ಮದ್ದೂರು ತಮಿಳು ಕಾಲೋನಿ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ

By Kannadaprabha NewsFirst Published Mar 16, 2023, 5:48 AM IST
Highlights

ಕಳೆದ 43 ವರ್ಷಗಳಿಂದ ಯಾವೊಂದು ಮೂಲ ಸೌಲಭ್ಯ ಕಲ್ಪಿಸದೆ ಸುಳ್ಳು ಭರವಸೆ ನೀಡುತ್ತಾ ವಂಚಿಸಿಕೊಂಡು ಬರುತ್ತಿರುವ ರಾಜಕಾರಣಿಗಳ ಧೋರಣೆ ಖಂಡಿಸಿ 2023ರ ಚುನಾವಣೆಯಲ್ಲಿ ಯಾರಿಗೂ ಮತ ನೀಡದೆ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಕರ್ನಾಟಕ ಜನಶಕ್ತಿ ಸಂಘಟನೆಯ ವೈದುನ ಹೇಳಿದರು.

 ಮಂಡ್ಯ :  ಕಳೆದ 43 ವರ್ಷಗಳಿಂದ ಯಾವೊಂದು ಮೂಲ ಸೌಲಭ್ಯ ಕಲ್ಪಿಸದೆ ಸುಳ್ಳು ಭರವಸೆ ನೀಡುತ್ತಾ ವಂಚಿಸಿಕೊಂಡು ಬರುತ್ತಿರುವ ರಾಜಕಾರಣಿಗಳ ಧೋರಣೆ ಖಂಡಿಸಿ 2023ರ ಚುನಾವಣೆಯಲ್ಲಿ ಯಾರಿಗೂ ಮತ ನೀಡದೆ ಚುನಾವಣೆಯನ್ನು ಬಹಿಷ್ಕರಿಸುತ್ತಿರುವುದಾಗಿ ಕರ್ನಾಟಕ ಜನಶಕ್ತಿ ಸಂಘಟನೆಯ ವೈದುನ ಹೇಳಿದರು.

ಹಲವು ಪಕ್ಷದಗಳು ಚುನಾವಣೆಗಳಲ್ಲಲಿ ಗೆಲ್ಲಲು ನಮಗೆ ಸುಳ್ಳುಗಳನ್ನು ಹೇಳುತ್ತಾ ಮೋಸ ಮಾಡುತ್ತಾ ಬಂದಿದ್ದಾರೆ. ನಂತರ ಗೆದ್ದು ಬಂದವರು ಇಂದಿಗೂ ಸಹ ಮೋಸ-ವಂಚನೆ ಮಾಡುತ್ತಾ ಬರುತ್ತಿರುವುದು ದ ಮೇಲೆ ಭ್ರಷ್ಟಾಚಾರವೆ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Latest Videos

ಕಾಲೋನಿಯಲ್ಲಿ ಮೂಲ ಸೌಕರ್ಯಗಳಿಲ್ಲ. ಶೌಚಾಲಯಗಳೂ ಇಲ್ಲ. ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯಗಳನ್ನು ಹಣ ಕೊಟ್ಟು ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನಮ್ಮ ಬಳಿ ಬಂದು ನಮಗೆ ಮತ ನೀಡಿ. ನಿಮಗೆ ಹಕ್ಕುಪತ್ರ, ಮೂಲ ಸೌಲಭ್ಯ ಕಲ್ಪಿಸುವ, ಮನೆಗಳನ್ನು ನಿರ್ಮಿಸುವುದಾಗಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ 76 ವರ್ಷಗಳಿಂದ ಹಣ, ಸಾರಾಯಿ, ಮಾಂಸ ನೀಡಿ ತಮ್ಮ ಕಪಿಮುಷ್ಠಿಗಳಿಂದ ಮತ ಬ್ಯಾಂಕ್‌ ಮಾಡಿಕೊಂಡು ನೂರಾರು ಕುಟುಂಬಗಳನ್ನು ಇಂದಿಗೂ ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ದೂರಿದರು.

ಮದ್ದೂರು ಕೆಇಬಿ ಮುಂಭಾಗದಲ್ಲಿರುವ ತಮಿಳು ಕಾಲೋನಿಯಲ್ಲಿ 114 ಕುಟುಂಬಗಳಿದ್ದು 700ಕ್ಕೂ ಹೆಚ್ಚು ಮತದಾರರು ಇರುವ ಈ ಶ್ರಮಿಕ ಜನಕ್ಕೆ ಅನ್ಯಾಯ, ಮೋಸ ಆಗುತ್ತಿದೆ. ಎಲ್ಲವನ್ನೂ ಇಲ್ಲಿಯವರೆಗೆ ಸಹಿಸಿಕೊಂಡಿದ್ದು ಸಾಕು. ಇನ್ನು ಮುಂದೆ ನೆಮ್ಮದಿಯ ಬದಕು ಕಾಣಲು ನಿರ್ಧರಿಸಿದ್ದೇವೆ ಎಂದರು.

ನಾವು ವಾಸಿಸುತ್ತಿರುವ ಭೂಮಿ ಮೇಲೆ ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿಲ್ಲ. ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗಿದೆ. ಭೂಮಿಯ ಹಕ್ಕುಪತ್ರ ಕೊಡಬೇಕೆಂಬ ಕಾರಣಕ್ಕೆ ಪ್ರಕರಣವಿದೆ ಎಂದು ಜನಪ್ರತಿನಿಧಿಗಳು ಸುಳ್ಳು ಹೇಳುತ್ತಾ ನಂಬಿಸಿಕೊಂಡು ಬರುತ್ತಿದ್ದಾರೆ. ನಾವು ನ್ಯಾಯಕ್ಕಾಗಿ ನಮ್ಮ ಬದುಕಿಗಾಗಿ ಹೋರಾಡುತ್ತಿದ್ದೇವೆ. ನಮ್ಮ ಹಕ್ಕುಗಳನ್ನು ಕಸಿದುಕೊಂಡಿರುವ ಭ್ರಷ್ಟವ್ಯವಸ್ಥೆಗೆ ಬಲಿಪಶುಗಳಾಗಿದ್ದೇವೆ ಎಂದು ಕಿಡಿಕಾರಿದರು.

ಕೂಡಲೇ ರಾಜ್ಯ ಸರ್ಕಾರ ವಾಸ ಸ್ಥಳದ ಮನೆಗಳಿಗೆ ಹಕ್ಕುಪತ್ರ, ಮೂಲ ಸೌಲಭ್ಯಗಳನ್ನು ನೀಡಿ ನಮ್ಮ ಬಳಿ ಮತಯಾಚನೆ ಮಾಡಿ ಇಲ್ಲವೇ ನಮ್ಮ ಮತವನ್ನು ಯಾವುದೇ ಪಕ್ಷಕ್ಕೆ ನೀಡುವುದಿಲ್ಲ ಎಂದು ನೇರವಾಗಿ ಹೇಳಿದರು.

ಗೋಷ್ಠಿಯಲ್ಲಿ ಚಂದ್ರಶೇಖರ್‌, ಗಂಗಾ, ಉಮಾ, ಲತಾ, ಶಾರದಾ, ಮುನಿಯಮ್ಮ, ರೂಪಾ ಇತರರಿದ್ದರು.

ಸ್ಥಳೀಯರಿಗೆ ಟಿಕೆಟ್ ನೀಡಲು ಆಗ್ರಹ

 ಮೈಸೂರು :  ಮೈಸೂರು ಭಾಗದಲ್ಲಿ ಪ.ಪಂಗಡಕ್ಕೆ ಸೇರಿದ ನಾಯಕ ಸಮುದಾಯದ ಸುಮಾರು 15 ಲಕ್ಷ ಜನಸಂಖ್ಯೆಇದ್ದು ಕೇವಲ ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರ ಮಾತ್ರ ಪ. ಪಂಗಡಕ್ಕೆ ಮೀಸಲಾಗಿದ್ದು, ಈ ಕ್ಷೇತ್ರ ನಮ್ಮ ಕೈ ತಪ್ಪಿದರೆ ನಮ್ಮ ರಾಜಕೀಯ ಪ್ರಾತಿನಿಧ್ಯವೇ ಇರುವುದಿಲ್ಲ ಹಾಗೂ ವಿಧಾನಸಭೆಯಲ್ಲಿ ನಮ್ಮ ದನಿಯಾಗುವ ನಮ್ಮ ಪ್ರತಿನಿಧಿ ಇಲ್ಲದಂತಾಗುತ್ತದೆ ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಆತಂಕ ವ್ಯಕ್ತಪಡಿಸಿದರು.

ಈಗ ಪರಿಶಿಷ್ಟಪಂಗಡಕ್ಕೆ ಸೇರಿದ ಹೊರಜಿಲ್ಲೆಯ ಕೆಲವು ಅಕ್ರಮವಾಗಿ ಹಣ ಮಾಡಿರುವ  ಉದ್ಯಮಿಗಳು, ನಿವೃತ್ತ ನೌಕರರು, ಗಣಿ ಧಣಿಗಳು ಸುಮಾರು ಎರಡು ಮೂರು ವರ್ಷಗಳಿಂದ ಆಗಮಿಸಿ ಹಣವನ್ನು ಹಂಚಿ, ಯುವಕರು ಹಾಗೂ ಮುಗ್ಧ ಮತದಾರರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮೈಸೂರು ಭಾಗದಲ್ಲಿ ಪ. ಪಂಗಡದವರಿಲ್ಲ ಎಂದು ಬೊಬ್ಬೆ ಹೊಡೆದು ಹೋರಾಟ ಮಾಡುತ್ತಿದ್ದ ವ್ಯಕ್ತಿಗಳು ಈಗ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿ ಪ್ರಜ್ಞಾವಂತ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

click me!