ನಗರಕ್ಕೆ ಯುವಕರಿಂದ ದೇಶ ಕಟ್ಟುವ ಸಂಕಲ್ಪ : ರಾಮದಾಸ್

By Kannadaprabha News  |  First Published Mar 26, 2023, 5:18 AM IST

ಯುವಕರು ದೇಶ ಕಟ್ಟುವ ಸಂಕಲ್ಪ ಮಾಡಿದ್ದು, ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.


  ಮೈಸೂರು :  ಯುವಕರು ದೇಶ ಕಟ್ಟುವ ಸಂಕಲ್ಪ ಮಾಡಿದ್ದು, ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಯುವಮೋರ್ಚಾ ಸಮಾವೇಶದ ಹಿನ್ನೆಲೆಯಲ್ಲಿ ಕೆ.ಆರ್‌. ಕ್ಷೇತ್ರದಲ್ಲಿ ಬೈಕ್‌  Rallyಗೆ ಚಾಲನೆ ನೀಡಿ ಅವರು ಮಾತನಾಡಿದರು.

Latest Videos

undefined

ಯುವ ಸಮುದಾಯವೇ ಇಂದು ದೇಶದ ಆಸ್ತಿ. ಅಂತಹ ಸಮುದಾಯ ಇಂದು ಸದೃಢ ದೇಶ ಕಟ್ಟುವ ನಿಟ್ಟಿನಲ್ಲಿ ತನ್ನ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಆ ಸಮುದಾಯಕ್ಕೆ ಸೂಕ್ತ ಮಾರ್ಗದರ್ಶನ ಹಾಗೂ ನೈತಿಕ ಬೆಂಬಲ ನೀಡುವ ಕೆಲಸ ಆಗಬೇಕು ಎಂದರು.

ಯುವಮೋರ್ಚಾ ಸಮಾವೇಶಕ್ಕೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಿಂದ ಸುಮಾರು 500 ಬೈಕುಗಳಲ್ಲಿ ಒಂದು ಸಾವಿರ ಮಂದಿ ಸಂಘಟನಾತ್ಮಕವಾಗಿ ಹೆಜ್ಜೆ ಇಟ್ಟಿರುವುದು ಒಗ್ಗಟನ್ನು ಪ್ರದರ್ಶಿಸುತ್ತಿದೆ. ಈ ಒಗ್ಗಟ್ಟು ಸದಾಕಾಲ ಹೀಗೆ ಇರಲಿ ಎಂದು ಆಶಿಸಿದರು.

ಈ ವೇಳೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮನು ಶೈವ, ಮುಖಂಡರಾದ ಸಂತೋಷ್‌ ಶಂಭು, ಹೇಮಂತ್‌ ಕುಮಾರ್‌ ಅವರು ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಇದ್ದರು.

6 ತಿಂಗಳಲ್ಲಿ ಕಸ ಮುಕ್ತ ಕ್ಷೇತ್ರ

  ಮೈಸೂರು :  ಮುಂದಿನ ಆರು ತಿಂಗಳಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ಕಸದಿಂದ ಮುಕ್ತವಾಗಲಿದೆ ಎಂದು ಶಾಸಕ ಎಸ್‌.ಎ. ರಾಮದಾಸ್‌ ತಿಳಿಸಿದರು.

5ನೇ ಯೋಗಕ್ಷೇಮ ಯಾತ್ರೆ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 49 ವಾರ್ಡಿನ ನೂರೊಂದು ಗಣಪತಿ ವೃತ್ತದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಬಹುದೊಡ್ಡ ಸಮಸ್ಯೆ ಆಗಿದ್ದ ಕಸಕ್ಕೆ ಸದ್ಯದಲ್ಲೇ ಮುಕ್ತಿ ದೊರೆಯುತ್ತದೆ. ಈ ತಿಂಗಳಲ್ಲಿ ಕೆಸರೆ ಪ್ಲಾಂಟ್‌ ತೆರೆಯುತ್ತಿದ್ದು, 200 ಟನ್‌ ಕಸ ಅಲ್ಲಿಗೆ ಶಿಫ್ಟ… ಆಗಲಿದೆ. ಇನ್ನು 3 ತಿಂಗಳಲ್ಲಿ ರಾಯನಕೆರೆ ಪ್ಲಾಂಟ್‌ ತೆರೆಯಲಿದ್ದು, ಆನಂತರ ಅಲ್ಲಿಗೆ 200 ಟನ್‌ ಕಸ ರವಾನೆ ಆಗಲಿದೆ. ಆಗ ಕಸದ ಹೊರೆ ತಗ್ಗಲಿದೆ ಎಂದರು.

ಕಸ ವಿಲೇವಾರಿಗೆ ಪ್ರಧಾನಿಗಳು ಪ್ರತಿ ಜಿಲ್ಲೆಗೆ ಹಣ ನೀಡಿದ್ದು, . 56 ಕೋಟಿಗಳಿಗೆ ಇಲ್ಲಿನ ಟೆಂಡರ್‌ ಆಗಿದೆ. ಮುಂದಿನ ಆರು ತಿಂಗಳಲ್ಲಿ ಇಲ್ಲಿನ ಕಸ ಸಿಮೆಂಟ್‌ ಕೈಗಾರಿಕಗೆ ಹೋಗಲಿದೆ. ಮಾತ್ರವಲ್ಲ, ಕ್ಷೇತ್ರ ವ್ಯಾಪ್ತಿಯಲ್ಲಿ 100 ಕಡೆ ಸ್ವಚ್ಛತಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರ ಕಸಮುಕ್ತ ಕ್ಷೇತ್ರ ಆಗಲಿದೆ ಎಂದು ತಿಳಿಸಿದರು.

ಕ್ಷೇತ್ರದ ಕೆಲ ಕಡೆಗಳಲ್ಲಿ ಇತ್ತೀಚೆಗೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಮಾತ್ರವಲ್ಲ, 30 ಎಂಎಲ್‌ಡಿ ನೀರನ್ನು ಹೆಚ್ಚುವರಿಯಾಗಿ ಕ್ಷೇತ್ರಕ್ಕೆ ತರಲಾಗುತ್ತಿದೆ. ಇದರಿಂದಾಗಿ ನೀರಿನ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂದರು.

ಮಹತ್ವದ ಜವಾಬ್ದಾರಿ

 ಮೈಸೂರು (ಅ.14):  ಟಿ. ನರಸೀಪುರ (T Narasipura) ವಿಧಾನಸಭಾ ಕ್ಷೇತ್ರವನ್ನು (Constituency) ಮುಂದಿನ ಚುನಾವಣೆಯಲ್ಲಿ (Election) ಬಿಜೆಪಿ (BJP) ಗೆಲ್ಲಿಸುವ ದೃಷ್ಟಿಯಿಂದ ಕ್ಷೇತ್ರದಲ್ಲಿ ಸಂಘಟನಾತ್ಮಕವಾಗಿ ಬಲಪಡಿಸಲು ಮಾಜಿ ಸಚಿವ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ (SA Ramadas) ಅವರನ್ನು ಉಸ್ತುವಾರಿಯಾಗಿ ನೇಮಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದರು.

ವಿದ್ಯಾರಣ್ಯಪುರಂನ ಶಾಸಕರ ಕಚೇರಿಯಲ್ಲಿ ನಡೆದ ಮೊದಲ ಸಭೆಯಲ್ಲಿ ಕ್ಷೇತ್ರದ ಮುಖಂಡರೊಡನೆ ಮಾತುಕತೆ ನಡೆಸಿದರು. ಸಭೆಯಲ್ಲಿ ಟಿ. ನರಸೀಪುರ ವಿಧಾನ ಮಂಡಲದ ಬಿಜೆಪಿ (BJP) ಪದಾಧಿಕಾರಿಗಳ ಅಭಿಪ್ರಾಯಗಳನ್ನು ಆಲಿಸಿದ ಶಾಸಕರು ಮಾತನಾಡಿ, ಟಿ. ನರಸೀಪುರ ಮಂಡಲದ ಬಿಜೆಪಿಯಲ್ಲಿ ಸಂಘಟನೆಯ ಜವಬ್ದಾರಿಯನ್ನು ನನಗೆ ನೀಡಿದ್ದು ಇನ್ನು ಮುಂದೆ ಬೂತ್‌ ಮಟ್ಟದಿಂದ ಕಾರ್ಯಕರ್ತರನ್ನು ಬಲಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ (Central Govt) ಯೋಜನೆಯನ್ನು ಸಾರ್ವಜನಿಕರಿಗೆ ತಲುಪುವಂತೆ ಮಾಡಬೇಕು ಎಂದು ತಿಳಿಸದರು.

ಬೊಮ್ಮಾಯಿ ಸಾಹೇಬ್ರು ಕ್ಯಾಪ್ಟನ್, 29 ಪ್ಲೇಯರ್ಸ್, ನೋಡುವವರು ಕರ್ನಾಟಕದ 7 ಕೋಟಿ ಜನ!

ರಾಜ್ಯ ಸಂಘಟನೆಯು ಒಂದು ಕ್ಷೇತ್ರದ ಜವಬ್ದಾರಿ ತೆಗೆದುಕೊಳ್ಳಬೇಕು. ನನಗೆ ಯಾವ ಕ್ಷೇತ್ರ ಬೇಕೋ ಆ ಕ್ಷೇತ್ರದ ಆಯ್ಕೆಯನ್ನು ಮಾಡಲು ತಿಳಿಸಿತು. ಆದರೆ ನಾನು ಯಾವ ಕ್ಷೇತ್ರ ಕಷ್ಟಕರವಾಗಿದೆ ಆ ಕ್ಷೇತ್ರವನ್ನೇ ನನಗೆ ಜವಬ್ದಾರಿ ನೀಡಲು ಕೋರಿದ ನಂತರ ಟಿ.ನರಸೀಪುರದ ಜವಾಬ್ದಾರಿ ನೀಡಿರುತ್ತಾರೆ. ಪ್ರತಿಯೊಬ್ಬರು ಟಿ. ನರಸೀಪುರ ಕ್ಷೇತ್ರವನ್ನು ಬಿಜೆಪಿ ಕ್ಷೇತ್ರವನ್ನಾಗಿಸಲು ದುಡಿಯಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ಮಾಜಿ ಶಾಸಕ ಭಾರತೀ ಶಂಕರ್‌, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿ. ರಮೇಶ್‌, ಮೈಸೂರು ವಿಭಾಗದ ಪ್ರಭಾರಿ ಮೈ.ವಿ. ರವಿಶಂಕರ್‌ ಇದ್ದರು.

click me!