ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ, ಪಕ್ಷವನ್ನು ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಸೋನಿಯಾ ಗಾಂಧಿ ಮತ್ತವರ ಕುಟುಂಬ ಈ ದೇಶಕ್ಕಾಗಿ ಅನೇಕ ತ್ಯಾಗ ಮಾಡಿದೆ. ಆ ತ್ಯಾಗವನ್ನು ದೇಶದ ಜನತೆ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದು ಮಾಜಿ ಶಾಸಕ ಆರ್.ಪ್ರಸನ್ನಕುಮಾರ್ ಹೇಳಿದರು.
ಶಿವಮೊಗ್ಗ (ಡಿ.10) : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ, ಪಕ್ಷವನ್ನು ಹಲವು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಸೋನಿಯಾ ಗಾಂಧಿ ಮತ್ತವರ ಕುಟುಂಬ ಈ ದೇಶಕ್ಕಾಗಿ ಅನೇಕ ತ್ಯಾಗ ಮಾಡಿದೆ. ಆ ತ್ಯಾಗವನ್ನು ದೇಶದ ಜನತೆ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ ಎಂದು ಮಾಜಿ ಶಾಸಕ ಆರ್.ಪ್ರಸನ್ನಕುಮಾರ್ ಹೇಳಿದರು.
ನಗರದ ಗುಡ್‌ಲಕ್ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹುಟ್ಟುಹಬ್ಬ ಅಂಗವಾಗಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಆರೋಗ್ಯ ಕೇಂದ್ರದ ನಿವಾಸಿಗಳಿಗೆ ಬೆಡ್‌ಶೀಟ್, ನೈಟಿ ಮತ್ತು ಆಹಾರ ಪದಾರ್ಥಗಳನ್ನು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಲಿ: ಸಂಸದ ರಾಘವೇಂದ್ರ
ಪ್ರಧಾನಿ ಹುದ್ದೆಗೆ ಏರುವ ಎಲ್ಲ ಅವಕಾಶÜ ಇದ್ದರೂ ಅದನ್ನು ನಿರಾಕರಿಸಿದ ಸೋನಿಯಾ ಗಾಂಧಿ ಅವರು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿಸಿದರು. ಪತಿ ರಾಜೀವ್ ಗಾಂಧಿ ಬಾಂಬ್ ದಾಳಿಗೆ ತುತ್ತಾದಾಗ ಧೃತಿಗೆಡದೇ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿ, ಸಂಘಟನೆಗೆ ಪಕ್ಷವನ್ನು ಮುನ್ನಡೆಸಿದರು. ಜನತೆ ಸಂಕಷ್ಟಗಳಿಗೆ ಸ್ಪಂದಿಸಿದರು. ಪುತ್ರ ರಾಹುಲ್ ಗಾಂಧಿ ಕೂಡ ದೇಶದ ಏಕತೆಗೆ ಇದುವರೆಗೆ ಯಾರೂ ಮಾಡದ ರೀತಿಯಲ್ಲಿ 3500 ಕಿಮೀ ಪಾದಯಾತ್ರೆ ನಡೆಸಿ ‘ಭಾರತ್ ಜೋಡೊ’ ಅಭಿಯಾನ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಕುಟುಂಬಕ್ಕೆ ಎಲ್ಲರ ಶುಭ ಹಾರೈಕೆ ಅಗತ್ಯ ಎಂದರು.
ಮಾಜಿ ಮಹಾಪೌರ ಎಸ್.ಕೆ.ಮರಿಯಪ್ಪ ಮಾತನಾಡಿ, ಸೋನಿಯಾ ಗಾಂಧಿ ಕರೆ ಮೇರೆಗೆ ಹುಟ್ಟುಹಬ್ಬ ಆಚರಿಸುವ ಬದಲಾಗಿ ಸಾರ್ವಜನಿಕರ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಲಬುರಗಿಯಲ್ಲಿ ಇಂದು ಖರ್ಗೆ ಬೃಹತ್ ಶೋ: ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಸಲ ತವರಿಗೆ
ಗ್ರಾಮಾಂತರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಡಾ.ಶ್ರೀನಿವಾಸ ಕರಿಯಣ್ಣ ಮಾತನಾಡಿದರು. ಗುಡ್‌ಲಕ್ ಆರೋಗ್ಯ ಕೇಂದ್ರದ ನಿವಾಸಿಗಳಿಗೆ ಬೆಡ್‌ಶೀಟ್ ಮತ್ತಿತರ ವಸ್ತುಗಳನ್ನು ವಿತರಿಸಲಾಯಿತು. ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂಡ್ಲೆ, ಪ್ರಮುಖರಾದ ಮಂಜುನಾಥ್ ಬಾಬು, ರಂಗನಾಥ್, ಶಿವಾನಂದ್, ಸುನೀಲ್, ಚಿನ್ನಪ್ಪ, ಪ್ರಭಾಕರ್, ಮಲ್ಲಿಕಾರ್ಜುನ್, ವಿನೋದ್, ಬಾಲಾಜಿ, ಮೋಹನ್, ಗುಡ್‌ಲಕ್ ಆರೋಗ್ಯ ಕೇಂದ್ರದ ಅಧ್ಯಕ್ಷರಾದ ರವೀಂದ್ರನಾಥ್ ಐತಾಳ್, ಪಂಚಾಕ್ಷರಿ ಹಿರೇಮಠ್, ಶಿವಪ್ಪಗೌಡ ಮತ್ತಿತರರಿದ್ದರು.