ಟಿಕೆಟ್ ವಿಚಾರದಲ್ಲಿ ಸಮಾಜವನ್ನು ರಾಜ್ಯ ಕಾಂಗ್ರೆಸ್ ನಿರ್ಲಕ್ಷಿಸಿದರೆ ಚಿತ್ರದುರ್ಗ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುವುದಾಗಿ ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಭೋವಿ (ಓಡ್)ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ತಾಲೂಕು ಭೋವಿ ಸಮಾಜದ ಹಿರಿಯ ಮುಖಂಡ ಆರ್.ದಾಸಭೋವಿ ತಿಳಿಸಿದ್ದಾರೆ.
ಪಾವಗಡ: ಟಿಕೆಟ್ ವಿಚಾರದಲ್ಲಿ ಸಮಾಜವನ್ನು ರಾಜ್ಯ ಕಾಂಗ್ರೆಸ್ ನಿರ್ಲಕ್ಷಿಸಿದರೆ ಚಿತ್ರದುರ್ಗ ಲೋಕಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವರ್ಧಿಸುವುದಾಗಿ ರಾಷ್ಟ್ರೀಯ ಶ್ರೀ ಸಿದ್ದರಾಮೇಶ್ವರ ಭೋವಿ (ಓಡ್)ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಗೂ ತಾಲೂಕು ಭೋವಿ ಸಮಾಜದ ಹಿರಿಯ ಮುಖಂಡ ಆರ್.ದಾಸಭೋವಿ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಪಾವಗಡ ಸೇರಿ ಲೋಕಸಭೆಯು ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.ಮೀಸಲು ಕ್ಷೇತ್ರವಾದಾಗಿನಿಂದಲೂ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷ ಕಳೆದ 30ವರ್ಷಗಳಿಂದ ಕ್ಕೆ ಅಧ್ಯತೆ ನೀಡಿಲ್ಲ.
undefined
ಅಲ್ಲದೇ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಚಿತ್ರದುರ್ಗ, ಕೋಲಾರ ಸೇರಿ 5 ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ (ಎಸ್‌ಸಿ)ಮೀಸಲಿವೆ. ರಾಜ್ಯದಲ್ಲಿ ಸುಮಾರು 50ಲಕ್ಷದಷ್ಟು ಭೋವಿ ಸಮುದಾಯದ ಮತಗಳಿವೆ. ಯಾವುದೇ ಮೀಸಲು ಕ್ಷೇತ್ರದಲ್ಲಿ ಭೋವಿ ಸಮಾಜಕ್ಕೆ ಅಧ್ಯತೆ ನೀಡದಿರುವುದು ವಿಪರ್ಯಾಸ. ಸಮಾಜದ ಹಾಲಿ, ಮಾಜಿ ಸಚಿವರು, ಶಾಸಕರು ಹಾಗೂ ಸಮಾಜದ ಹಿರಿಯ ಮುಖಂಡರು ಆನೇಕ ಬಾರಿ ಮನವಿ ಮಾಡಿದ್ದಾರೆ.
ಆದರೆ ರಾಜ್ಯ ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಇದು ಅತ್ಯಂತ ನೋವು ತಂದಿದೆ ಎಂದರು. ಅಭ್ಯರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನಕ್ಕೆ ಕಾಲಾವಕಾಶವಿದೆ. ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿ, ಈ ಭಾಗದಲ್ಲಿ ಭೋವಿ ಸಮಾಜಕ್ಕೆ ಅಧ್ಯತೆ ನೀಡಬೇಕು. ಕಡೆಗಣಿಸಿದರೆ ಭೋವಿ ಹಾಗೂ ಇತರೆ ಸಮಾಜದ ಬೆಂಬಲದೊಂದಿಗೆ ಈ ಭಾಗಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಹೇಳಿದರು.