The Kashmir Files ಸಿನಿಮಾ ಉಚಿತ ಪ್ರದರ್ಶನ: ಜನರಿಗೆ ಫ್ರೀ ಶೋ ಏರ್ಪಡಿಸಿದ ಡಿ.ಎನ್.ಜೀವರಾಜ್!

By Suvarna News  |  First Published Apr 1, 2022, 5:10 PM IST

ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಶ್ಮೀರದಲ್ಲಿ ನಡೆದ ಘಟನೆಯನ್ನು ತೆರೆಗೆ ತಂದಿದ್ದಾರೆ. ಇದೀಗ ಮಲೆನಾಡಿನ ಭಾಗವಾದ ಕೊಪ್ಪದಲ್ಲಿ ತನ್ನ ಕ್ಷೇತ್ರದ ಜನರಿಗಾಗಿ ಡಿ ಎನ್ ಜೀವರಾಜ್ ಫ್ರೀ ಶೋ ಏರ್ಪಡಿಸಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಏ.01): 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಚಿತ್ರದ ಮೂಲಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಕಾಶ್ಮೀರದಲ್ಲಿ (Kashmira) ನಡೆದ ಘಟನೆಯನ್ನು ತೆರೆಗೆ ತಂದಿದ್ದಾರೆ. ಕಾಶ್ಮೀರ ಪಂಡಿತರ ಮೇಲಾದ ದೌರ್ಜನ್ಯ, ನಿರಾಶ್ರಿತರು, ಹತ್ಯೆಯನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಈ ಚಿತ್ರ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈಗಾಗಲೇ ರಾಜ್ಯದಲ್ಲಿ 'ದಿ ಕಾಶ್ಮೀರ ಫೈಲ್ಸ್'ಗೆ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಮಲೆನಾಡಿನ ಭಾಗವಾದ ಕೊಪ್ಪದಲ್ಲಿ ತನ್ನ ಕ್ಷೇತ್ರದ ಜನರಿಗಾಗಿ ಡಿ ಎನ್ ಜೀವರಾಜ್ (DN Jeevaraj) ಫ್ರೀ ಶೋ ಏರ್ಪಡಿಸಿದ್ದಾರೆ.

Latest Videos

undefined

ಸಿಎಂ ರಾಜಕೀಯ ಕಾರ್ಯದರ್ಶಿಯಿಂದ 'ದಿ ಕಾಶ್ಮೀರಿ  ಫೈಲ್ಸ್' ಚಿತ್ರದ ಫ್ರೀ ಶೋ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜನರಿಗಾಗಿ ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಫ್ರೀ ಶೋ ಏರ್ಪಡಿಸಿದ್ದಾರೆ. ಕೊಪ್ಪದ ಜೆಎಮ್‌ಜೆ ಚಿತ್ರಮಂದಿರದಲ್ಲಿ (JMJ Theatre) 'ದಿ ಕಾಶ್ಮೀರ ಫೈಲ್ಸ್' ಚಿತ್ರವನ್ನು ಗುರುವಾರ ಹಾಕಲಾಗಿದೆ. ಈ ಚಿತ್ರವನ್ನು ತನ್ನ ಶೃಂಗೇರಿ ಕ್ಷೇತ್ರದ ಜನರಿಗೆ ತೋರಿಸುವ ಉದ್ದೇಶದಿಂದ ಶೃಂಗೇರಿ ಕ್ಷೇತ್ರ ಮಾಜಿ ಶಾಸಕ ಹಾಲಿ ಸಿಎಂ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ ಫ್ರೀ ಶೋ ಏರ್ಪಡಿಸಿದ್ದಾರೆ. 

ನನ್ನ ಚಿತ್ರಗಳಿಗೆ ಸ್ಟಾರ್‌ಗಳ ಅಗತ್ಯವಿಲ್ಲ, ನಟರು ಸಾಕು: ಕಂಗನಾ ಕಾಲೆಳೆದ ಕಾಶ್ಮೀರಿ ಫೈಲ್ಸ್ ನಿರ್ದೇಶಕ

ಎರಡು ದಿನ ಎರಡು ಆಟ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಮತ್ತು 3ನೇ ತಾರೀಖು ಎರಡು ಆಟದ ಟಿಕೆಟ್ ಉಚಿತವಾಗಿ ಜನರಿಗೆ ನೀಡಲಾಗುತ್ತಿದೆ. ಎರಡು ದಿನವೂ 10.30 ಹಾಗೂ 1.30ಕ್ಕೆ ಎರಡು ಶೋ ಇದ್ದು, ಜನರು ಈ ಚಿತ್ರವನ್ನು ವೀಕ್ಷಣೆ ಮಾಡಬೇಕಂದು ಸಾಮಾಜಿಕ ಜಾಲದಲ್ಲಿ ಪೋಸ್ಟ್‌ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಮನವಿ ಮಾಡಿದ್ದಾರೆ.

ಚಿತ್ರ ನೋಡಿದ ಮಹಿಳೆ ಕಣ್ಣೀರು: ಕೊಪ್ಪದ ಜೆಎಮ್‌ಜೆ ಚಿತ್ರಮಂದಿರದಲ್ಲಿ ಬಿಜೆಪಿ (BJP) ಕಾರ್ಯಕರ್ತರು, ಜನರೊಂದಿಗೆ ಸಿನಿಮಾವನ್ನು ಡಿ ಎನ್ ಜೀವರಾಜ್ ಇಂದು ವೀಕ್ಷಣೆ ಮಾಡಿದರು. ಚಿತ್ರ ಆರಂಭಕ್ಕೂ ಮುನ್ನ ಭಾರತ್ ಮಾತಾಕಿ ಜೈ ಎನ್ನುವ ಘೋಷಣೆಗಳನ್ನು ಕೂಗಿದರು. ಕುತೂಹಲದಿಂದ ಜನರು ಈ ಚಿತ್ರವನ್ನು ವೀಕ್ಷಣೆ ಮಾಡಿದರು. ಕಾಶ್ಮೀರ ಪಂಡಿತರ ಮೇಲೆ ನಡೆದಂತಹ ದೌರ್ಜನ್ಯವನ್ನು ಈ ಚಿತ್ರದಲ್ಲಿ ಎಳೆಎಳೆಯಾಗಿ ತೋರಿಸಿದ್ದಾರೆ. ಈ ಚಿತ್ರ ನೋಡಿ ಹೊರಬಂದ ಅಂತ ಮಹಿಳೆ ಜೀವರಾಜ್ ಸಮ್ಮುಖದಲ್ಲೇ ಕಣ್ಣೀರು ಹಾಕಿ, ಕಾಶ್ಮೀರ ಪಂಡಿತರಿಗೆ ಸೂಕ್ತ ನ್ಯಾಯ, ಪುನರ್ವಸತಿ ಒದಗಿಸಬೇಕೆಂದು ಮನವಿ ಮಾಡಿದರು. ಈ ಚಿತ್ರವನ್ನು ವೀಕ್ಷಿಸುವಾಗ ಜನರು ಕೇಸರಿ ಶಲ್ಯವನ್ನು ಹಾಕಿದ್ದು ವಿಶೇಷವಾಗಿತ್ತು.

‘ಕಾಶ್ಮೀರಿ ಫೈಲ್ಸ್‌’ ನೋಡಿದ ಬಳಿಕ ಆಘಾತ ಸಹಿಸಲಾಗ್ತಿಲ್ಲ: ‘ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ನೋಡಿದಾಗ ಆದ ಆಘಾತವನ್ನು ಸಹಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಇನ್ನಾದರೂ ನಾವು ಭಾರತೀಯರು ಎಚ್ಚೆತ್ತುಕೊಳ್ಳೋಣ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿ​ದ​ರು. ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅವರೊಂದಿಗೆ ಮಣಿಪಾಲದ ಭಾರತ್‌ ಸಿನೆಮಾಸ್‌ನಲ್ಲಿ ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರ ನೋಡಿದ ಬಳಿಕ ಅವ​ರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಔರಂಗಜೇಬ್‌, ಬಾಬರ್‌, ಘಜನಿಯಂಥವರ ಕಾಲದಲ್ಲಿ ಕೌರ್ಯ ಹೇಗಿತ್ತು ಎಂದು ಕೇಳಿದ್ದೆವು. 

Kashmir Files ನೋಡಿ ಸಲ್ಮಾನ್ ಹೇಳಿದ್ದೇನು ಎಂದು ಬಹಿರಂಗ ಪಡಿಸಿದ ನಟ ಅನುಪಮ್ ಖೇರ್

ಆದರೆ ಅದು ಇವತ್ತಿಗೂ ಜೀವಂತವಾಗಿದೆ ಎನ್ನುವುದನ್ನು ಅರಗಿಸಿಕೊಳ್ಳುವುದೂ ಕಷ್ಟವಾಗುತ್ತಿದೆ ಎಂದು ಶ್ರೀಗಳು ಹೇಳಿದ್ದಾರೆ. ಈ ಕೌರ್ಯದ ವಿರುದ್ಧ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎನ್ನುವುದನ್ನು ಈ ಸಿನಿಮಾದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ನಮ್ಮ ದೇಶದ ಮೇಲೆ ಹೊರಗಿನ ಆಕ್ರಮಣದ ಜೊತೆಗೆ ಆಂತರಿಕ ಆಕ್ರಮಣವನ್ನು ಎಚ್ಚರಿಕೆಯಿಂದ ಎದುರಿಸಬೇಕಾಗಿದೆ ಎನ್ನುವ ಕಟು ಸತ್ಯವನ್ನು ಈ ಸಿನಿ​ಮಾ ತೋರಿಸಿಕೊಟ್ಟಿದೆ ಎಂದರು.

click me!