ಹಾದಿತಪ್ಪಿದ ಜೀವನ ಶೈಲಿಯಿಂದ ಅನಾರೋಗ್ಯಕ್ಕೆ : ಸಿದ್ಧಲಿಂಗ ಮಹಾಸ್ವಾಮೀಜಿ

By Kannadaprabha NewsFirst Published Mar 25, 2024, 10:21 AM IST
Highlights

ಮನುಷ್ಯನಿಗೆ ಆರೋಗ್ಯವೇ ಸಂಪತ್ತು, ಸಾಕಷ್ಟು ಜಾಗೃತಿಯ ನಡುವೆಯೂ ನಮ್ಮ ದೈನಂದಿನ ಜೀವನದಲ್ಲಿ ಹಾದಿ ತಪ್ಪಿದ ಜೀವನ ಶೈಲಿಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

ತುಮಕೂರು : ಮನುಷ್ಯನಿಗೆ ಆರೋಗ್ಯವೇ ಸಂಪತ್ತು, ಸಾಕಷ್ಟು ಜಾಗೃತಿಯ ನಡುವೆಯೂ ನಮ್ಮ ದೈನಂದಿನ ಜೀವನದಲ್ಲಿ ಹಾದಿ ತಪ್ಪಿದ ಜೀವನ ಶೈಲಿಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

ಸಿದ್ಧಗಂಗಾ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಿಂದ ವಿಶ್ವ ಕಿಡ್ನಿ ದಿನದ ಅಂಗವಾಗಿ ನಡೆದ ಬೃಹತ್ ಸೈಕ್ಲೊಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ನೀಡಿ ಮಾತನಾಡಿದ ಅವರು, ಆರೋಗ್ಯ ಕಾಳಜಿ ಹಾಗೂ ಶಾಂತಿಯುತ ಬದುಕು, ದೃಷ್ಟಿಕೋನ ಜೀವನವನ್ನು ಪರಿಪೂರ್ಣತೆಯಡೆಗೆ ಕೊಂಡೊಯ್ಯುತ್ತದೆ ಎಂದರು.

ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಪ್ರತಿ ವರ್ಷ ವಿಶ್ವ ಕಿಡ್ನಿ ದಿನದ ಅಂಗವಾಗಿ ಸೈಕ್ಲೋಥಾನ್ ಏರ್ಪಡಿಸುತ್ತಾ ಬಂದಿದ್ದು, ಕಿಡ್ನಿ ಆರೋಗ್ಯದ ಕುರಿತು ಸಂವಾದ, ಸಾಧಕರಿಗೆ ಸನ್ಮಾನದಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿವೆ ಎಂದು ಸಂತಸಪಟ್ಟರು.

ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಮುಖ್ಯಸ್ಥ ಡಾ.ಭಾನುಪ್ರಕಾಶ್ ಮಾತನಾಡಿ, ಸೈಕ್ಲೋಥಾನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ. ಸಿದ್ಧಗಂಗಾ ಆಸ್ಪತ್ರೆ ಕಿಡ್ನಿ ಕಾಳಜಿಗಾಗಿ ಅತ್ಯಾಧುನಿಕ‌ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಿದ್ದು, ಡಯಾಲಿಸಿಸ್ ಘಟಕ,ಅತ್ಯಾಧುನಿಕ ಸಿಟಿ ಸ್ಕ್ಯಾನ್ ಹಾಗೂ ವಾರ್ಡ್ ಸೌಲಭ್ಯಗಳು ಪರಿಣಾಮಕಾರಿ ಚಿಕಿತ್ಸೆಗೆ ಸಹಾಯಕವಾಗಿವೆ ಎಂದರು.

ಮೂತ್ರಪಿಂಡ ತಜ್ಞರಾದ ಡಾ.ಕುಶಾಲ್ ಮಾತನಾಡಿ, ಸಾಕಷ್ಟು ನೀರು ಕುಡಿಯದಿರುವುದು, ಅತಿಯಾದ ಉಪ್ಪು, ಮಸಾಲೆ ಪದಾರ್ಥಗಳ ಸೇವನೆ, ಮದ್ಯಪಾನ ಹಾಗೂ ಧೂಮಪಾನದಂತಹ ದುಶ್ಚಟಗಳಿಂದ ಕಿಡ್ನಿ ಆರೋಗ್ಯ ಹದಗೆಡುತ್ತಿದ್ದು, ಸಾರ್ವಜನಿಕರು ಉತ್ತಮ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು.

ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾದ ಮ್ಯಾರಥಾನ್ ಕೋಟೆ ಆಂಜನೇಯ ದೇವಾಲಯ ಮಾರ್ಗವಾಗಿ ಎಸ್ ಐಟಿ ಮುಖ್ಯರಸ್ತೆಯಿಂದ ಭದ್ರಮ್ಮ ಚೌಟ್ರಿಯ ಮಾರ್ಗವಾಗಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಯಿತು.

ಪರಿಸರ ಪ್ರೇಮಿ, ಚಿಂತಕ ಸಿ.ಯತಿರಾಜ್, ಸೈಕ್ಲಿಸ್ಟ್ ಹಾಗೂ ವೈದ್ಯ ಡಾ.ಸಿ.ವಿ.ಸ್ವಾಮಿ, ಅಥ್ಲೆಟಿಕ್ ಹಾಗೂ ಅಥ್ಲೆಟಿಕ್ ಡಾ.ರವಿ ರವರಿಗೆ ಸನ್ಮಾನಿಸಿದರು. ಸಶಸ್ತ್ರ ಮೀಸಲು ಪಡೆ ಡಿವೈಎಸ್ಪಿ ನವೀನ್, ಸಿಇಓ ಸಂಜೀವಕುಮಾರ್, ರೂಪಾ ಹಾಗೂ ಈಶ್ವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

click me!