ಜಗತ್ತಿನ ಅತ್ಯಂತ ಶಕ್ತಿಯುತ ಅಸ್ತ್ರ ಶಿಕ್ಷಣ

By Kannadaprabha News  |  First Published Apr 22, 2023, 5:38 AM IST

ಶಿಕ್ಷಣ ಜಗತ್ತಿನ ಅತ್ಯಂತ ಶಕ್ತಿಯುತ ಅಸ್ತ್ರ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌. ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.


 ತುಮಕೂರು :  ಶಿಕ್ಷಣ ಜಗತ್ತಿನ ಅತ್ಯಂತ ಶಕ್ತಿಯುತ ಅಸ್ತ್ರ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌. ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.

ತುಮಕೂರಿನನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಸಿಇಟಿ, ಎನ್‌ಇಇಟಿ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡಲ್ಲಿ ಜೀವನದಲ್ಲಿ ಮಹತ್ವದ ಸಾಧನೆ ಮಾಡಬಹುದು. ಇಂದು ಎಲ್ಲಾ ರಂಗಗಳಲ್ಲಿ ತೀವ್ರ ತರವಾದ ಸ್ಪರ್ಧೆ ಇದ್ದು, ಅದನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಸನ್ನದ್ಧರಾಗಿರಬೇಕು. ಇದಕ್ಕಾಗಿ ಸೂಕ್ತ ಶಿಕ್ಷಣ ತರಬೇತಿಯ ಅಗತ್ಯವಿದೆ. ಈ ಮೂಲಕ ನಿಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Tap to resize

Latest Videos

ಬಡ ವಿದ್ಯಾರ್ಥಿಗಳಿಗಾಗಿ ಎಬಿವಿಪಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಹೆಚ್ಚಿನ ಸಂಖೈಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಬೇಕು. ಏನಾದರು ಸಾಧಿಸಬೇಕೆಂಬ ಹಂಬಲ ನಿಮ್ಮಲಿರಬೇಕು. ನಿಮ್ಮದು ಸಾಧನೆಗೆ ಸೂಕ್ತವಾದ ವಯಸ್ಸು. ಯುವ ಜನರು ದೇಶದ ಸಂಪತ್ತು ಯುವ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಅಂತ ದೇಶ ಅಭಿವೃದ್ಧಿ ಹೊಂದುತ್ತದೆ. ಪ್ರಸ್ತುತ ಚುನಾವಣೆ ಸನ್ನಿಹಿತವಾಗಿದೆ. ಮತದಾನ ಎಂಬುವುದು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ನೀಡಲಾಗಿರುವ ಪವಿತ್ರವಾದ ಹಕ್ಕು. ಹಾಗಾಗಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಎಬಿವಿಪಿಯ ರಾಜ್ಯ ಉಪಾಧ್ಯಕ್ಷ ಡಾ.ಎಂ.ವಿ. ಅಜಯ್‌ ಕುಮಾರ್‌ ಮಾತನಾಡಿ, ಯುವಜನತೆ ದೇಶದ ಆಸ್ತಿಯಾಗಿರುವುದರಿಂದ ಸ್ವಾಮಿ ವಿವೇಕಾನಂದ, ಭಗತ್‌ ಸಿಂಗ್‌ ಅವರ ಜೀವನ ತತ್ವ ಆದರ್ಶಗಳನ್ನು ಪಾಲಿಸುವ ಮೂಲಕ ರಾಷ್ಟ್ರ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವುದರ ಜೊತೆಗೆ ರಚನಾತ್ಮಕ ಕಾರ್ಯಗಳಾದ ಉಚಿತ ಸಿಇಟಿ, ಎನ್‌ಇಇಟಿ ತರಬೇತಿ ಶಿಬಿರವು ಇಂಜಿನೀಯರಿಂಗ್‌ ಮತ್ತು ವೈದ್ಯಕೀಯ ಪದವಿಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಕಾರ್ಯಕ್ರಮದಲ್ಲಿ ಎಬಿವಿಪಿಯ ಜಿಲ್ಲಾ ಪ್ರಮುಖ್‌ ರವೀಂದ್ರ, ಅಕ್ಷಯ ಇಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ್‌ ರಾವ್‌, ಅನನ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘು, ಎಬಿವಿಪಿಯ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರು ಹಾಗೂ ತುಮಕೂರು ಎಬಿವಿಪಿ ವಿಭಾಗದ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್‌, ಜಿಲ್ಲಾ ಸಂಚಾಲಕ ಶ್ರೀನಿವಾಸ್‌, ನಗರ ಉಪಾಧ್ಯಕ್ಷ ಡಾ. ಪೃಥ್ವಿರಾಜ್‌, ಕಾರ್ಯಕರ್ತರಾದ ಹರ್ಷವರ್ಧನ, ವಿನೋದ್‌, ಅರ್ಪಿತ ಇತರರು ಉಪಸ್ಥಿತರಿದ್ದರು.

----

ಫೋಟೋ ಫೈಲ್‌ 21ಟಿಯುಎಂ3

ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಸಿಇಟಿ, ಎನ್‌ಇಇಟಿ ತರಬೇತಿ ಶಿಬಿರ

click me!