Chamarajanagara: ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದ ಚಿರತೆ ಪ್ರತಿಮೆ ಶಿಥಿಲ

By Kannadaprabha News  |  First Published Feb 4, 2023, 8:29 AM IST

ಬಿಳಿಗಿರಿ ರಂಗನಾಥ ಸ್ವಾಮಿ ವನ್ಯಧಾಮಕ್ಕೆ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದ ಚಿರತೆ ಪ್ರತಿಮೆ ಶಿಥಿಲಗೊಂಡು ಮುರಿದುಬಿದ್ದಿದೆ. ಯಳಂದೂರು ತಾಲೂಕಿನ ಗುಂಬಳ್ಳಿ ಚೆಕ್‌ ಪೋಸ್ವ್‌ ಬಳಿ ಅರಣ್ಯ ಇಲಾಖೆ ಪ್ರವಾಸಿಗರನ್ನು ಆಕರ್ಷಣೆ ಮಾಡಲು ನಿರ್ಮಿಸಲಾಗಿರುವ ಹುಲಿ, ಆನೆ, ಚಿರತೆ, ಜಿಂಕೆ,ಕಾಡೆಮ್ಮೆ, ಪ್ರತಿಮೆಗಳು ಶಿಥಿಲಗೊಂಡಿದ್ದು, ಅದರಲ್ಲಿ ಮರದ ಮೇಲೆ ಕುಳಿತಂತೆ ಚಿರತೆ ಪ್ರತಿಮೆ ಶಿಥಿಲಗೊಂಡು ನೆಲಕ್ಕೆ ಮುರಿದುಬಿದ್ದಿದೆ.


- ಅಂಬಳಿ ವೀರಭದ್ರ ನಾಯಕ

ಯಳಂದೂರು (ಫೆ.4) : ಬಿಳಿಗಿರಿ ರಂಗನಾಥ ಸ್ವಾಮಿ ವನ್ಯಧಾಮಕ್ಕೆ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದ ಚಿರತೆ ಪ್ರತಿಮೆ ಶಿಥಿಲಗೊಂಡು ಮುರಿದುಬಿದ್ದಿದೆ.ಯಳಂದೂರು ತಾಲೂಕಿನ ಗುಂಬಳ್ಳಿ ಚೆಕ್‌ ಪೋಸ್ವ್‌ ಬಳಿ ಅರಣ್ಯ ಇಲಾಖೆ ಪ್ರವಾಸಿಗರನ್ನು ಆಕರ್ಷಣೆ ಮಾಡಲು ನಿರ್ಮಿಸಲಾಗಿರುವ ಹುಲಿ, ಆನೆ, ಚಿರತೆ, ಜಿಂಕೆ,ಕಾಡೆಮ್ಮೆ, ಪ್ರತಿಮೆಗಳು ಶಿಥಿಲಗೊಂಡಿದ್ದು, ಅದರಲ್ಲಿ ಮರದ ಮೇಲೆ ಕುಳಿತಂತೆ ಚಿರತೆ ಪ್ರತಿಮೆ ಶಿಥಿಲಗೊಂಡು ನೆಲಕ್ಕೆ ಮುರಿದುಬಿದ್ದಿದೆ.

Tap to resize

Latest Videos

undefined

ಚಾಮರಾಜನಗರ ಜಿಲ್ಲೆ ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌ ಎಸ್‌ ಮಹದೇವ ಪ್ರಸಾದ್‌ ಅವರು ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಹೊಂಡರ ಬಾಳು ಮತ್ತು ಗುಂಬಳಿ ಚೆಕ್‌ ಪೋಸ್ವ್‌ ಬಳ್ಳಿ ಹುಲಿ ಚಿರತೆ ಆನೆ ಕಾಡೆಮ್ಮೆ ಜಿಂಕೆ ಪ್ರತಿಮೆಗಳನ್ನು ಮಾಡಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದರು.

ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ವನ್ಯಧಾಮಕ್ಕೆ ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಣೆ ಮಾಡುತ್ತಿದ್ದ ಪ್ರತಿಮೆಗಳು ಜ. 25ರಂದು ಯಳಂದೂರು ತಾಲೂಕಿನ ಬಹುತೇಕ ಕಡೆ ಮಳೆ ಬಿದ್ದಿದ್ದರಿಂದ ಮಳೆಗೆ ಚಿರತೆ ಪ್ರತಿಮೆ ಶಿಥಿಲಗೊಂಡು ಮುರಿದು ಬೀಳುತ್ತಿದೆ.

Chamarajanagar: ಸಿಸಿಟಿವಿ ಕ್ಯಾಮರಾವಿಲ್ಲದ ಏರಿಯಾಗಳೇ ಕಳ್ಳರ ಟಾರ್ಗೆಟ್: ಎರಡು ದಿನಕ್ಕೊಂದು ಕಳ್ಳತನ

ಪ್ರಾರಂಭ ಹಂತದಲ್ಲಿ ಕಳಪೆ ಕಾಮಗಾರಿ

ಹುಲಿ ಚಿರತೆ ಜಿಂಕೆ ಆನೆ ಕಾಡೆಮ್ಮೆ ಈ ಪ್ರತಿಮೆ ಕಾಮಗಾರಿ ಪಡೆದ ಗುತ್ತಿಗೆದಾರ ಪ್ರಾರಂಭದಲ್ಲೇ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ಕಾಮಗಾರಿ ನಡೆಸುತ್ತಿದ್ದ ಸಾರ್ವಜನಿಕರು ಕಳಪೆ ಎಂದು ಇಲಾಖೆ ಅಧಿಕಾರಿಗಳಿಗೆ ದೂರಿದರು ಕೂಡ ಅಧಿಕಾರಿ ವರ್ಗ ನಿರ್ಲಕ್ಷ್ಯ ವಹಿಸಿದ್ದರಿಂದ ಸುಂದರವಾಗಿ ನಿರ್ಮಾಣವಾಗಿದ್ದ ವನ್ಯ ಜೀವಿಗಳ ಪ್ರತಿರೂಪವಾದ ಚಿರತೆ ಪ್ರತಿಮೆ ಮುರಿದು ಬೀಳಲು ಕಾರಣವಾಗಿದೆ.

Chamarajanagara: ತೋಟದ ಶೆಡ್‌ಗೆ ನುಗ್ಗಿ ಕಾಡಾನೆಗಳ ದಾಳಿ, ಹಸು ಬಲಿ

ಇದಕ್ಕೆಲ್ಲ ಕಾರಣಕರ್ತರಾದವರ ಮೇಲೆ ಅಧಿಕಾರಿ ವರ್ಗ ಸಂಬಂಧಪಟ್ಟಹಿರಿಯ ಅರಣ್ಯ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.

ಶಿಥಿಲ ಗುಂಡು ಮುರಿದು ಬಿದ್ದಿರುವ ಚಿರತೆ ಪ್ರತಿಮೆ ಮರು ಸ್ಥಾಪಿಸಲು ಈಗಾಗಲೇ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

ಲೋಕೇಶ್‌ ಮೂರ್ತಿ, ಆರ್‌ಎಫ್‌ಓ,ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ, ಯಳಂದೂರು

ನಿರ್ಮಾಣ ಮಾಡಿ ಕೆಲವೇ ವರ್ಷಗಳಲ್ಲಿ ಚಿರತೆ ಪ್ರತಿಮೆ ಮುರಿದು ಬಿದ್ದಿರುವುದು ಗುತ್ತಿಗೆದಾರನ ಕಳಪೆ ಕಾಮಗಾರಿ ಮತ್ತು ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ. ಇನ್ನಾದರೂ ಸಂಬಂಧಪಟ್ಟಅಧಿಕಾರಿಗಳು ಪುನರ್‌ ನಿರ್ಮಾಣಕ್ಕೆ ಮುಂದಾಗ ಬೇಕಾಗಿದೆ.

ಚಂ ದು, ಯಳಂದೂರು

click me!