ಕಲಾವಿದರಿಂದಲೇ ರಂಗ ಚಳುವಳಿ ಬೆಳೆಸುವ ಕೆಲಸವಾಗಬೇಕು: ನಟ ಮಂಡ್ಯ ರಮೇಶ್

By Kannadaprabha News  |  First Published Oct 21, 2023, 1:17 PM IST

ರಂಗಭೂಮಿಯಿಂದ ತಯಾರಾಗಿ ಹೋದ ಕಲಾವಿದರು ದೊಡ್ಡ ನಟರಾಗಿ ಜೀವನ ಕಂಡುಕೊಂಡ ಬಳಿಕ ಪುನಃ ರಂಗಭೂಮಿಗೆ ಮರಳಿ ಬಂದು ರಂಗ ಚಳುವಳಿಯನ್ನು ಕಟ್ಟಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಚಲನಚಿತ್ರ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅಭಿಪ್ರಾಯ ಪಟ್ಟರು.
 


ಬಾಳೆಹೊನ್ನೂರು (ಅ.21): ರಂಗಭೂಮಿಯಿಂದ ತಯಾರಾಗಿ ಹೋದ ಕಲಾವಿದರು ದೊಡ್ಡ ನಟರಾಗಿ ಜೀವನ ಕಂಡುಕೊಂಡ ಬಳಿಕ ಪುನಃ ರಂಗಭೂಮಿಗೆ ಮರಳಿ ಬಂದು ರಂಗ ಚಳುವಳಿಯನ್ನು ಕಟ್ಟಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದು ಚಲನಚಿತ್ರ ನಟ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅಭಿಪ್ರಾಯ ಪಟ್ಟರು. ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಂಗಭೂಮಿಯಲ್ಲಿ ಆಸಕ್ತಿ ಕಡಿಮೆಯಾಗಿ, ರಂಗಭೂಮಿ ಇಳಿಮುಖವಾಗುತ್ತಿದೆ ಎನ್ನುವಂತೆಯೇ ಇಲ್ಲ. ಇದು ತಪ್ಪು ಕಲ್ಪನೆ. 

ನನ್ನ 42 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಯುವಜನರು, ಮಕ್ಕಳು ರಂಗಭೂಮಿಗೆ ಬರಬೇಕು ಎಂಬ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಕಂಡುಕೊಂಡಿದ್ದೇನೆ. ರಂಗ ಚಳುವಳಿ ದೇಶದಲ್ಲಿ ಇನ್ನೂ ನಿಂತಿಲ್ಲ. ಇದನ್ನು ಅರಸಿ ಹಲವರು ಬರುತ್ತಿದ್ದಾರೆ. ಮೈಸೂರಿನ ನಟನಾ ರಂಗಶಾಲೆ, ನೀನಾಸಂ, ರಂಗಾಯಣ ಮುಂತಾದ ಕಡೆಗಳಲ್ಲಿ ನಡೆಯುವ ರಂಗಭೂಮಿಯ ಡಿಪ್ಲೋಮಾ ತರಗತಿಗಳಿಗೆ ಹಲವರು ಹೆಚ್ಚಾಗಿ ಬರುತ್ತಿದ್ದಾರೆ. ಇಂತಹ ತರಗತಿಗಳನ್ನು ಸಂಜೆ ಹೊತ್ತು ಹೆಚ್ಚಾಗಿ ನಡೆಸಬೇಕು ಎಂಬುದು ನಮ್ಮ ಬಯಕೆ. ಸಂಜೆ ವೇಳೆ ರಂಗಭೂಮಿ ತರಬೇತಿ ನಡೆಸಿದರೆ ರೈತರು, ವಿದ್ಯಾರ್ಥಿಗಳು, ಮಹಿಳೆ ಯರು, ಶಿಕ್ಷಕರು, ಉಪನ್ಯಾಸಕರು ಅವರ ಕೆಲಸ ಮುಗಿಸಿ ಬಂದು ರಂಗಭೂಮಿ ತರಬೇತಿ ಪಡೆಯಬಹುದಾಗಿದೆ. 

Tap to resize

Latest Videos

undefined

ರಾಜ್ಯದ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ ದಿಲ್ಲಿ ಕರ್ತವ್ಯ ಪಥ್‍ನಲ್ಲಿ ಉದ್ಯಾನವನ: ಸಂಸದ ರಾಘವೇಂದ್ರ

ಇಲ್ಲಿ ವೃತ್ತಿಪರವಾದ ತರಬೇತಿಯನ್ನು ಪಡೆಯಬಹುದು. ಇಂತಹ ತರಬೇತಿ ಪಡೆದ ಯುವಕರಿಂದಲೇ ಇಂದು ಬಾಳೆಹೊನ್ನೂರಿನಲ್ಲಿ ಕೃಷ್ಣೇಗೌಡರ ಆನೆ ಎಂಬ ನಾಟಕದ ಮೂಲಕ ಪ್ರದರ್ಶಿಸಲಾಗುತ್ತಿದೆ. ವಿವಿಧ ವೃತ್ತಿಗಳಲ್ಲಿ ತೊಡಗಿದವರು ತಮ್ಮ ವೃತ್ತಿಯಲ್ಲೂ ಸಹ ಇಲ್ಲಿನ ಕೌಶಲ್ಯ ಬಳಸಿ ಕೊಳ್ಳಲು ಸಾಧ್ಯವಿದೆ. ವಾರಾಂತ್ಯದ ದಿನಗಳಲ್ಲಿ ನಾನು ಹೆಚ್ಚಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇನೆ. ಅವರಿಗೆ ಭಾರತೀಯ ಪರಂಪರೆ, ಪಾಶ್ಚಾತ್ಯ, ಪೌರಾತ್ಯ ರಂಗಭೂಮಿ ಪರಂಪರೆ ಯನ್ನು ಶಾಸ್ತ್ರೋಕ್ತವಾಗಿ ಕಲಿಸುವ ಕೆಲಸ ಮಾಡಲಾಗುತ್ತಿದೆ. ಓರ್ವ ರಂಗಭೂಮಿ ಕಲಾವಿದನ ನಿಲುವು, ನಟನೆ, ಕೌಶಲ್ಯ, ಧ್ವನಿ ಏನು? ಪುರಾಣದ ಕಲ್ಪನೆ ಯಾಕೆ ಬೇಕು, ನಟನಿಗೆ ಏಕೆ ಐತಿಹ್ಯ ಗೊತ್ತಿರಬೇಕು? 

ಶಾಸಕ ಆರಗ ಜ್ಞಾನೇಂದ್ರರಿಗೆ ಹಣ ಬಲ ಅಹಂಕಾರ: ಕಿಮ್ಮನೆ ರತ್ನಾಕರ್‌ ಟೀಕೆ

ಇತಿಹಾಸ, ಪುರಾಣ, ವೈಜ್ಞಾನಿಕ, ಸಂಗೀತ, ಲಯ ಎಲ್ಲವನ್ನೂ ಕಲಿಸುವ ಕಾರ್ಯ ಮಾಡಲಾಗುತ್ತಿದೆ. ಇವುಗಳನ್ನೆಲ್ಲಾ ಒಳಗೊಂಡಿರುವುದೇ ರಂಗಕಲೆ ಎಂದರು. ರಂಗಭೂಮಿ ಎನ್ನುವುದು ಕೇವಲ ಒಬ್ಬರಿಂದಾಗುವ ಕೆಲಸವಲ್ಲ. ಇದರ ಹಿಂದೆ ಹಲವಾರು ಕೈಗಳ ಪರಿಶ್ರಮವಿರಬೇಕು. ಆಗ ಮಾತ್ರ ರಂಗಭೂಮಿ ಯಶಸ್ವಿಗೊಳ್ಳಲಿದೆ. ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರು, ರೈತರು ಎಲ್ಲರೂ ಒಗ್ಗೂಡಿ ರಂಗಭೂಮಿಗೆ ಬರಲು ವಿಪುಲ ಅವಕಾಶಗಳಿವೆ. ರಂಗಭೂಮಿಯ ಬಗ್ಗೆ ಹೇಳಿಕೊಡಲು ಗುರುಗಳ ಅವಶ್ಯಕತೆಯಿದ್ದು, ಹೇಳಿಸಿಕೊಳ್ಳಲು ವಿದ್ಯಾರ್ಥಿಗಳು ತಯಾರಿದ್ದಾರೆ ಎಂದರು.

click me!