ಜಾತಿ, ಮತ, ಬೇಧ ಎಂಬ ತಾರತಮ್ಯವಿಲ್ಲದೇ ತಾಲೂಕಿನ ಸರ್ವ ಸಮುದಾಯದ ಜನತೆಗೆ ಮಂಗಳ ಕಾರ್ಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತಾಗಬೇಕು.ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
, ಶಿಕಾರಿಪುರ (ಡಿ.10) : ಜಾತಿ, ಮತ, ಬೇಧ ಎಂಬ ತಾರತಮ್ಯವಿಲ್ಲದೇ ತಾಲೂಕಿನ ಸರ್ವ ಸಮುದಾಯದ ಜನತೆಗೆ ಮಂಗಳ ಕಾರ್ಯಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವು ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ. ಸರ್ಕಾರದ ಸೌಲಭ್ಯ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯುವಂತಾಗಬೇಕು. ಆಗ ಮಾತ್ರ ಯಡಿಯೂರಪ್ಪ ಅವರ ಶ್ರಮ ಸಾರ್ಥಕವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದ ಶ್ರೀ ಹುಚ್ಚುರಾಯಸ್ವಾಮಿ ಕೆರೆ ದಡದಲ್ಲಿನ ಶ್ರೀ ದತ್ತ ಕೇವಲಾನಂದಾಶ್ರಮದಲ್ಲಿನ ನೂತನ ಸಭಾ ಭವನವನ್ನು ಲೋಕಾರ್ಪಣೆಗೊಳಿಸಿ ದತ್ತ ಮಂದಿರದ ಶಿಲಾ ದೇವಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಅಧಿಕಾರ ಇದ್ದಾಗ ಕಾಂಗ್ರೆಸ್ ಭೂಮಿಹಕ್ಕು ಏಕೆ ಕೊಡಲಿಲ್ಲ?: ಸಂಸದ ರಾಘವೇಂದ್ರ
ತಾಲೂಕಿನಾದ್ಯಂತ ಜಾತಿ, ಮತ, ಬೇಧದ ತಾರತಮ್ಯವಿಲ್ಲದೇ ಎಲ್ಲ ಸಮುದಾಯಗಳಿಗೆ ಅನುದಾನ ನೀಡಿ ಹಲವು ಭವನ ನಿರ್ಮಿಸಲಾಗಿದೆ. ಭವನ ನಿರ್ಮಾಣಕ್ಕಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೋಟ್ಯಂತರ ಅನುದಾನವನ್ನು ನೀಡಿದ್ದಾರೆ. ಜನಸಂಖ್ಯೆಯಲ್ಲಿ ವಿಪ್ರರು ಕಡಿಮೆ ಇದ್ದರೂ ಸಕಲ ಕ್ಷೇತ್ರದಲ್ಲಿಯೂ ವಿಶೇಷ ಛಾಪು ಮೂಡಿಸಿದ್ದಾರೆ. ಶ್ರದ್ಧೆ, ಪ್ರಾಮಾಣಿಕತೆ ಮೂಲಕ ಸೌಮ್ಯ ವರ್ತನೆಯಿಂದ ಎಲ್ಲ ವರ್ಗಕ್ಕೆ ಮಾದರಿಯಾಗಿದ್ದಾರೆ ಎಂದರು.
ಯಡಿಯೂರಪ್ಪ ಅವರು ಶ್ರೀ ಗುರು ರಾಘವೇಂದ್ರ ಅವರ ಪರಮಭಕ್ತರು. ಈ ಹಿನ್ನೆಲೆ ಮಂತ್ರಾಲಯದ ಸಮಗ್ರ ಅಭಿವೃದ್ಧಿ ಜತೆಗೆ ಉಡುಗಣಿಯಲ್ಲಿನ ಮಠದ ಅಭಿವೃದ್ಧಿಗೆ ಎಲ್ಲ ರೀತಿ ಸಹಕರಿಸಿದ್ದಾರೆ. ದತ್ತ ಮಠದಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ .1 ಕೋಟಿ ಅನುದಾನ ನೀಡಿದ್ದು, ತಂದೆಯ ರಾಜಕೀಯ ಏಳ್ಗೆಗೆ ವಿಪ್ರರ ಸಹಕಾರ ಕೊಡುಗೆ ಅಪಾರವಾಗಿದ್ದು, ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ರೈತರು, ಬಡವರು ದೀನದಲಿತರ ಪರವಾದ ಹೋರಾಟದಿಂದ ಯಡಿಯೂರಪ್ಪ ಅವರು ಜನನಾಯಕರಾಗಿ ರೂಪುಗೊಂಡಿದ್ದಾರೆ. ಅವರ ಮಾರ್ಗದಲ್ಲಿಯೇ ಸಾಗುತ್ತಿದ್ದೇನೆ. ತಾಲೂಕಿನ ಮುಖಂಡರ ಒತ್ತಡದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಈ ದಿಸೆಯಲ್ಲಿ ಎಲ್ಲರೂ ಆಶೀರ್ವದಿಸಿ, ಬೆಂಬಲಿಸುವಂತೆ ಮನವಿ ಮಾಡಿದರು.
ಪುರೋಹಿತ್ ಗಣಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದರ ಸಹಿತ ಗಣ್ಯರನ್ನು, ಭವನ ನಿರ್ಮಾಣದ ಭೂ ದಾನಿಗಳನ್ನು ಸನ್ಮಾನಿಸಲಾಯಿತು. ಮತ್ತೂರು ಮಠದ ಶ್ರೀ ವಿಶ್ವಶೇಖರ ಭಾರತೀ ತೀರ್ಥ ಸ್ವಾಮೀಜಿ ಹಾಗೂ ತಡಗುಣಿ ಮಠದ ರವಿ ಗುರೂಜಿ ಸಾನ್ನಿಧ್ಯ ವಹಿಸಿದ್ದರು.
ಊಟದಷ್ಟೇ ಮಹತ್ವ ಒಳ್ಳೆಯ ಮಾತು, ವಿಚಾರಕ್ಕೂ ನೀಡಿ: ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಶಿವಾಚಾರ‍್ಯ ಸ್ವಾಮೀಜಿ
ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ವಿಪ್ರ ಸಮಾಜದ ಗೌರವಾಧ್ಯಕ್ಷ ನ್ಯಾಯವಾದಿ ವಸಂತ ಮಾಧವ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಮುಖಂಡ ಕವಲಿ ಸುಬ್ರಹ್ಮಣ್ಯ, ರವಿ ಶ್ಯಾನುಭೋಗ್, ವಿಶ್ವನಾಥ್, ಪ್ರಕಾಶ್ ಹೋತನಕಟ್ಟೆ, ನರಸಿಂಹ ಜೋಯ್‌್ಸ, ಹರೀಶ್ ಜೋಯ್‌್ಸ, ದಿವಾಕರ ದೀಕ್ಷಿತ್, ಪ್ರದೀಪ ಕುಲಕರ್ಣಿ, ಪ್ರದೀಪ್ ದೀಕ್ಷಿತ್, ಪ್ರವೀಣ ಶೆಟ್ಟಿ, ರೂಪ ವೆಂಕಟೇಶ್, ಪದ್ಮಜಾ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.