ಕೋಲಾರದಲ್ಲಿ ಸಿದ್ದರಾಮಯ್ಯ ಅಲೆ ಇಲ್ಲ

Published : Mar 16, 2023, 05:52 AM IST
 ಕೋಲಾರದಲ್ಲಿ  ಸಿದ್ದರಾಮಯ್ಯ ಅಲೆ ಇಲ್ಲ

ಸಾರಾಂಶ

ಕೋಲಾರದಲ್ಲಿ ಸಿದ್ದರಾಮಯ್ಯನವರ ಅಲೆಯೇ ಇಲ್ಲ, ಕೋಲಾರ ಕ್ಷೇತ್ರಕ್ಕೆ ಹುಲಿಯನ್ನು ಬಿಡಬೇಕೋ ಸಿಂಹವನ್ನು ಬಿಡಬೇಕೋ ಎಂಬುದನ್ನು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೇವೆ. ಸೂಕ್ತ ಸಮಯಕ್ಕೆ ಸೂಕ್ತ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರ ಸಚಿವ ಮುನಿರತ್ನ ತಿಳಿಸಿದರು.

 ಕೋಲಾರ : ಕೋಲಾರದಲ್ಲಿ ಸಿದ್ದರಾಮಯ್ಯನವರ ಅಲೆಯೇ ಇಲ್ಲ, ಕೋಲಾರ ಕ್ಷೇತ್ರಕ್ಕೆ ಹುಲಿಯನ್ನು ಬಿಡಬೇಕೋ ಸಿಂಹವನ್ನು ಬಿಡಬೇಕೋ ಎಂಬುದನ್ನು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೇವೆ. ಸೂಕ್ತ ಸಮಯಕ್ಕೆ ಸೂಕ್ತ ವ್ಯಕ್ತಿಯನ್ನೇ ಅಭ್ಯರ್ಥಿಯನ್ನಾಗಿ ಘೋಷಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರ ಸಚಿವ ಮುನಿರತ್ನ ತಿಳಿಸಿದರು.

ನಗರದ ಹೊರವಲಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಫಲಾನುಭವಿಗಳ ಸಮಾವೇಶ ರಾಜ್ಯಾದ್ಯಾಂತ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಜನರಿಗೆ ಸರ್ಕಾರ ನೀಡಿರುವ ಯೋಜನೆಗಳ ಅಂಕಿ ಅಂಶಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಮತ್ತು ಜನರಿಗೆ ನೀಡಿರುವ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.

ಟಿಪ್ಪುವನ್ನು ಕೊಂದಿದ್ದು ಉರಿಗೌಡ

ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದು ಉರಿಗೌಡರು, ಈ ವರೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮರೆಮಾಚಿದ್ದ ಸತ್ಯಾಂಶ ನಮ್ಮ ಸಚಿವ ಆರ್‌.ಅಶೋಕ್‌ ಮತ್ತು ಅಶ್ವತ್ಥನಾರಾಯಣ ಅಧ್ಯಯನ ಮಾಡಿ ಹೊರ ತಂದಿದ್ದಾರೆ. ಆದರೆ ಕುಮಾರಸ್ವಾಮಿಗೆ ಇನ್ನೂ ಯಾಕೆ ಅನುಮಾನ ಕಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.

ಸೋಮಣ್ಣರಿಗೆ ಅಸಮಾಧಾನದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನಿಗೆ, ಸೋಮಣ್ಣನವರಿಗೆ ಅಸಮಾಧಾನ ಇದೆ ಎಂದು ನಿಮಗ್ಯಾರು ಹೇಳಿದ್ದು, ಅವರ ಕಣ್ಣಲ್ಲಿ ನೀರು ಬಂದಿದೆ

ಕಾಂಗ್ರೆಸ್‌ಗೆ ಅಧಿಕಾರ ಖಚಿತ

ಹಾವೇರಿ (ಮಾ.13) : ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಮುಂದಿನ ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೆ ಸತ್ಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದರು.

ಹಾವೇರಿ(Haveri)ಯಲ್ಲಿ ನಡೆದ ಪ್ರಜಾಧ್ವನಿಯಾತ್ರೆ(Prajadhwani yatre) ಮಾತನಾಡಿದ ಅವರು, ಬಿಜೆಪಿಯವರು ವಚನ ಭ್ರಷ್ಟರಾಗಿದ್ದಾರೆ. ನಾವು ಕೊಟ್ಟ ಭರವಸೆ ಈಡೇರಿಸಲು ಆಗದಿದ್ರೆ ಒಂದು ಸೆಕೆಂಡ್ ಇರಲ್ಲ, ಅಧಿಕಾರ ಬಿಟ್ಟು ಹೋಗ್ತಿವಿ ಎಂದು ಹೇಳಿದ್ದ ಬಿಜೆಪಿಯವ್ರು ಒಂದು ಭರವಸೆಯೂ ಈಡೇರಿಸಿಲ್ಲ. ಇವರ ಮನೆ ಹಾಳಾಗ ಭರವಸೆ ಈಡೇರಿಸಿದಿದ್ರೆ ಯಾಕೆ ಇರಬೇಕು ಅಧಿಕಾರದಲ್ಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿ ಸರ್ಕಾರದ ತೆರಿಗೆ ನೀತಿ​ಯಿಂದ ಜನರ ಬದುಕು ದುಸ್ತರ : ಮಧು ಬಂಗಾರಪ್ಪ

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಮತ ನೀಡಿ. ನೀವು ಕೊಡುವ ವೋಟು ನಮಗೆ ಕೊಟ್ಟಹಾಗೆ. ನಾನು ಅಧಿಕಾರದಲ್ಲಿದ್ದಾಗ ಬಡವರಿಗೆ 15 ಲಕ್ಷ ಮನೆ ಕೊಟ್ಟೆ. ಆದರೆ ಇವರು ಒಂದೇ ಒಂದು ಮನೆ ಕೊಡಲಿಲ್ಲ. ಬಡವರಿಗೆ ಸುರು ಕೊಡಲು ಆಗದಿದ್ರೆ ಕೊಟ್ಟ ಮಾತಿನಂತೆ ಒಂದು ಸೆಕೆಂಡ್  ಅಧಿಕಾರದಲ್ಲಿ ಇರಬಾರದು. ಇದು ಬಡವರ ಪರ ಸರ್ಕಾರ ಅಲ್ಲ. ಇಂಥ ಭ್ರಷ್ಟ ಸರ್ಕಾರದಲ್ಲಿ ಬಡವರು ಬದುಕು ದುಸ್ತರ ಎಂದರು.

ಬಿಜೆಪಿಯವ್ರು ನಾವು ಅಡುಗೆ ಮಾಡಿಟ್ಟಮೇಲೆ ಬಡಿಸಲು ಬರುವ ಗಿರಾಕಿಗಳು ಇದ್ದಹಾಗೆ. ಮಂಡ್ಯ ಹೆದ್ದಾರಿ ಮಂಜೂರು ಮಾಡಿದ್ದು ನಾನು ಸಿಎಂ ಆಗಿದ್ದಾಗ.    ಆದರೆ ನಾವು ಮಾಡಿದ್ದನ್ನೇ ಇವತ್ತು ಉದ್ಘಾಟನೆ ಮಾಡ್ತಿದ್ದಾರೆ. ಅದಕ್ಕಾಗಿ ಮಂಡ್ಯಕ್ಕೆ ಮೋದಿ(Narendra Modi)ಯವರನ್ನ ಕರೆಕೊಂಡು ಬರುತ್ತಾರೆ, ಇವರಿಗೆ ಯಾರಿಗೂ ಮುಖವಿಲ್ಲ, ಇವರು 40% ಗಿರಾಕಿಗಳು.  ಕಂದಾಯ ಗ್ರಾಮ ಮಾಡಲು ಕಾನೂನು ತಿದ್ದುಪಡಿ ಮಾಡಿದ್ದು ನಮ್ಮ ಸರಕಾರ. ಅದರ ಹಕ್ಕು ಪತ್ರ ಹಂಚಲು ಮೋದಿ ಯವರು ಸೇಡಂಗೆ ಹೋಗಿದ್ರು. ಅದಕ್ಕೆ ನಾನು ಹೇಳೋದು ಈ ಬಿಜೆಪಿಯವರು ಅಡುಗೆ ಮಾಡಿ ಇಟ್ಟ ಮೇಲೆ ಬಡಿಸಲು ಬರುವ ಗಿರಾಕಿಗಳು. ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮತಾಂಧ ಟಿಪ್ಪುವನ್ನು ಕೊಂದ ದೊಡ್ಡ ನಂಜೇಗೌಡ, ಉರಿಗೌಡರ ಹೆಸರು ತೆರವುಗೊಳಿಸಿದ್ದು ತಪ್ಪು: ಸಿ.ಟಿ.ರವಿ

PREV
Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!