ರಾಜ್ಯ ಸರ್ಕಾರ ಒಳಮೀಸಲಾತಿ ಅನುಮೋದಿಸಿ ಅನ್ಯಾಯವೆಸಗುತ್ತಿದೆ : ಬಂಜಾರ ಮುಖಂಡ

By Kannadaprabha News  |  First Published Jan 22, 2024, 11:42 AM IST

ಕರ್ನಾಟಕ ಸರ್ಕಾರ ಜ. 8 ರಂದು ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೊಳಿಸುವುದರ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಸಂವಿಧಾನದ 341ರ ಪರಿಚ್ಛೇದ 3ರ ಶೆಡ್ಯೂಲ್ ಅನುಮೋದನೆಗೋಸ್ಕರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಇದರಿಂದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಶಿರಾ ತಾಲೂಕು ಬಂಜಾರ (ಲಂಬಾಣಿ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್. ಶೇಷಾನಾಯ್ಕ ತಿಳಿಸಿದರು.


  ಶಿರಾ :  ಕರ್ನಾಟಕ ಸರ್ಕಾರ ಜ. 8 ರಂದು ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೊಳಿಸುವುದರ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಸಂವಿಧಾನದ 341ರ ಪರಿಚ್ಛೇದ 3ರ ಶೆಡ್ಯೂಲ್ ಅನುಮೋದನೆಗೋಸ್ಕರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಇದರಿಂದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಶಿರಾ ತಾಲೂಕು ಬಂಜಾರ (ಲಂಬಾಣಿ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್. ಶೇಷಾನಾಯ್ಕ ತಿಳಿಸಿದರು.

ಭಾನುವಾರ ನಗರದ ಸೇವಾಲಾಲ್ ಭವನದಲ್ಲಿ ಶಿರಾ ತಾಲೂಕು (ಲಂಬಾಣಿ) ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಳಮೀಸಲಾತಿಯನ್ನು ಮಾಡಲೇಬಾರದು ಎಂದು ಸುಪ್ರಿಂಕೋರ್ಟಿನ ನಿರ್ದೇಶನವಿದೆ. ಒಳಮೀಸಲಾತಿ ಜಾರಿಗೊಳಿಸಲು ದಲ್ಲೂ ಅವಕಾಶವಿಲ್ಲ ಎಂದು ಈಗಾಗಲೇ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದಾರೆ. ಈ ವಿಷಯವಾಗಿ, ಸಂಸತ್ ನಲ್ಲಿ ಬೇರೆ ರಾಜ್ಯದ ಸದಸ್ಯರು ಪ್ರಶ್ನಿಸಿದ ಸಂದರ್ಭದಲ್ಲಿ ಸಂಸತ್ತಿನಲ್ಲಿಯೇ ಉತ್ತರ ಕೊಟ್ಟಿದ್ದಾರೆ.

Latest Videos

undefined

ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ, ಮಾಡುವುದಾದರೆ ಸಂವಿಧಾನ ತಿದ್ದುಪಡಿ ಮಾಡಬೇಕು ಎಂಬ ಮಾತನ್ನು ಹೇಳಿದ್ದಾರೆ. ಇಷ್ಟೆಲ್ಲ ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮಂಡನೆ ಮಾಡಿ ಲಂಬಾಣಿ ಸಮಾಜದವರಿಗೆ ಅನ್ಯಾಯ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಸರ್ಕಾರ ಒಳಮೀಸಲಾತಿಯನ್ನು ಅನುಮೋದನೆ ಮಾಡಿದ ಫಲದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದೆ, ಇದೆಲ್ಲ ಗಮನದಲ್ಲಿ ಇಟ್ಟುಕೊಂಡು ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಸರಿಯಾದ ತೀರ್ಮಾನ ಕೈಗೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿರಾ ತಾಲೂಕು ಬಂಜಾರ (ಲಂಬಾಣಿ) ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಆರ್.ಲಕ್ಷ್ಮಣ್ ನಾಯ್ಕ್, ಸದಸ್ಯರಾದ ನಾನಾ ನಾಯಕ್, ಸರೋಜ ಬಾಯಿ, ಮೇಘಾ ನಾಯ್ಕ್, ಆನಂದ್ ಕುಮಾರ್, ಸತೀಶ್, ಪರಶುರಾಮ್ ನಾಯ್ಕ, ಕುಮಾರ್ ನಾಯ್ಕ, ಭೀಮಾ ನಾಯ್ಕ, ಮಹೇಶ್, ಢಾಕ್ಯಾನಾಯ್ಕ, ರಾಮಕೃಷ್ಣ, ಪ್ರವೀಣ್, ಕೇಶವ್, ಮೀಠ್ಯಾನಾಯ್ಕ, ದೇವ್ಲಾನಾಯ್ಕ ಸೇರಿದಂತೆ ಹಲವರು ಹಾಜರಿದ್ದರು. ಹಾಜರಿದ್ದರು.

click me!