ಮದುವೆ ಆಮಂತ್ರಣ ಪತ್ರಿಕೆಯಲ್ಲೂ ನರೇಂದ್ರ ಮೋದಿ ಪರ ಪ್ರಚಾರ!

By Kannadaprabha News  |  First Published Jan 30, 2024, 10:06 AM IST

ಮದುವೆ ಆಮಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರ ಸಹಿತ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡಿದರೆ ನನ್ನ ಮದುವೆಗೆ ನಿಜವಾದ ಉಡುಗೊರೆ ಎಂದು ಮುದ್ರಿಸುವ ಮೂಲಕ ಮೋದಿ ಅಭಿಮಾನಿಗಳು ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ.


ರಬಕವಿ-ಬನಹಟ್ಟಿ (ಜ.30): ಮದುವೆ ಆಮಮಂತ್ರಣ ಪತ್ರಿಕೆಯಲ್ಲಿ ನರೇಂದ್ರ ಮೋದಿಯವರ ಭಾವಚಿತ್ರ ಸಹಿತ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ನೀಡಿದರೆ ನನ್ನ ಮದುವೆಗೆ ನಿಜವಾದ ಉಡುಗೊರೆ ಎಂದು ಮುದ್ರಿಸುವ ಮೂಲಕ ಮೋದಿ ಅಭಿಮಾನಿಗಳು ಸದ್ದಿಲ್ಲದೆ ಪ್ರಚಾರ ನಡೆಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯಲ್ಲಿ ವಧುವಿನ ಕಡೆಯವರು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಮತಯಾಚಿಸಿ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ. ಲಗ್ನ ಪತ್ರಿಕೆ ಮೂಲಕ ಚುನಾವಣೆ ಪ್ರಚಾರ ಬಲು ಜೋರಾಗಿ ನಡೆಯುತ್ತಿದೆ.

Tap to resize

Latest Videos

undefined

ನಮ್ಮ ಶಿಕ್ಷಣ ವ್ಯವಸ್ಥೆಯೇ ಸರಿಯಿಲ್ಲ, ಇದು ಪ್ರಜ್ಞಾಹೀನ ವ್ಯವಸ್ಥೆ: ನಿರ್ಭಯಾನಂದ ಸರಸ್ವತಿ ಸ್ವಾಮೀಜಿ

ಬನಹಟ್ಟಿಯ ಪ್ರಭು ಕರಲಟ್ಟಿ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಹೀಗಾಗಿ ಪುತ್ರಿಯ ವಿವಾಹ ಆಮಂತ್ರಣದಲ್ಲಿ ಮೋದಿ ಭಾವಚಿತ್ರ ಮುದ್ರಿಸಿ ಮೋದಿಯನ್ನು ಮತ್ತೊಮ್ಮೆ ಬೆಂಬಲಿಸಬೇಕೆಂದು ಸಂದೇಶ ಸಾರಿದ್ದಾರೆ. ಜ.೨೮ರಂದು ವಿವಾಹ ನಡೆದಿದ್ದು, ಗಂಡಿನ ಮನೆಯವರನ್ನೂ ಒಪ್ಪಿಸಿ ಆಮಂತ್ರಣ ಪತ್ರಿಕೆಯಲ್ಲಿ ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ-೨೦೨೪ ಎಂದು ಕಮಲ ಚಿಹ್ನೆಯ ಮೂಲಕ ಟ್ಯಾಗ್‌ ಲೈನ್ ಜನರನ್ನು ಆಕರ್ಷಿಸುತ್ತಿದೆ. ಅಂದಾಜು ೨ ಸಾವಿರಕ್ಕೂ ಅಧಿಕ ಲಗ್ನ ಪತ್ರಿಕೆಗಳನ್ನು ಮುದ್ರಣ ಮಾಡಿಸಿದ್ದಾರೆ.

 

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಜೊತೆ ಕೈಜೋಡಿಸಲು ಸಿದ್ಧ ಎಂದ ಜನಾರ್ದನರೆಡ್ಡಿ!

click me!