ಇಂದು ಹುಬ್ಬಳ್ಳಿಗೆ ರಾಷ್ಟ್ರಪತಿ, ಐಐಐಟಿ ಕ್ಯಾಂಪಸ್‌ ಉದ್ಘಾಟನೆ

By Kannadaprabha News  |  First Published Sep 26, 2022, 8:16 AM IST
  • ಇಂದು ಹುಬ್ಬಳ್ಳಿಗೆ ರಾಷ್ಟ್ರಪತಿ, ಐಐಐಟಿ ಕ್ಯಾಂಪಸ್‌ ಉದ್ಘಾಟನೆ
  • ಹುಬ್ಬಳ್ಳಿ-ಧಾರವಾಡ ಪಾಲಿಕೆಯಿಂದ ಪೌರಸನ್ಮಾನ
  • ಗ್ಯಾನಿ ಜೈಲ್‌ಸಿಂಗ್‌ ನಂತರ ಇದೇ ಮೊದಲು

ಹುಬ್ಬಳ್ಳಿ (ಸೆ.26) : ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸೋಮವಾರ ಅದ್ಧೂರಿ ಪೌರ ಸನ್ಮಾನ ನಡೆಯಲಿದೆ. ಆ ಬಳಿಕ ಅವರು ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯ ನೂತನ ಕ್ಯಾಂಪಸ್‌ ಅನ್ನು ಉದ್ಘಾಟಿಸಲಿದ್ದಾರೆ.

ಧಾರವಾಡ: ರಾಷ್ಟ್ರಪತಿಯಿಂದ ಐಐಐಟಿ ಹೊಸ ಕ್ಯಾಂಪಸ್‌ ಲೋಕಾರ್ಪಣೆ!

Tap to resize

Latest Videos

ನಾಡಹಬ್ಬ ದಸರಾ ಉದ್ಘಾಟನೆಗೆ ಮೈಸೂರಿಗೆ ಆಗಮಿಸುತ್ತಿರುವ ರಾಷ್ಟ್ರಪತಿ ಮುರ್ಮು ಅವರು ನಂತರ ನೇರವಾಗಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಇಲ್ಲಿನ ಜಿಮ್‌ಖಾನಾ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 1 ಗಂಟೆಗೆ ಸನ್ಮಾನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಲಾಗಿದ್ದು, ಗಣ್ಯರಿಗೆ ವೇದಿಕೆ ಮುಂಭಾಗದಲ್ಲಿ 1 ಸಾವಿರ ಆಸನಗಳು ಸೇರಿ ಒಟ್ಟು ನಾಲ್ಕು ಸಾವಿರ ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಗ್ಯಾನಿಜೈಲ್‌ಸಿಂಗ್‌ ರಾಷ್ಟ್ರಪತಿಯಾಗಿದ್ದಾಗ 1986-87ರಲ್ಲಿ ಪಾಲಿಕೆ ವತಿಯಿಂದ ಪೌರಸನ್ಮಾನ ಮಾಡಲಾಗಿತ್ತು. ಇದೀಗ ದ್ರೌಪದಿ ಮುರ್ಮು ಅವರು ಪೌರಸನ್ಮಾನ ಸ್ವೀಕರಿಸುತ್ತಿರುವ ಎರಡನೇ ರಾಷ್ಟ್ರಪತಿ ಆಗಿದ್ದಾರೆ.

ಐಐಐಟಿ ಕ್ಯಾಂಪಸ್‌ ಉದ್ಘಾಟನೆ: ಪೌರ ಸನ್ಮಾನ ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ಮುರ್ಮು ಅವರು ಮಧ್ಯಾಹ್ನ 3 ಗಂಟೆಗೆ ಸತ್ತೂರು ಬಳಿಯ ಹೊಸ ಕ್ಯಾಂಪಸ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಪ್ರಹ್ಲಾದ್‌ ಜೋಶಿ, ಇಸ್ಫೋಸಿಸ್‌ ¶ೌಂಡೇಶನ್‌ ಮುಖ್ಯಸ್ಥೆ ಸುಧಾಮೂರ್ತಿ, ಸಚಿವರಾದ ಅಶ್ವತ್ಥನಾರಾಯಣ, ಹಾಲಪ್ಪ ಆಚಾರ್‌, ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಐಐಐಟಿ ಕುಲಸಚಿವ ಪ್ರೊ. ಚನ್ನಪ್ಪ ಅಕ್ಕಿ ಹಾಗೂ ನಿರ್ದೇಶಕ ಕವಿ ಮಹೇಶ್‌ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. 

Dasara Flower Show 2022: ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ ನಿರ್ಮಾಣ

click me!