪಘಾತ ಸಂಭವಿಸಿದ್ರೆ ತೋರಿಸಲು ಇರುವುದು ಇದು ಒಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ಇದನ್ನು ಬಿಟ್ಟರೆ ತಮಿಳುನಾಡಿನ ಮೆಟ್ಟೂರು ಆಸ್ಪತ್ರೆಗೆ ತೆರಳಬೇಕು ಇಲ್ಲಾ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಅಥವಾ ದೂರದ ಮೈಸೂರು ಆಸ್ಪತ್ರೆಗೆ ಸೇರಿಸಬೇಕು. ರಾತ್ರಿ ವೇಳೆ ಬೆಟ್ಟ ಗುಡ್ಡಗಳಿಂದ ನಡೆದುಕೊಂಡು ಅಥವಾ ರೋಗಿಗಳನ್ನು ಹೊತ್ತಿಕೊಂಡು ಬಂದು ಆಸ್ಪತ್ರೆಗೆ ತೋರಿಸಿ ಸ್ಥಳೀಯರು ಚಿಕಿತ್ಸೆ ಕೊಡಿಸ್ತಾರೆ. 

ಆದ್ರೆ ಅಧುನಿಕ ಸೌಕರ್ಯದ ಕೊರತೆ ಹಿನ್ನಲೆ, ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕೆಂದು ಬಹಳ ವರ್ಷಗಳಿಂದಲೂ ಕೂಡ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡ್ತಾನೆ ಬಂದಿದ್ದರು. ಈ ನಡುವೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಶಂಕು ಸ್ಥಾಪನೆಗೆ ಬಂದ ವೇಳೆ ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವಂತೆ ಸೂಚಿಸಿದ್ದರು. 

ಆದರೆ ಯಡಿಯೂರಪ್ಪ ಬಂದು ಹೋಗಿ ಒಂದುವರೆ ವರ್ಷಗಳಾದರು ಕೂಡ ಮಲೆ ಮಹದೇಶ್ವರ ಬೆಟ್ಟದ  ಪ್ರಾಧಿಕಾರದ  ಅಧಿಕಾರಿಗಳು ಇನ್ನೂ ಸ್ಥಳವನ್ನೇ ಗುರುತಿಸಿಲ್ಲ. ಇವರು ಸ್ಥಳ ಗುರುತಿಸಿ ಅದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸೋದು ಯಾವಾಗ ಆಸ್ಪತ್ರೆ ನಿರ್ಮಾಣ ಮಾಡೋದು ಯಾವಾಗ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಇನ್ನೂ ಆಸ್ಪತ್ರೆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದ್ರೆ ಹೊಸ ಆಸ್ಪತ್ರೆ ನಿರ್ಮಿಸಲು ನಾಲ್ಕು ಎಕರೆ ಜಾಗದ ಅವಶ್ಯಕತೆಯಿದೆ. ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ಅವರು ನಮ್ಮ ಮನವಿಗೆ ಸ್ಪಂದಿಸಿಲ್ಲ. 

ಮಳೆ ನೀರು ಬಂದ್ರೆ ತುಂಬಿಕೊಳ್ಳುತ್ತೆ ಜ್ಞಾನ ದೇಗುಲ: ಶಾಲೆಯ ಕೊಠಡಿಗೆ ನೀರು ರಜೆ ಫಿಕ್ಸ್!

ಜೊತೆಗೆ ಸ್ಥಳ ಗುರುತಿಸುವ ಯಾವ ಕೆಲಸವು ಆಗಿಲ್ಲ ಬೆಟ್ಟದಲ್ಲಿ ಎಲ್ಲೂ ಕೂಡ ನಾಲ್ಕು ಎಕರೆ ಸ್ಥಳವಿಲ್ಲ ಅಂತಾ ಹೇಳ್ತಿದ್ದಾರೆ. ನಾವು ಈಗಾಗಲೇ ಪ್ರಸ್ತಾವಣೆ ಕೂಡ ಸಲ್ಲಿಸಿದ್ದೇವೆ. ಒಂದು ವೇಳೆ ಸ್ಥಳ ಕೊಟ್ರೆ ಆಸ್ಪತ್ರೆ ಆದಷ್ಟು ತ್ವರಿತವಾಗಿ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡ್ತೀವಿ. ಹಳೇ ಕಟ್ಟಡದಲ್ಲಿ ಮೇಲ್ಬಾಗದಲ್ಲಿ ಆಸ್ಪತ್ರೆ ನಿರ್ಮಿಸುವುದು ಸೂಕ್ತವಲ್ಲ ಜಾಗದ ಅವಶ್ಯಕತೆಯಿದೆ ಅಂತಾ ಹಾರಿಕೆ ಉತ್ತರ ಕೊಡ್ತಾರೆ. ಒಟ್ಟಿನಲ್ಲಿ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆರೋಗ್ಯ ಇಲಾಖೆ ಸರ್ಕಾರದ ಅಂಗಗಳೇ ಆದ್ರು ಸಮನ್ವಯದ ಕೊರತೆಯಿಂದ ಆಸ್ಪತ್ರೆ ಮೇಲ್ದರ್ಜೆಗೆ ಹೋಗ್ತಿಲ್ಲ. ಜನರ ಅಳಲು ಕೇಳುವವರು ಯಾರೂ ಅಂತಾ ಜನರು ಶಾಪ ಹಾಕ್ತಿದ್ದಾರೆ.

click me!