Bhartiya Jain Milan: ಜೈನರಲ್ಲಿ ಕುಸಿದ ಸಂಗೀತ ವಿದ್ಯೆ: ಮುನಿಶ್ರೀ ಆತಂಕ

By Kannadaprabha NewsFirst Published Jan 9, 2023, 11:29 AM IST
Highlights

 ಜೈನರಲ್ಲಿದ್ದ ಅಪಾರ ಸಂಗೀತ ವಿದ್ಯೆಯು ನಶಿಸುವ ಹಂತ ತಲುಪಿದೆ ಎಂದು ಮುನಿಶ್ರೀ 108 ಅಮೋಘ ಕೀರ್ತಿ ಮಹಾರಾಜ ಆತಂಕ ವ್ಯಕ್ತಪಡಿಸಿದರು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ಜೈನ್‌ ಮಿಲನ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಜಿನ ಭಜನಾ’ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬೆಂಗಳೂರು (ಜ.9) : ಜೈನರಲ್ಲಿದ್ದ ಅಪಾರ ಸಂಗೀತ ವಿದ್ಯೆಯು ನಶಿಸುವ ಹಂತ ತಲುಪಿದೆ ಎಂದು ಮುನಿಶ್ರೀ 108 ಅಮೋಘ ಕೀರ್ತಿ ಮಹಾರಾಜ ಆತಂಕ ವ್ಯಕ್ತಪಡಿಸಿದರು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾರತೀಯ ಜೈನ್‌ ಮಿಲನ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಜಿನ ಭಜನಾ’ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೈನರಲ್ಲಿ ಆಳವಾದ ಸಂಗೀತ ವಿದ್ಯೆ ಇತ್ತು. ಆದರೆ, ಇಂದು ಅದು ನಶಿಸಿಹೋಗುವ ಹಂತಕ್ಕೆ ತಲುಪಿದೆ. ಆದರೆ, ಪ್ರಾಚೀನ ಸಂಸ್ಕೃತಿಯ ಸಂಗೀತವನ್ನು ಜಿನ ಭಜನೆ ಮೂಲಕ ಕರ್ನಾಟಕದಲ್ಲಿ ಜೀವಂತವಾಗಿರಿಸಲಾಗಿದೆ. ನಶಿಸಿಹೋಗುತ್ತಿದ್ದ ನಮ್ಮ ಸಂಸ್ಕೃತಿಯ ಭಾಗವಾದ ಜಿನ ಭಜನೆಯನ್ನು ಮತ್ತೆ ಜೀವಂತವಾಗಿರುವಂತೆ ಮಾಡಿರುವುದು ಉತ್ತಮ ಕೆಲಸ ಎಂದರು.

ಕರ್ನಾಟಕಕ್ಕೆ ಹೆಗ್ಗೆಡೆ ಪರಿವಾರದಂತಹ ದೊಡ್ಡ ನಾಯಕರು ಸಿಕ್ಕಿರುವುದರಿಂದ ನಮ್ಮ ಪ್ರಾಚೀನ ಪರಂಪರೆಗಳು ಇನ್ನೂ ರಾಜ್ಯದಲ್ಲಿ ಆಚರಣೆಯಲ್ಲಿದೆ. ಗೀತ, ನೃತ್ಯ, ವಾದ್ಯ ಈ ಮೂರು ಸೇರಿರುವುದನ್ನು ಸಂಗೀತಾ ಎನ್ನುತ್ತೇವೆ. ಜಿನ ಭಜನೆಯಲ್ಲಿ ಈ ಸಂಗೀತ ಇದೆ. ತೀರ್ಥಂಕರರು ತಮ್ಮ ದ್ವಾದಶಾಂಕದಲ್ಲಿ ಸಂಗೀತ, ಗೀತ, ನೃತ್ಯ ಶಾಸ್ತ್ರಗಳನ್ನು ಹಲವು ರೀತಿಯಲ್ಲಿ ವರ್ಣನೆ ಮಾಡಿದ್ದಾರೆ ಎಂದು ಹೇಳಿದರು.

ಸಾಹಿತ್ಯ, ಸಂಗೀತದಿಂದ ನೆಮ್ಮದಿ, ವ್ಯಕ್ತಿತ್ವ ಪರಿಪೂರ್ಣ

ಮುನಿಶ್ರೀ 108 ಅಮರ ಕೀರ್ತಿ ಮಹಾರಾಜರು ಮಾತನಾಡಿ, ಜಿನ ಭಜನಾ ಮೂಲಕ ತೋರಿದ ಜೈನ ಸಮುದಾಯದವರು ತೋರಿದ ಭಕ್ತಿ, ಸಂಸ್ಕಾರಗಳು ಅತ್ಯಂತ ಶ್ರೇಷ್ಠವಾಗಿದೆ. ಭಜನೆಗಳ ಮೂಲಕ ಜಿನೇಂದ್ರ ಭಗವಾನ್‌ ಅವರ ಬಗ್ಗೆ ತೋರಿದ ಭಕ್ತಿಯು ಜೈನ ಸಂಸ್ಕೃತಿಯ ಮಹತ್ವವನ್ನು ಇನ್ನಷ್ಟುಹೆಚ್ಚಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ‘ಜಿನ ಭಜನಾ’ ಸ್ಪರ್ಧೆ ಸೀಸನ್‌-6 ಭಾಗವಹಿಸಿ ವಿಜೇತರಾದ ಭಜನಾ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ವೇಳೆ ನವದೆಹಲಿಯ ಭಾರತೀಯ ಜೈನ್‌ ಮಿಲನ್‌ನ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್‌, ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್‌, ಸಂಗೀತ ನಿರ್ದೇಶಕ ಡಾ.ವಿ.ನಾಗೇಂದ್ರ ಪ್ರಸಾದ್‌, ಗಾಯಕಿ ಡಾ.ಶಮಿತಾ ಮಲ್ನಾಡ್‌ ಉಪಸ್ಥಿತರಿದ್ದರು.

ಖಿನ್ನತೆ ಓಡಿಸುವ ಸಂಗೀತ ಕೇಳೋ ಸಮಯ ಗೊತ್ತಿರಲಿ

ಭಾರತೀಯ ಜೈನ್‌ ಮಿಲನ್‌ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ‘ಜಿನ ಭಜನಾ’ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ನವದೆಹಲಿಯ ಭಾರತೀಯ ಜೈನ್‌ ಮಿಲನ್‌ನ ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್‌, ಉಪಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್‌, ಸಂಗೀತ ನಿರ್ದೇಶಕ ಡಾ.ವಿ.ನಾಗೇಂದ್ರ ಪ್ರಸಾದ್‌, ಗಾಯಕಿ ಡಾ.ಶಮಿತಾ ಮಲ್ನಾಡ್‌ ಮತ್ತಿತರರು ಉಪಸ್ಥಿತರಿದ್ದರು.

click me!