ವೇಗದ ಸರದಾರ ಈ ಹೋರಿ ಬೆಲೆ ಬರೋಬ್ಬರಿ 19 ಲಕ್ಷ ರೂಪಾಯಿ!

By Ravi NayakFirst Published Aug 11, 2022, 1:40 PM IST
Highlights

ಅಬ್ಬಬ್ಬಾ ಅಂದ್ರೆ ಒಂದು ಹೋರಿ ಬೆಲೆ ಎಷ್ಟಿರಬಹುದು? ಐವತ್ತು ಸಾವಿರ? 1 ಲಕ್ಷ ? 2 ಲಕ್ಷ ?  ಅಷ್ಟೆ ಅಲ್ಲವಾ? ಆದರೆ ಇಲ್ಲೊಂದು ಹೋರಿ ಇದೆ. ಈ ಹೋರಿ ಬೆಲೆ ಬರೋಬ್ಬರಿ 19 ಲಕ್ಷ ರೂಪಾಯಿ ಅಂದ್ರೆ ನೀವು ನಂಬಲೇ ಬೇಕು.!

ವರದಿ- ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ
ಹಾವೇರಿ ( ಅಗಸ್ಟ್ 11) - ಅಬ್ಬಬ್ಬಾ ಅಂದ್ರೆ ಒಂದು ಹೋರಿ ಬೆಲೆ ಎಷ್ಟಿರಬಹುದು? ಐವತ್ತು ಸಾವಿರ? 1 ಲಕ್ಷ ? 2 ಲಕ್ಷ ?  ಅಷ್ಟೆ ಅಲ್ಲವಾ? ಆದರೆ ಇಲ್ಲೊಂದು ಹೋರಿ ಇದೆ. ಈ ಹೋರಿ ಬೆಲೆ ಬರೋಬ್ಬರಿ 19 ಲಕ್ಷ ರೂಪಾಯಿ ಅಂದ್ರೆ ನೀವು ನಂಬಲೇ ಬೇಕು. ಉತ್ತರ ಕರ್ನಾಟಕದ ಕಡೆ ಈ 19 ಲಕ್ಷ ರೂಪಾಯಿಗೆ ಕನಿಷ್ಟ 2 ಎಕರೆ ಹೊಲ ಖರೀದಿ ಮಾಡಬಹುದು. ಈ ಹೋರಿಗೆ 19 ಲಕ್ಷ ಕೊಟ್ಟು ಖರೀದಿ ಮಾಡಿದವರು ಯಾರು? 19 ಲಕ್ಷ ರೂಪಾಯಿ ಹಣ ಕೊಟ್ಟು ಖರೀದಿ ಮಾಡುವಷ್ಟು ಸ್ಪೆಷಾಲಿಟಿ ಏನಿದೆ ಅಂತೀರಾ? ಹೌದು ಈ ಹೋರಿ ವೇಗದ ಸರದಾರ. ಅಖಾಡದಲ್ಲಿ ಬಿರುಗಾಳಿ ಎಬ್ಬಿಸೋ ರಣವೀರ.

 

ಹಾವೇರಿ(Haveri) ಜಿಲ್ಲೆ ಅಪ್ಪಟ ರೈತಾಪಿ ವರ್ಗದ ಜವಾರಿ ಮಂದಿ((Jawari Mandi) ಇರೋ ಊರು. ಇಲ್ಲಿ ಹೋರಿ ಬೆದರಿಸೋ ಸ್ಪರ್ದೆ ಭಾರಿ ಫೇಮಸ್. ತಮಿಳುನಾಡಿನ ಜಲ್ಲಿಕಟ್ಟಿಗಿಂತ ರೋಚಕ ಈ ಹೋರಿ ಹಬ್ಬ. ಒಬ್ಬ ಸೂಪರ್ ಸ್ಟಾರ್ ನಟನಿಗೆ ಇರುವ ಹಾಗೆ ಇಲ್ಲಿ ಅಖಾಡದಲ್ಲಿ ಧೂಳ್ ಎಬ್ಬಿಸೋ ಹೋರಿಗಳಿಗೆ ಅಭಿಮಾನಿಗಳಿರ್ತಾರೆ. ಅಭಿಮಾನಿಗಳ ಸಂಘಗಳೂ ಇವೆ. ಇಂಥ ಜನಪ್ರಿಯ ಹೋರಿಗಳಲ್ಲಿ ಹಾನಗಲ್ ತಾಲೂಕು ವಾಸನ ಗ್ರಾಮದ ಹೋರಿಯೂ ಒಂದು. ವಾಸನದ ಬ್ರಹ್ಮ ಅಂತಾನೇ ಫೇಮಸ್..

ಹೋರಿ ಮುಂದೆ ತಕ ತಕ ಕುಣಿದ ಯುವತಿ ಗತಿ ಏನಾಯ್ತು

ಇದು ಹೋರಿ ಅಖಾಡದ ಉಸೇನ್ ಬೋಲ್ಟ್: ಕಟ್ಟು ಮಸ್ತಾದ ದೇಹ. ಆಕರ್ಷಕ ಮೈ ಕಟ್ಟು,  ಖಡಕ್ ಪೈಲ್ವಾನನಂಗೆ ಹುರಿಗಟ್ಟಿದ ದೇಹ. ಅಖಾಡದಲ್ಲಿ ಓಡೋಕೆ ಶುರು ಮಾಡಿದರೆ ಈ ಹೋರಿ ಟಚ್ ಮಾಡೋರಿಲ್ಲ.  ಹಾವೇರಿ ಜಿಲ್ಲೆಯಲ್ಲಿ ಬಹಳ ಪ್ರಸಿದ್ಧಿ ಗಳಿಸಿದ ಈ ಹೋರಿಯ ಕೀರ್ತಿ ತಮಿಳುನಾಡಿನ ಬಾಗಿಲು ತಟ್ಟಿದೆ. 

ಹೇಳಿ ಕೇಳಿ ತಮಿಳುನಾಡಿ(Tamilunadu)ನಲ್ಲಿ ಜಲ್ಲಿ ಕಟ್ಟು ಜನಪ್ರಿಯ ಕ್ರೀಡೆ‌. ಹಾನಗಲ್ ತಾಲೂಕು ವಾಸನದ ಈ ಹೋರಿ ಸ್ಪೀಡ್ ತಮಿಳುನಾಡಿನವರ ಮನ ಗೆದ್ದಿದೆ.ಲಕ್ಷಾಂತರ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿ ಕಂಡು ಹೋರಿ ಅಭಿಮಾನಿಗಳು ಸಿಳ್ಳೆ - ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಅಂತಹ ಹೋರಿಗಳ ಸಾಲಲ್ಲಿ ವಾಸನ ಗ್ರಾಮದ ಬ್ರಹ್ಮ ಅನ್ನೋ ಹೋರಿ ಕೂಡಾ ಒಂದಾಗಿದೆ. ಕರ್ನಾಟಕದಲ್ಲಿ ನಡೆಯೋ ಪ್ರತಿ ಹೋರಿ ಹಬ್ಬದಲ್ಲಿ ವಾಸನ ಗ್ರಾಮದ 'ಬ್ರಹ್ಮ' ಅಭಿಮಾನಿಗಳ ಮನಸ್ಸು ಗೆದ್ದಿದೆ. ಹೀಗಾಗಿ ಹೋರಿ ಈಗ ತಮಿಳುನಾಡು ಪಾಲಾಗಿದೆ. ಕರ್ನಾಟಕದ ಹೈ ಸ್ಪೀಡ್ ಎಂದೇ ಪ್ರಖ್ಯಾತಿ ಪಡೆದ ಕೊಬ್ಬರಿ ಹೋರಿ ಈಗ ತಮಿಳುನಾಡಿನ ಪಾಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವಾಸನ ಗ್ರಾಮದ, ಮಲ್ಲೇಶಪ್ಪ ಹಾಳಗತನವರ ಎಂಬುವರಿಗೆ ಸೇರಿದ 'ಹೈ ಸ್ಪೀಡ್ ಕಾ ಬಾಪ್' ಎಂಬ ಹೋರಿ ತಮಿಳುನಾಡಿನವರು ಖರೀದಿಸಿದ್ದಾರೆ. ಸುಮಾರು ಪ್ರಶಸ್ತಿಗಳನ್ನ ಗೆದ್ದ ಹೋರಿಯನ್ನ ತಮಿಳುನಾಡಿನ ವಿಕ್ಟರಿ ಎಂಬುವವರು ಬರೋಬ್ಬರಿ 19 ಲಕ್ಷ ರೂಪಾಯಿ ಹಣ ನೀಡಿ ಖರೀದಿಸಿದ್ದಾರೆ.

ದಾಖಲೆಯ ಭಾರಿ ಮೊತ್ತಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್ ಹೋರಿ ಖರೀದಿಸಿದ ಪ್ರಸನ್ನ ಕುಮಾರ್

 

ಹೋರಿ ಮರಾಟವಾದ ಸುದ್ದಿ  ಕೇಳಿ ಆಕ್ರೋಶಗೊಂಡ ಹೋರಿ ಅಭಿಮಾನಿಗಳು:

ವಾಸನ ಗ್ರಾಮದ ಮಲ್ಲೇಶಪ್ಪ ತಮ್ಮ ಹೋರಿಯನ್ನು 19 ಲಕ್ಷ ರೂಪಾಯಿಗೆ ಮಾರಿದ ಸುದ್ದಿ ಕೇಳಿ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರಂತೆ. ಏನ್ರಿ ನಿಮಗೆ ದುಡ್ಡು ಕಡಿಮೆ ಆಗಿತ್ತಾ? ಅಷ್ಟು ಒಳ್ಳೆ  ಹೋರಿ ಮಾರಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರಂತೆ.. ಸದ್ಯ ಹೋರಿ ಇನ್ನೂ ತಮಿಳುನಾಡು ತಲುಪಿಲ್ಲ. ಹಾವೇರಿ ಜಿಲ್ಲೆಯಲ್ಲಿ ಧೂಳ್ ಎಬ್ಬಿಸಿದ್ದ ಹೋರಿ ಈಗ ತಮಿಳುನಾಡಿಗೆ ಮಾರಾಟವಾಗಿದೆ..

click me!