ತುಮಕೂರು : ಬಸ್‌ ನಿಲ್ದಾಣದಲ್ಲಿ ಇಟ್ಟುಕೊಂಡಿದ್ದ ತರಕಾರಿ ಅಂಗಡಿ ತೆರವು

By Kannadaprabha News  |  First Published Jan 6, 2024, 9:25 AM IST

ತಾಲೂಕಿನ ಹಾಗಲವಾಡಿ ಹೋಬಳಿಯ ಅಳಿಲಘಟ್ಟ ಬಸ್‌ ನಿಲ್ದಾಣದಲ್ಲಿ ಇಟ್ಟುಕೊಂಡಿದ್ದ ತರಕಾರಿ ಅಂಗಡಿಗಳನ್ನು ಶುಕ್ರವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದರು


 ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿಯ ಅಳಿಲಘಟ್ಟ ಬಸ್‌ ನಿಲ್ದಾಣದಲ್ಲಿ ಇಟ್ಟುಕೊಂಡಿದ್ದ ತರಕಾರಿ ಅಂಗಡಿಗಳನ್ನು ಶುಕ್ರವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಪಿಡಿಒ ವಸಂತ್ ಮಾತನಾಡಿ, ಸುಮಾರು ದಿನಗಳಿಂದ ಅಂಗಡಿ ವ್ಯಾಪರಸ್ಥರಿಗೆ ನೋಟಿಸ್ ನೀಡಿದ್ದೆವು. ನೋಟಿಸ್ ನೀಡಿದರೂ ಯಾರು ಸಹ ಅಂಗಡಿಗಳನ್ನ ತೆರವು ಮಾಡಿರಲಿಲ್ಲ. ಆದ್ದರಿಂದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪೊಲೀಸರ ಸಹಕಾರದಿಂದ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ತರಕಾರಿ ಮಾಡುವ ವ್ಯಾಪರಸ್ಥರಿಗೆ ತೊಂದರೆ ಇಲ್ಲ. ರಸ್ತೆ ಪಕ್ಕದಲ್ಲಿ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ತರಕಾರಿ ವ್ಯಾಪರ ಮಾಡವುದಕ್ಕೆ ಆದೇಶ ಕೊಟ್ಟಿದ್ದೇವೆ ಎಂದ ಅವರು ಅಳಿಲಘಟ್ಟ ಬಸ್‌ನಿಲ್ದಾಣ ದಿನೇ ದಿನೆ ದೊಡ್ಡ ಸರ್ಕಲ್‌ ಅಗುತ್ತಿದೆ ವ್ಯಾಪರಸ್ಥರು ರಸ್ತೆಯ ಪಕ್ಕದಲ್ಲಿ ಇಟ್ಟುಕೊಂಡಿದ್ದರಿಂದ ಬಸ್‌ಗಳಿಗೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

Tap to resize

Latest Videos

undefined

ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರಸ್ವಾಮಿ, ಕಾರ್ಯದರ್ಶಿ ನರಸಿಂಹಮೂರ್ತಿ, ಲೆಕ್ಕ ಸಹಾಯಕ ಸುಧೀರ್ ಹಾಗೂ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ಧರು.

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಮನೆಯ ಅಂಗಳವನ್ನೇ ಕೈತೋಟವನ್ನಾಗಿ ಮಾಡಿ ಅಗತ್ಯ ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ

ಕೊಡಗು (ಡಿ.03): ಇಂದು ಯಾವುದೇ ತರಕಾರಿ, ಕಾಳು ಕಡ್ಡಿಗಳು ಬೇಕು ಎಂದರೆ ತಕ್ಷಣವೇ ಮಾರುಕಟ್ಟೆ ಅಥವಾ ತರಕಾರಿ ಅಂಗಡಿಗಳತ್ತ ಮುಖ ಮಾಡಿಬಿಡುತ್ತೇವೆ ಅಲ್ವಾ. ಆದರೆ ಈ ದಂಪತಿ ಇಡೀ ಮನೆಯ ಅಂಗಳವನ್ನೇ ಕೈತೋಟವನ್ನಾಗಿ ಮಾಡಿ ಅಗತ್ಯ ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ. ಅದು ಕೂಡ ಸಾವಯವ ಕೃಷಿ ಮೂಲಕ. ಎಲ್ಲಿ ಅಂತಹ ವಿಶೇಷ ನೀವೆ ನೋಡಿ. ಮನೆಯ ಒಂದು ಬದಿಯಲ್ಲಿ ಲೆಕ್ಕವಿಲ್ಲದಷ್ಟು ಬಿಟ್ಟಿರುವ ಬೂದುಗುಂಬಳ, ಮನೆಯ ಹಿಂಭಾಗದಲ್ಲಿ ಉಲುಸಾಗಿ ಬೆಳೆದ ಮಡಹಾಗಲ, ಅಕ್ಕಪಕ್ಕದಲ್ಲೇ ಮೂಲಂಗಿ, ಬೀನ್ಸ್, ಬೀನ್ಸ್ ಕಾಳು, ಅವರೆ, ಚಪ್ಪದವರೆ ತರಕಾರಿ ಕಾಳುಗಳು. ಅಬ್ಬಬ್ಬಾ ಒಂದೆರಡು ತರಕಾರಿಗಳಲ್ಲ.

ತಮ್ಮ ಮನೆಗೆ ಬೇಕಾಗುವಷ್ಟು ತರಕಾರಿ, ಕಾಳುಗಳನ್ನು ಮನೆಯಂಗಳದಲ್ಲೇ ಬೆಳೆದಿದ್ದಾರೆ ಈ ದಂಪತಿ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಸುಬ್ರಹ್ಮಣ್ಯ ನಗರದ ನಿವಾಸಿಗಳಾಗಿರುವ ಮಾದಪ್ಪ ಮೀನಾ ದಂಪತಿ ಮನೆಯಂಗಳವನ್ನು ಕೈತೋಟವನ್ನಾಗಿ ಪರಿವರ್ತಿಸಿರುವವರು. ಹೌದು ನಿವೃತ್ತಿ ಜೀವನ ನಡೆಸುತ್ತಿರುವ ಇವರು ತಮ್ಮ ಮನೆಯ ಸುತ್ತಮುತ್ತ ಇರುವ ಜಾಗವನ್ನು ಅಚ್ಚುಕಟ್ಟಾಗಿ ಬಳಕೆ ಮಾಡಿಕೊಂಡು ತರಕಾರಿ ಬೆಳೆದಿದ್ದಾರೆ. ಮನೆಯ ಎಡಭಾಗಕ್ಕೆ ಮೀನಾ ಅವರು ಕುಂಬಳ ಬೀಜವನ್ನು ಎಸೆದಿದ್ದರಂತೆ. ಅದು ಅಲ್ಲಿಯೇ ಹುಟ್ಟಿ ಬೆಳೆದಿದೆ. ಅದು ಹಬ್ಬಲು ಬೇಕಾಗಿರುವ ಚಪ್ಪರ ಹಾಕಿರುವುದರಿಂದ ಬೃಹತ್ ಪ್ರಮಾಣದಲ್ಲಿ ಹಬ್ಬಿ ಅಪಾರ ಪ್ರಮಾಣದ ಕಾಯಿಬಿಟ್ಟಿದೆ. 

ಭ್ರೂಣ ಹತ್ಯೆ ತಡೆ ಕಾಯ್ದೆ ಇನ್ನಷ್ಟು ಬಿಗಿ: ಸಚಿವ ದಿನೇಶ್ ಗುಂಡೂರಾವ್

ಸಾಮಾನ್ಯವಾಗಿ ಕುಂಬಗಳ ಗಿಡ 8 ರಿಂದ 10 ಕಾಯಿಗಳನ್ನು ಬಿಟ್ಟರೆ ಅದೇ ಹೆಚ್ಚು. ಆದರೆ ಈ ಗಿಡ ಬರೋಬ್ಬರಿ 38 ಕ್ಕೂ ಹೆಚ್ಚು ಕಾಯಿಗಳನ್ನು ಬಿಟ್ಟಿದೆ. ಇನ್ನು ಮನೆಯ ಹಿಂಭಾಗದಲ್ಲಿ ಬೀನ್ಸ್, ಮೂಲಂಗಿ, ಅವರೆ, ಚಪ್ಪರದ ಅವರೆ ಗಿಡಗಳನ್ನು ಹಾಕಿದ್ದು ಅವುಗಳು ಇನ್ನೇನು ಫಸಲು ಬಿಡುವ ಹಂತಕ್ಕೆ ಬೆಳೆದಿವೆ. ಇವುಗಳು ಇಷ್ಟೊಂದು ಹುಲುಸಾಗಿ ಬೆಳೆಯುವುದಕ್ಕೆ ನಾವು ಮುಖ್ಯವಾಗಿ ದನದ ಗೊಬ್ಬರ ಅಷ್ಟೇ ಹಾಕುತ್ತೇವೆ ಎನ್ನುತ್ತಾರೆ ಮೀನಾ. ಅತ್ಯುತ್ತಮ ಪೋಷಕಾಂಶ ಹೊಂದಿರುವ ಮಡಹಾಗಲ ತರಕಾರಿ ಕೂಡ ಕುಂಬಳಕಾಯಿ ಜಾತಿಯದ್ದೇ ಆಗಿರುವ, ಬಳ್ಳಿಯಲ್ಲಿ ಬೆಳೆಯುವ ಮತ್ತೊಂದು ತರಕಾರಿ. 

click me!