Chikkamagaluru; ತಾಲೂಕು ಘೋಷಣೆಯಾಗಿ 3ವರ್ಷದ ಬಳಿಕ ತಹಶೀಲ್ದಾರ್ ಅಧಿಕಾರ ಸ್ವೀಕಾರ

Published : Jun 04, 2022, 05:55 PM IST
Chikkamagaluru; ತಾಲೂಕು ಘೋಷಣೆಯಾಗಿ 3ವರ್ಷದ ಬಳಿಕ ತಹಶೀಲ್ದಾರ್ ಅಧಿಕಾರ ಸ್ವೀಕಾರ

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿಗೆ ಕೊನೆಗೂ ಪೂರ್ಣ ಪ್ರಮಾಣದ ತಹಶೀಲ್ದಾರ್ ನೇಮಕವಾಗಿದ್ದಾರೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜೂ.4) : ಆ ಜನರು  ತಾಲೂಕಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಂದ್ ,ಚುನಾವಣಾ ಬಹಿಷ್ಕಾರ ಮಾಡಿ ಸರ್ಕಾರದ ಗಮನ ಸೆಳೆದು ತಾಲೂಕು ಘೋಷಣೆ ಆಯಿತು. ಆದರೆ ಆಡಳಿತಾತ್ಮಕ ಅನುಮೋದನೆಗೆ  ಮೀನಾಮೇಷ ಶುರುವಾಯಿತು. ಅದು ಮುಗಿದ 6 ತಿಂಗಳು ಬಳಿಕ ಆ ತಾಲೂಕಿಗೆ ಹೊಸ ದಂಡಾಧಿಕಾರಿ ಆಗಮಿಸಿ ಅಧಿಕಾರ ಸ್ವೀಕರಿಸಿದ್ದಾರೆ.

ತಹಶೀಲ್ದಾರ್ ಬಂದ್ರು, ನಿಟ್ಟುಸಿರು ಬಿಟ್ಟು ಕಳಸ ತಾಲೂಕಿನ ಜನ: ನೂತನ ತಾಲೂಕು ಆಗಿ ಘೋಷಣೆಯಾದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದಲೂ ಓರ್ವ ಪೂರ್ಣ ಪ್ರಮಾಣದ ತಹಶೀಲ್ದಾರ್ ಇರಲಿಲ್ಲ. ಜನ ಈ ಸುಖಕ್ಕೆ ತಾಲೂಕು ಕೇಂದ್ರ ಬೇಕಿತ್ತಾ ಎಂದು ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದರು.

Belagavi; ಪತ್ನಿ ಸೀಮಂತಕ್ಕೆ ಬಂದಿದ್ದ ಯೋಧ ಅಪಘಾತದಲ್ಲಿ ದುರ್ಮರಣ!

ಆದರೆ, ತಾಲೂಕಿಗೆ ನಂದಕುಮಾರ್ ಪೂರ್ಣ ಪ್ರಮಾಣದ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದು ಜನ  ಸದ್ಯ ಮೂಡಿಗೆರೆಗೆ ಅಲೆಯೋದು ತಪ್ಪುತ್ತೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಕಳಸ ತಾಲೂಕು ಕೇಂದ್ರವಾಗುವ ಮೊದಲು ಕಳಸದ ಜನ ಮೂಡಿಗೆರೆಯನ್ನೇ ಆಶ್ರಯಿಸಿಕೊಂಡಿದ್ದರು. ಕಳಸದಿಂದ ಮೂಡಿಗೆರೆಗೆ ಅಂದಾಜು 60 ಕಿ.ಮೀ. ಮೂಡಿಗೆರೆಗೆ ಬಂದು ಹೋಗಲು ಒಂದು ದಿನ ಬೇಕು. ಬಂದರೂ ಅಂದು ಅಧಿಕಾರಿಗಳು ಸಿಕ್ಕರೆ ಕೆಲಸ ಆದಂತೆ. ಇಲ್ಲವಾದರೆ ಮತ್ತೊಂದು ದಿನ ಬರಬೇಕು. ಒಂದು ದಿನ ಸಂಪೂರ್ಣ ವೇಸ್ಟ್ ಆಗುತ್ತಿತ್ತು. 

Belagavi; RCF ಕಂಪನಿಯ 900 ಚೀಲ ರಸಗೊಬ್ಬರ ಕದ್ದಿದ್ದವರು ಅರೆಸ್ಟ್

ಕೂಲಿ ಕಾರ್ಮಿಕರೇ ಹೆಚ್ಚು ಇರುವ ತಾಲೂಕು: ಕೂಲಿ ಕಾರ್ಮಿಕರೇ ಹೆಚ್ಚಿರೋ ಕಳಸದಲ್ಲಿ ಜನ ಸರ್ಕಾರಿ ಕೆಲಸಗಳಿಗೆ ಪರಿಪಾಟಲು ಅನುಭವಿಸುತ್ತಿದ್ದರು. ಕಳಸವನ್ನು ತಾಲೂಕು ಕೇಂದ್ರವನ್ನಾಗಿಸಿ ಎಂಬ ದಶಕಗಳ ಹೋರಾಟಕ್ಕೆ 2019ರಲ್ಲಿ ಫಲ ಸಿಕ್ಕಿತ್ತು. ಆದರೆ, ತಾಲೂಕು ಕಚೇರಿ ಓಪನ್ ಆಗಿದ್ದು ಜನವರಿಯಲ್ಲಿ. ತಾಲೂಕು ಕೇಂದ್ರವಾದರೂ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಇಲ್ಲದಿರೋದು ಕೆಲಸ ಕಾರ್ಯಗಳಿಗೆ ಮತ್ತದೇ ಸಂಕಷ್ಟ ಎದುರಾಗಿತ್ತು. 

ಜನ ಮೂಡಿಗೆರೆಗೆ ಅಲೆಯೋದು ತಪ್ಪಿರಲಿಲ್ಲ. ಹಾಗಾಗಿ, ಟೀಕೆಗಳು ವ್ಯಕ್ತಿವಾಗಿದ್ದವು. ವಾರಕ್ಕೆರಡು ದಿನ ಮೂಡಿಗೆರೆ ತಹಶೀಲ್ದಾರ್ ಕಳಸದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಸಮರ್ಪಕವಾಗಿ ಜಾರಿಗೆ ಬಂದಿರಲಿಲ್ಲ. ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕಿಕೊಂಡೇ ಮೂಡಿಗೆರೆಗೆ ಅಲೆಯುತ್ತಿದ್ದರು.

Chitradurga ಏತ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ

ಇದೀಗ, ನಂದಕುಮಾರ್ ಕಳಸ ತಾಲೂಕಿನ  ಪೂರ್ಣ ಪ್ರಮಾಣದ ತಹಶೀಲ್ದಾರ್ ಆಗಿ ಅಧಿಕಾರಿ ಸ್ವೀಕಾರ ಮಾಡಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಮುಂದೆ ಮೂಡಿಗೆರೆ ಅಲೆಯೋದು ತಪ್ಪುತ್ತೆ ಎಂದು ಖುಷಿಪಟ್ಟಿದ್ದಾರೆ. ಪೂರ್ಣ ಪ್ರಮಾಣದ ತಹಶೀಲ್ದಾರ್ ಏನೋ ನೇಮಕವಾಗಿದ್ದಾರೆ. ತಾಲೂಕು ಕಚೇರಿಯಲ್ಲಿ ಇನ್ನು ಹಲವು ಅಧಿಕಾರಿಗಳ ಅವಶ್ಯಕತೆ ಇದೆ. ಆದರೆ, ಇವರು ಎಷ್ಟು ದಿನ ಇರುತ್ತಾರೋ ಎಂಬ ಪ್ರಶ್ನೆ ಕೂಡ ಸ್ಥಳಿಯರಲ್ಲಿ ಮೂಡಿದೆ.

PREV
Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?