ಪೊಲೀಸರು ದೌರ್ಜನ್ಯ: ರೈತ ಮಹಿಳೆಗೆ ನ್ಯಾಯ ಕೊಡಿಸಲು ರೈತ ಸಂಘ ಒತ್ತಾಯ

By Kannadaprabha NewsFirst Published Jan 30, 2024, 9:08 AM IST
Highlights

ಸೋಲಾರ್‌ ಕಂಪನಿಯ ಮಾಲೀಕರ ಜತೆ ಶಾಮೀಲಾತಿ ಹಿನ್ನೆಲೆ, ಕಾಮಗಾರಿ ತಡೆಯಲು ಹೋದ ಬಡ ರೈತ ಮಹಿಳೆ ಮೇಲೆ ಸ್ಥಳೀಯ ಪೊಲೀಸರು ದೌರ್ಜನ್ಯವೆಸಗಿ ಹಿಗ್ಗಾಮುಗ್ಗಾ ಹಲ್ಲೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಗೃಹಮಂತ್ರಿಗೆ ಒತ್ತಾಯಿಸಿ ತಾಲೂಕು ರೈತ ಸಂಘದ ಸೋಮವಾರ ಪ್ರತಿಭಟನೆ ನಡೆಸಿದರು.

 ಪಾವಗಡ :  ಸೋಲಾರ್‌ ಕಂಪನಿಯ ಮಾಲೀಕರ ಜತೆ ಶಾಮೀಲಾತಿ ಹಿನ್ನೆಲೆ, ಕಾಮಗಾರಿ ತಡೆಯಲು ಹೋದ ಬಡ ರೈತ ಮಹಿಳೆ ಮೇಲೆ ಸ್ಥಳೀಯ ಪೊಲೀಸರು ದೌರ್ಜನ್ಯವೆಸಗಿ ಹಿಗ್ಗಾಮುಗ್ಗಾ ಹಲ್ಲೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಗೃಹಮಂತ್ರಿಗೆ ಒತ್ತಾಯಿಸಿ ತಾಲೂಕು ರೈತ ಸಂಘದ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ನೂರಾರು ಮಂದಿ ಸಂಘದ ಮುಖಂಡರು, ಕಾಲ್ನಡಿಗೆಯಲ್ಲಿ ಆಗಮಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವ ಮಹಿಳೆಯ ಮೇಲೆ ದೌರ್ಜನ್ಯ ನಿರತ ಡಿವೈಎಸ್‌ಪಿ ಹಾಗೂ ಸ್ಥಳೀಯ ಪೊಲೀಸರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Latest Videos

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬಿ. ದೊಡ್ಡಹಟ್ಟಿಯ ಪೂಜಾರಪ್ಪ ಮಾತನಾಡಿ, ತಾಲೂಕಿನ ಕಡಪಲಕರೆ ಗ್ರಾಮದ ವಾಸಿ ರೈತ ಪಾತನ್ನ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಸ್ಥಳೀಯ ಸೋಲಾರ್‌ ಕಂಪನಿಯೊಂದರ ಮಾಲೀಕರು, ಅಂಬಿಕ ಹೆಸರಿನ ಎರಡು ಎಕರೆ ಜಮೀನಿನಲ್ಲಿ ಸೌರಶಕ್ತಿ ಘಟಕಕ್ಕೆ ಮುಂದಾಗಿದ್ದು, ಈ ವೇಳೆ ಜಮೀನಿಗೆ ಧಾವಿಸಿ ಕಾಮಗಾರಿ ತಡೆಯಲು ಮುಂದಾದ ವೇಳೆ ಸ್ಥಳಕ್ಕೆ ದಾವಿಸಿದ ಸ್ಥಳೀಯ ಪೊಲೀಸರು ಲಕ್ಷ್ಮೀದೇವಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರು ಆಕೆಯನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಪಾವಗಡ ಠಾಣೆಗೆ ಕರೆತಂದು ಮಧುಗಿರಿ ಡಿವೈಎಸ್‌ಪಿ ಆಗಮಿಸಿ ಮಹಿಳೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ. ಕಾನೂನು ಬಾಹೀರವಾಗಿ ರಾತ್ರೋರಾತ್ರಿ ಸೋಲಾರ್‌ ಕಂಪನಿಗೆ ಸೇರಿದ್ದ ಖಾಸಗಿ ವಾಹನದಲ್ಲಿ ಬೆಂಗಳೂರಿಗೆ ಕರೆದ್ಯೊಯ್ದು ಅಲ್ಲಿನ ಪರಪ್ಪಹಾರ ಜೈಲಿಗೆ ಹಾಕಿಸಿದ್ದಾರೆ. ಈ ಘಟನೆ ಕುರಿತು ಸಮಗ್ರ ತನಿಖೆ ನಡೆಬೇಕು. ತಪ್ಪಿಸ್ಥ ಪೊಲೀಸರು ವಿರುದ್ಧ ಸೂಕ್ತ ಕ್ರಮ ಜಗಿರಿಸುವಂತೆ ಗೃಹಮಂತ್ರಿ ಡಾ.ಜಿ. ಪರಮೇಶ್ವರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಲ್ಲಿ ಮನವಿ ಮಾಡಿದರು.

ಸಂತ್ರಸ್ಥ ಮಹಿಳೆ ಲಕ್ಷ್ಮೀದೇವಿ ಮಾತನಾಡಿ, ತಮ್ಮ ಪುತ್ರಿಗೆ ಸೇರಿದ ಜಮೀನಿನಲ್ಲಿ ಸೋಲಾರ್‌ ಕಂಪನಿಯ ಮಾಲೀಕರು ಸೌರಶಕ್ತಿ ಶಕ್ತಿ ಘಟಕ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಪುತ್ರಿ ಅಂಬಿಕಾ ಸೋಲಾರ್‌ಗೆ ಜಮೀನು ನೀಡಿಲ್ಲ. ಕಾಮಗಾರಿ ತಡಯಲು ಹೋದ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪಟ್ಟಣದ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಮಧುಗಿರಿ ಡಿವೈಎಸ್‌ಪಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿಗೆ ಕರೆದ್ಯೊಯ್ದು ಪರಪ್ಪನ ಸೆಂಟ್ರಲ್‌ ಜೈಲಿಗೆ ಹಾಕಿಸಿದ್ದಾರೆ. ಬಳಿಕ ಬೇಲ್‌ ಮೇಲೆ ಹೊರಬಂದಿದ್ದೇನೆ. ಸಿಸಿಕ್ಯಾಮೆರಾ ಪರಿಶೀಲಿಸಿ, ನನ್ನ ತಪ್ಪಿದ್ದರೆ ನ್ಯಾಯಕ್ಕೆ ತಲೆಬಾಗುವೆ. ನನ್ನ ಪುತ್ರಿಯ ಹೆಸರಿನ ಜಮೀನಿನ ದಾಖಲೆ ಪರಿಶೀಲಿಸಿ, ಎಲ್ಲಾದರೂ ಸೋಲಾರ್‌ ಕಂಪನಿಗೆ ಜಮೀನು ನೀಡಿದ ಬಗ್ಗೆ ಸಹಿ ಇದ್ದರೆ ನೀವು ಹೇಳಿದ ಶಿಕ್ಷೆಗೆ ಒಳಪಡುತ್ತೇನೆ ಎಂದು ಆಳಲು ವ್ಯಕ್ತಪಡಿಸಿ ಗೃಹಮಂತ್ರಿಗೆ ನ್ಯಾಯಕ್ಕೆ ಆಗ್ರಹಿಸಿದರು.

ಇದೇ ವೇಳೆ ನರಸಪ್ಪ, ಈರಪ್ಪ, ಸದಾಶಿವಪ್ಪ ಮಂಜುನಾಥ್‌, ಬ್ಯಾಡನೂರು ಶಿವು, ವೀರಭದ್ರಪ್ಪ ಕನ್ನಮೇಡಿ ಕೃಷ್ಣಮೂರ್ತಿ, ಗುಡಿಪಲ್ಲಪ್ಪ ರಾಮಾಂಜಿನಪ್ಪ, ಹನುಮಂತರಾಯಪ್ಪ, ನರಸಿಂಹಪ್ಪ, ಸಿದ್ದಪ್ಪ ಚಂದ್ರು ತಿಪ್ಪೇಸ್ವಾಮಿ, ನಾಗರಾಜಪ್ಪ ಸಿದ್ದಪ್ಪ ರವಿಕುಮಾರ್‌ ಇತರೆ ಆನೇಕ ಮಂದಿ ರೈತ ಘಟಕದ ಮುಖಂಡರಿದ್ದರು.

click me!