ಜಿಲ್ಲೆಯಲ್ಲಿ ಮೇ.21 ರಂದು ಬಿದ್ದ ಮಳೆಯ ವಿವರದನ್ವಯ 13.6 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ. 79.40 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
ದಾವಣಗೆರೆ (ಮೇ.22): ಜಿಲ್ಲೆಯಲ್ಲಿ ಮೇ.21 ರಂದು ಬಿದ್ದ ಮಳೆಯ ವಿವರದನ್ವಯ 13.6 ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ. 79.40 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ. ಚನ್ನಗಿರಿಯಲ್ಲಿ ವಾಡಿಕೆ ಮಳೆ 2.5 ಮಿ.ಮೀ ಹಾಗೂ ವಾಸ್ತವ ಮಳೆ 9.5 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 1.0 ಮಿ.ಮೀ ಹಾಗೂ ವಾಸ್ತವ ಮಳೆ 19.5 ಮಿ.ಮೀ, ಹರಿಹರದಲ್ಲಿ ವಾಡಿಕೆ ಮಳೆ 1.1 ಮಿ.ಮೀ ಹಾಗೂ ವಾಸ್ತವ ಮಳೆ 17.2 ಮಿ.ಮೀ, ಹೊನ್ನಾಳಿ ವಾಡಿಕೆ ಮಳೆ 2.4 ಮಿ.ಮೀ ಹಾಗೂ ವಾಸ್ತವ ಮಳೆ 9.0 ಮಿ.ಮೀ, ಜಗಳೂರು ವಾಡಿಕೆ ಮಳೆ 1.9 ಮಿ.ಮೀ ಹಾಗೂ ವಾಸ್ತವ ಮಳೆ 13.7 ಮಿ.ಮೀ, ನ್ಯಾಮತಿಯಲ್ಲಿ ವಾಡಿಕೆ ಮಳೆ 2.5 ಮಿ.ಮೀ ಹಾಗೂ ವಾಸ್ತವ ಮಳೆ 14.1 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 01 ಪಕ್ಕಾಮನೆ ಭಾಗಶ: ಹಾನಿಯಾಗಿದ್ದು, ಹಾಗೂ 150 ಎಕರೆ ಭತ್ತದ ಬೆಳೆ ಹಾನಿಯಾಗಿದ್ದು ರೂ.30.60 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ದಾವಣಗೆರೆ ತಾಲ್ಲೂಕಿನ ಹಿರೇತೊಗಲೇರಿಯಲ್ಲಿ ಆಲಿಕಲ್ಲು ಮಳೆಗೆ 250 ಕ್ಕು ಹೆಚ್ಚು ಭತ್ತದ ಬೆಳೆ ನಾಶವಾಗಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 02 ಕಚ್ಚಾಮನೆ ಭಾಗಶ: ಹಾನಿಯಾಗಿದ್ದು, 295 ಎಕರೆ ಭತ್ತ ಹಾನಿಯಾಗಿದ್ದು ಒಟ್ಟು ರೂ.18.93 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 01 ಕಚ್ಚಾಮನೆ ತೀವ್ರ ಹಾನಿಯಾಗಿದು, 10 ಕಚ್ಚಾಮನೆ ಭಾಗಶಃ ಹಾನಿಯಾಗಿದ್ದು, ಹಾಗೂ 30 ಎಕರೆ ಅಡಿಕೆ, 38 ಎಕರೆ ಬಾಳೆ, 20 ಎಕರೆ ಪಪ್ಪಾಯಿ ಬೆಳೆ ಹಾನಿಯಾಗಿದ್ದು, ಮತ್ತು 01 ಎತ್ತು ಮೃತಪಟ್ಟಿದ್ದು ಒಟ್ಟು ರೂ.29.87 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ: ಸಚಿವ ಮುನಿಯಪ್ಪ
ಮಳೆಗಿಂತ ಗುಡುಗು, ಮಿಂಚಿನ ಅಬ್ಬರ ಜೋರು: ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಸೋಮವಾರ ಸಂಜೆ ಭಾರೀ ಮಳೆ, ಮತ್ತೆ ಕೆಲವೆಡೆ ಸಾಧಾರಣ ಮಳೆಯಾಗಿದೆ. ಆದರೆ ಮಳೆಗಿಂತ ಗುಡುಗು, ಮಿಂಚಿನ ಅಬ್ಬರ ಜೋರಾಗಿತ್ತು. ಹಳಿಯಾಳದಲ್ಲಿ ಅರ್ಧ ಗಂಟೆ ಕಾಲ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆ ಸುರಿಯಿತು. ಯಲ್ಲಾಪುರದಲ್ಲಿ ಜಿಟಿಜಿಟಿ ಮಳೆ ಶುರುವಾಗಿ ರಾತ್ರಿ 8 ಗಂಟೆಗೆ ಭಾರಿ ಮಳೆ ಆರಂಭವಾಗಿದೆ. ಜೋಯಿಡಾದಲ್ಲಿ ಕೂಡ ಗುಡುಗು, ಮಿಂಚಿನೊಂದಿಗೆ ಅಬ್ಬರದಿಂದ ಮಳೆ ಸುರಿದಿದೆ. ಕಾರವಾರ, ಅಂಕೋಲಾ, ಕುಮಟಾದಲ್ಲಿ ರಾತ್ರಿ 8 ಗಂಟೆಗೆ ಗುಡುಗು ಮಿಂಚು ಆರಂಭವಾಗಿ ಜಿಟಿಜಿಟಿ ಮಳೆಯಾಗಿದೆ.
ಶಿರಸಿಯಲ್ಲೂ ಅರ್ಧ ಗಂಟೆ ಕಾಲ ಭಾರಿ ಮಳೆ ಸುರಿದಿದೆ. ಭಟ್ಕಳದಲ್ಲಿ ಭಾನುವಾರ ರಾತ್ರಿ ಸುಮಾರು ಒಂದು ಗಂಟೆ ಕಾಲ ಮಳೆಯಾಗಿದೆ. ಕೆಲವೆಡೆ ಬಿರುಗಾಳಿಯೊಂದಿಗೆ ಮಳೆ ಸುರಿದಿದೆ. ಗುಡುಗು ಮಿಂಚಿನ ಅಬ್ಬರ ಆರಂಭವಾಗುತ್ತಿದ್ದಂತೆ ಎಲ್ಲೆಡೆ ವಿದ್ಯುತ್ ವ್ಯತ್ಯಯ ಆಗಿದೆ. ಯಲ್ಲಾಪುರದಲ್ಲಿ ದೂರವಾಣಿ, ನೆಟ್ ವರ್ಕ ಕೂಡ ಕೈಕೊಟ್ಟಿದೆ. ಕಾರವಾರ ನಗರದಲ್ಲೂ 8 ಗಂಟೆಗೆ ವಿದ್ಯುತ್ ಕೈಕೊಟ್ಟಿದ್ದರಿಂದ ನಗರದಲ್ಲಿ ಕತ್ತಲೆ ಆವರಿಸಿದೆ. ಬಿರು ಬಿಸಿಲು, ಸೆಕೆಯಿಂದ ಬಸವಳಿದಿದ್ದ ಜನತೆಗೆ ಮಳೆ ತಂಪೆರೆದಿದೆ. ಇನ್ನು ಅಡಕೆ, ತೆಂಗಿನ ತೋಟಗಳಿಗೂ ನೀರುಣಿಸಿದಂತಾಗಿದೆ.
ತಾತ, ಅಪ್ಪನಂತೆ ಸೋಲದೆ ಗೆದ್ದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್!
ಮಳೆ ಅಬ್ಬರಕ್ಕೆ ಚರಂಡಿ,ರಸ್ತೆ ಜಲಾವೃತ್ತ: ಕುಷ್ಟಗಿ ತಾಲೂಕಿನ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಆಲಿಕಲ್ಲು ಮಳೆಯಾದ ಹಿನ್ನೆಲೆಯಲ್ಲಿ ಗ್ರಾಮದ ಚರಂಡಿ, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ತಾಲೂಕಿನ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳಲ್ಲಿ ಗುಡುಗು ಸಿಡಿಲು ಬಿರುಗಾಳಿ ಸಮೇತ ಸುಮಾರು ಒಂದೂವರೇ ತಾಸುಗಳ ಕಾಲ ಮಳೆಯಾಗಿದ್ದರ ಪರಿಣಾಮ ಗ್ರಾಮಗಳಲ್ಲಿ ಇರುವ ರಸ್ತೆಗಳು,ಚರಡಿಗಳು ತುಂಬಿ ತುಳುಕುವ ಮೂಲಕ ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು.