ಚಾಮುಂಡೇಶ್ವರಿಯಲ್ಲಿ ಬಿಜೆಪಿ ಗೆಲ್ಲಿಸುವುದೇ ಗುರಿ

By Kannadaprabha News  |  First Published Nov 8, 2022, 5:06 AM IST

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನೊಂದಿಗೆ ಕಮಲ ಅರಳಿಸುವುದೇ ನಮ್ಮ ಗುರಿ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ತಿಳಿಸಿದರು.


 ಮೈಸೂರು  (ನ.08):  ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನೊಂದಿಗೆ ಕಮಲ ಅರಳಿಸುವುದೇ ನಮ್ಮ ಗುರಿ ಎಂದು ಬಿಜೆಪಿ ನಗರಾಧ್ಯಕ್ಷ ಟಿ.ಎಸ್‌. ಶ್ರೀವತ್ಸ ತಿಳಿಸಿದರು.

(Mysuru )  ತಾಲೂಕಿನ ಬೀರಿಹುಂಡಿಯಲ್ಲಿ ನಡೆದ ಬೀರಿಹುಂಡಿ ಜಿಪಂ ಭಾಗದ ಕಾರ್ಯಕರ್ತರು ಹಾಗೂ ಬೂತ್‌ ಪ್ರಮುಖ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ (BJP) ತನ್ನದೇ ಆದ ಪ್ರಭಾವ ಹೊಂದಿದ್ದು, ಕಳೆದೆರಡು ಚುನಾವಣೆಗಳಲ್ಲಿ ಕೆಲವು ರಾಜಕೀಯ ವ್ಯತ್ಯಾಸಗಳಿಂದ ಗಂಭೀರ ಸ್ಪರ್ಧೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, 2023ರ ಚುನಾವಣೆಯಲ್ಲಿ ಪಕ್ಷ ಒಬ್ಬ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸಿ, ಜೆಡಿಎಸ್‌ (JDS)  ಹಾಗೂ ಕಾಂಗ್ರೆಸ್‌ ಪಕ್ಷ ಗಳಿಗೆ ಪೈಪೋಟಿ ನೀಡಲು ಬೇಕಾದ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.

Latest Videos

undefined

ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್‌ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು, ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಸಂಘಟಿತರಾಗಬೇಕು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಮನೆ ಮನೆಗೂ ಮಾಹಿತಿಯನ್ನು ನೀಡಿ ಮತದಾರರನ್ನು ಜಾಗೃತಿಗೊಳಿಸಬೇಕು ಎಂದು ಕರೆ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಎನ್‌. ಅರುಣ್‌ಕುಮಾರ್‌ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರು ಯಾವುದೇ ರೀತಿಯ ಮಹತ್ವದ ಅಭಿವೃದ್ಧಿ ಯೋಜನೆ ತರಲು ವಿಫಲವಾಗಿರುವುದು ಮತದಾರರ ಗಮನದಲ್ಲಿದೆ. ಹಾಗೂ ಅವರ ಪಕ್ಷದಲ್ಲೇ ಒಡಕು ಮತ್ತು ಭಿನ್ನಮತವಿರುವುದು ಜಗಜ್ಜಾಹೀರಾಗಿದೆ. ನಾವು ಒಮ್ಮತದಿಂದ ಕ್ಷೇತ್ರದ ಪ್ರವಾಸ ಮಾಡುತ್ತಿದ್ದೇವೆ. 2023ರ ಚುನಾವಣೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಚುನಾವಣೆಯಾಗಿ ಹೊರಹೊಮ್ಮುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್‌.ಡಿ. ಮಹೇಂದ್ರ, 2018ರ ಕ್ಷೇತ್ರದ ಅಭ್ಯರ್ಥಿ ಎಸ್‌.ಆರ್‌. ಗೋಪಾಲ್‌ರಾವ್‌, ನಗರ ಕಾರ್ಯದರ್ಶಿ ನಂದಕುಮಾರ್‌, ಬೀರುಹುಂಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮಶೇಖರ್‌, ಪ್ರಧಾನ ಕಾರ್ಯದರ್ಶಿ ಮರಟಿಕ್ಯಾತನಹಳ್ಳಿ ಕೃಷ್ಣಮಹದೇವು, ಪ್ರಧಾನ ಕಾರ್ಯದರ್ಶಿ ಈರಪ್ಪ, ಮುಖಂಡರಾದ ರವಿಕುಮಾರ್‌, ಕೆಂಚಪ್ಪ, ಚಂದ್ರಶೇಖರ್‌, ಮಾಯಾ ಶಾನ್‌ಬಾಗ್‌, ಮಲ್ಲಿಕಾರ್ಜುನಪ್ಪ, ಸೋಮಣ್ಣ, ನಿಂಗರಾಜು, ಪ್ರಕಾಶ್‌, ಮೋಹನ್‌, ಸಿದ್ದೇಗೌಡ, ನಾಗರಾಜು, ಚನ್ನಿಗಸ್ವಾಮಿ ಮೊದಲಾದವರು ಇದ್ದರು.

ಕಮಲ ಜಯಭೇರಿ

 ಎನ್‌. ನಾಗೇಂದ್ರಸ್ವಾಮಿ

 ಕೊಳ್ಳೇಗಾಲ : ಕೊಳ್ಳೇಗಾಲ ನಗರಸಭೆಯ ಏಳು ವಾರ್ಡ್‌ಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕೆಲ ಪ್ರಭಾವಿ ಮುಖಂಡರ ಕಾಲೆಳೆದಾಟದ ನಡುವೆಯೂ ಕಮಲ ಪಾಳೇಯ 6ವಾರ್ಡ್‌ಗಳಲ್ಲಿ ಗೆದ್ದು ಬೀಗುವ ಮೂಲಕ ಕಾಲೆಳೆದವರು ಹಾಗೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್‌ ನಾಯಕರನ್ನು 6 ವಾರ್ಡ್‌ಗಳಲ್ಲಿನ ಮತದಾರರು ತಿರಸ್ಕರಿಸಿದ್ದಾರೆ.

6ನೇ ವಾರ್ಡ್‌ನ ಮಾನಸ, 7ನೇ ವಾರ್ಡ್‌ನ ನಾಸೀರ್‌ ಷರೀಫ್‌, 13ನೇ ವಾರ್ಡ್‌ನ ಪವಿತ್ರ ರಮೇಶ್‌, 21ನೇ ವಾರ್ಡ್‌ನ ಶಂಕನಪುರ ಪ್ರಕಾಶ್‌, 25ನೇ ವಾರ್ಡ್‌ನ ರಾಮಕೃಷ್ಣ, 26ನೇ ವಾರ್ಡ್‌ನ ನಾಗಸುಂದ್ರಮ್ಮ ಜಗದೀಶ್‌ ಅತ್ಯಧಿಕ ಮತದಿಂದ ಗೆದ್ದ ಬಿಜೆಪಿ ಸದಸ್ಯರು.

(Congress)  ಸೋಲಿನ ವೈಫಲ್ಯ: ಕಾಂಗ್ರೆಸ್‌ ಸೋಲಿಗೆ ಸಾಮಾನ್ಯ ವರ್ಗದ ಮತದಾರರ ಕಡೆಗಣನೆ, ಗೆದ್ದೇ ಗೆಲ್ಲುತ್ತೇವೆಂಬ ಅತೀವ ವಿಶ್ವಾಸ, ಸಾಮೂಹಿಕ ನಾಯಕತ್ವದಲ್ಲಿ ಗುಂಪುಗಾರಿಕೆ, ಬಣ ರಾಜಕೀಯ (Politics) , ಪಕ್ಷದ ಕೆಲ ವಾರ್ಡಿನ ಅಭ್ಯರ್ಥಿಗಳು ಮತದಾರನ ಮನತಲುಪುವಲ್ಲಿ, ಅಭ್ಯರ್ಥಿ ಆಯ್ಕೆ ವಿಚಾರ, ಸಂಪನ್ಮೂಲ ಕ್ರೋಡಿಕರಣದಲ್ಲಿ ವಿಫಲತೆ, ಹೀಗೆ ನಾನಾ ಕಾರಣಗಳಿಗೆ ಕಾಂಗ್ರೆಸ್‌ ಕೇವಲ 2ನೇ ವಾರ್ಡ್‌ನಲ್ಲಿ (7ಕ್ಕೆ 1ರಲ್ಲಿ) ಮಾತ್ರ ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ.

2ನೇ ವಾರ್ಡಿನ ಕಾಂಗ್ರೆಸ್‌ ಪಕ್ಷದ ಭಾಗ್ಯ ಯ (BJP)  ಅಭ್ಯರ್ಥಿಯನ್ನು ಮುನ್ನೂರು ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಪುತ್ರ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಧ್ರುವನಾರಾಯಣ ಭರ್ಜರಿ ಪ್ರಚಾರ ನಡೆಸಿ ತೆರಳಿದ ವಾರ್ಡ್‌ನಲ್ಲೂ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಉಳಿದಂತೆ 6ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಿದೆಯಾದರೂ ಗೆಲ್ಲುವಲ್ಲಿ ತಂತ್ರ, ಪ್ರತಿ ತಂತ್ರಗಾರಿಕೆಗಳು ಫಲಿಸದ ಪರಿಣಾಮ ಕಾಂಗ್ರೆಸ್‌ 6ರಲ್ಲೂ ಪರಾಭವಗೊಂಡಿದೆ.

2ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಭಾಗ್ಯ 546ಮತಗಳಿಸುವ ಮೂಲಕ ಮುನ್ನೂರು ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ, ಮತದಾರರ ಆಶೀರ್ವಾದದಿಂದ ಗೆಲುವಾಗಿದ್ದು ವಾರ್ಡ್‌ ಅಭಿವೃದ್ಧಿಗೆ ಸ್ಪಂದಿಸುವೆ ಎಂದರು. ಬಿಜೆಪಿಯ ನಾಗಮಣಿ ಗೋಪಾಲ್‌, ಕೇವಲ 246ಮತಗಳಿಸುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ತೀವ್ರ ಪೈಪೋಟಿ ನೀಡುವ ಬಿಎಸ್ಪಿ ಬೆಂಬಲದೊಂದಿಗೆ ಕಣದಲ್ಲಿದ್ದ ಎಸ್‌ಡಿಪಿಐನ ಶಾಂತಲಕ್ಷ್ಮಿ ಕೇವಲ 55ಮತಗಳಿಸುವಲ್ಲಿ ಸಫಲರಾಗಿದ್ದಾರೆ.

click me!