ಕರ್ನಾಟಕಕ್ಕೆ ಬಸವಣ್ಣನ ನಾಡು ಎಂದು ಹೆಸರಿಟ್ಟರೇ ತಪ್ಪಿಲ್ಲ: ಸಾಹಿತಿ ಕುಂ.ವೀರಭದ್ರಪ್ಪ

By Kannadaprabha News  |  First Published Oct 28, 2023, 11:01 PM IST

ಕರ್ನಾಟಕಕ್ಕೆ ಬಸವಣ್ಣನ ನಾಡು ಎಂದು ಹೆಸರಿಟ್ಟರೇ ತಪ್ಪಿಲ್ಲ. ಕರ್ನಾಟಕ ವಿವಿಧ ಹಾದಿಯಲ್ಲಿ ಬದಲಾವಣೆ ಕಂಡಿದೆ. ಹಾಗಾಗಿ ಬಸವಣ್ಣನ ನಾಡು ಎಂದು ಹೆಸರಿಟ್ಟರೆ ತಪ್ಪಿಲ್ಲ ಎಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.


ಹೊಸಪೇಟೆ (ಅ.28): ಕರ್ನಾಟಕಕ್ಕೆ ಬಸವಣ್ಣನ ನಾಡು ಎಂದು ಹೆಸರಿಟ್ಟರೇ ತಪ್ಪಿಲ್ಲ. ಕರ್ನಾಟಕ ವಿವಿಧ ಹಾದಿಯಲ್ಲಿ ಬದಲಾವಣೆ ಕಂಡಿದೆ. ಹಾಗಾಗಿ ಬಸವಣ್ಣನ ನಾಡು ಎಂದು ಹೆಸರಿಟ್ಟರೆ ತಪ್ಪಿಲ್ಲ ಎಂದು ಸಾಹಿತಿ ಕುಂ. ವೀರಭದ್ರಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ನಾಡಿಗೆ ಶರಣ ಚಳವಳಿ ಅಪಾರ ಕೊಡುಗೆ ನೀಡಿದೆ. 12ನೇ ಶತಮಾನದಲ್ಲಿ ಶರಣರು ಹಾಗೂ ಬಸವಣ್ಣನವರ ಚಳವಳಿಯನ್ನು ನಾವು ಮರೆಯುವಂತಿಲ್ಲ. ಹಾಗಾಗಿ ಸಚಿವ ಎಂ.ಬಿ. ಪಾಟೀಲ್‌ ಅವರು ಬಸವಣ್ಣನ ನಾಡು ಎಂದು ಕೋರಿದ್ದರೆ ಇದರಲ್ಲಿ ತಪ್ಪಿಲ್ಲ. ಇದಕ್ಕೆ ನನ್ನ ಸಹಮತ ಇದೆ ಎಂದರು.

ಕರ್ನಾಟಕದಲ್ಲಿ ಹಲವು ಜಿಲ್ಲೆಗಳಿಗೆ ಮಹನೀಯರ ಹೆಸರುಗಳನ್ನು ಇಡಬಹುದು. ಆ ಜಿಲ್ಲೆ, ಪ್ರದೇಶಕ್ಕೆ ಅವರ ಕೊಡುಗೆ ಪರಿಗಣಿಸಿ ಹೆಸರು ಇಡಬಹುದು. ಆಂಧ್ರಪ್ರದೇಶ, ತೆಲಂಗಾಣದಲ್ಲಿ ಈಗಾಗಲೇ ಈ ಕೆಲಸ ಮಾಡಲಾಗಿದೆ. ಹಾಗಾಗಿ ಕರ್ನಾಟಕದಲ್ಲೂ ಜಿಲ್ಲೆಗಳಿಗೆ ಮಹನೀಯರ ಹೆಸರಿಡಬೇಕು. ವಿಜಯಪುರ ಜಿಲ್ಲೆಗೆ ಬಸವಣ್ಣನ ಜಿಲ್ಲೆ, ಮೈಸೂರಿಗೆ ಕುವೆಂಪು ಜಿಲ್ಲೆ, ವಿಜಯನಗರಕ್ಕೆ ಪ್ರೌಢದೇವರಾಯ ಜಿಲ್ಲೆ, ಕೋಲಾರಕ್ಕೆ ಬಂಗಾರದ ಜಿಲ್ಲೆ, ಬಳ್ಳಾರಿಗೆ ಹಂಡೆ ಹನುಮಪ್ಪ ನಾಯಕ ಜಿಲ್ಲೆ, ಧಾರವಾಡಕ್ಕೆ ದ.ರಾ. ಬೇಂದ್ರೆ ಜಿಲ್ಲೆ ಎಂದು ಹೆಸರಿಡಬೇಕು. ಇದರಿಂದ ಆಯಾ ಜಿಲ್ಲೆ ಘನತೆ ಹೆಚ್ಚಿಸುತ್ತದೆ ಎಂದರು.

Latest Videos

undefined

ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ

ಇಂಡಿಯಾ ಹೆಸರು ಬದಲಾವಣೆ ಸರಿಯಲ್ಲ: ಈಗ ಇಂಡಿಯಾ ದೇಶಕ್ಕೆ ಭಾರತ ಎಂದು ಹೆಸರು ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಈಗಾಗಲೇ ಇಂಡಿಯಾ ಜನರ ಜೀವನದ ಜತೆಗೆ ಬೆರೆತು ಹೋಗಿದೆ. ಬ್ರಿಟಿಷರು ಹೆಸರಿಟ್ಟಿದ್ದಾರೆ ಎಂದು ಬದಲಿಸಲು ಹೋಗುವುದು ಕೇಂದ್ರ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಪ್ರತಿಪಕ್ಷಗಳು ಇಂಡಿಯಾ ಒಕ್ಕೂಟ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಆಲೋಚನೆ ತಳೆದಿದ್ದಾರೆ ಎಂದರು. ಸನಾತನದ ಧರ್ಮದ ಬಗ್ಗೆ ಈ ಹಿಂದೆಯೂ ಹಲವು ಬಾರಿ ವಿಮರ್ಶೆ ನಡೆದಿದೆ. ಹಲವರು ಹೇಳಿಕೆ ನೀಡಿದ್ದಾರೆ. ಇಂಡಿಯಾ ಒಕ್ಕೂಟದಲ್ಲಿರುವ ಡಿಎಂಕೆ ಪಕ್ಷದ ಉದಯನಿಧಿ ಸ್ಟಾಲಿನ್‌ ಹೇಳಿಕೆ ನೀಡಿದ್ದನ್ನೇ ನೆಪ ಮಾಡಿಕೊಂಡು ಪ್ರಧಾನಿ ಟೀಕೆ ಮಾಡಿದರು. ಹಾಗಾಗಿ ಅದು ದೊಡ್ಡ ಸುದ್ದಿಯಾಯಿತು. ಕೆಲವು ಗಂಭೀರ ವಿಷಯಗಳನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ: ಶ್ರೀರಾಮಸೇನೆ ಪ್ರಶ್ನೆ

ಹುಲಿ ಉಗುರು ಪ್ರಕರಣದಲ್ಲಿ ಬರೀ ಹಿಂದೂಗಳನ್ನೇ ಟಾರ್ಗೆಟ್‌ ಮಾಡಲಾಗುತ್ತಿದೆ. ಉಳಿದವರ ಮೇಲೂ ಕ್ರಮ ಕೈಗೊಳ್ಳಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿಕೆ ಸರಿಯಲ್ಲ. ಅವರು ಸುಸಂಸ್ಕೃತ ಕುಟುಂಬದಿಂದ ಬಂದಿದ್ದಾರೆ. ಈ ರೀತಿ ಆಲೋಚನೆ ಮಾಡುವುದು ಸರಿಯಲ್ಲ. ಅರಣ್ಯ ಇಲಾಖೆಯವರು ಕಾನೂನು ರಿತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು. ಹುಲಿ ಉಗುರು ಧರಿಸಿಕೊಂಡು ಹಣ ಉಳ್ಳವರು ಧಿಮಾಕು ಮಾಡುತ್ತಿದ್ದಾರೆ. ಇದೊಂದು ನಾಗರಿಕ ಸಮಾಜಕ್ಕೆ ಕಪ್ಪುಚುಕ್ಕೆಯಾಗಿದೆ. ವನ್ಯಜೀವಿಗಳ ಜತೆ ಚೆಲ್ಲಾಟವಾಡುವವರನ್ನು ನಾವು ಕ್ಷಮಿಸುವುದಿಲ್ಲ. ನಟ ಜಗ್ಗೇಶ್‌ ನಾನು ಮನೋರಂಜನೆ ನೀಡಿರುವೆ ಎಂದು ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಡಾ. ರಾಜ್‌ಕುಮಾರ, ಅಂಬರೀಶ್‌, ವಿಷ್ಣುವರ್ಧನ ನಿಜವಾದ ನಟರು. ಇವರು ಎಂದಿಗೂ ಯಾರನ್ನೂ ನೋಯಿಸಿಲ್ಲ ಎಂದರು.

click me!