ಮೃತ್ತಿಕೆ ಸಂಗ್ರಹಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ

By Kannadaprabha News  |  First Published Nov 5, 2022, 9:06 PM IST
  • ಮೃತ್ತಿಕೆ ಸಂಗ್ರಹಕ್ಕೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದ
  • ಅಭಿಯಾನ ರಥಕ್ಕೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಹೇಳಿಕೆ

ಶಿವಮೊಗ್ಗ (ನ.5) ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವ ಆವರಣದ ಉದ್ಯಾನವನಕ್ಕೆ ಪವಿತ್ರ ಮೃತ್ತಿಕೆ ಸಂಗ್ರಹಿಸುವ ಅಭಿಯಾನದ ಅಂಗವಾಗಿ ಜಿಲ್ಲಾದ್ಯಂತ ಸಂಚರಿಸಿದ ರಥವನ್ನು ಶನಿವಾರ ಜಿಲ್ಲಾಡಳಿತ ಭವನ ಆವರಣದಲ್ಲಿ ಬೀಳ್ಕೊಡಲಾಯಿತು. ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಅವರು ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹಾಗೂ ಜಿಲ್ಲಾದ್ಯಂತ ಸಂಚರಿಸಿ ಮೃತ್ತಿಕೆ ಸಂಗ್ರಹಿಸಿ ಬಂದ ವಾಹನಕ್ಕೆ ಪುಷ್ಪ ಅರ್ಪಿಸುವ ಮೂಲಕ ಮತ್ತು ಮಹಿಳೆಯರು ಪೂರ್ಣಕುಂಭದೊಂದಿಗೆ ಬೀಳ್ಕೊಡುಗೆ ನೀಡಿದರು. ಜಿಲ್ಲಾಡಳಿತ ಭವನ ಆವರಣದಲ್ಲಿ ಸಂಗ್ರಹಿಸಲಾದ ಮೃತ್ತಿಕೆಯ ಪ್ರದರ್ಶನ ನಡೆಯಿತು.

ನಾಡಪ್ರಭು ಕೆಂಪೇಗೌಡರ ಪುತ್ಥಳಿ, ಉತ್ತರ ಕರ್ನಾಟಕದ ಪವಿತ್ರ ಸ್ಥಳಗಳಿಂದ ಮಣ್ಣು ಸಂಗ್ರಹ!

Tap to resize

Latest Videos

ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಈ ವೇಳೆ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕು, ನಗರ ಪ್ರದೇಶ, ಗ್ರಾ.ಪಂ.ಗಳಲ್ಲಿ ನಿಗದಿಪಡಿಸಿದ ಮಾರ್ಗ ನಕ್ಷೆ ಮತ್ತು ವೇಳಾಪಟ್ಟಿಗೆ ಅನುಗುಣವಾಗಿ ಸಂಚರಿಸಿ ಮೃತ್ತಿಕೆಯನ್ನು ಸಂಗ್ರಹಿಸಿದ ವಾಹನವು ಇಂದು ಜಿಲ್ಲೆಯಿಂದ ಬೆಂಗಳೂರಿಗೆ ನಿರ್ಗಮಿಸಲಿರುವ ಪ್ರಯುಕ್ತ ಬೀಳ್ಕೊಡಲಾಗುತ್ತಿದೆ. ಜಿಲ್ಲಾದ್ಯಂತ ಗ್ರಾ.ಪಂ., ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೀಗೆ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪವಿತ್ರ ಮಣ್ಣು ಸಂಗ್ರಹ ಮಾಡಲಾಗಿದೆ. ಜಿ.ಪಂ. ವತಿಯಿಂದ ಆ ಮೃತ್ತಿಕೆಯನ್ನು ಇಂದು ಪ್ರದರ್ಶನಕ್ಕೆ ಇಡಲಾಗಿದೆ. ಇದಕ್ಕೆ ಸಹಕರಿಸಿದ ಗ್ರಾ.ಪಂ., ತಾಲೂಕು ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆ, ಮಹಾನಗರ ಪಾಲಿಕೆ, ಆಡಳಿತ ವರ್ಗ, ಸಿಬ್ಬಂದಿಗೆ ಧನ್ಯವಾದಗಳ್ನು ತಿಳಿಸುತ್ತೇನೆ ಎಂದರು.

ಕೆಂಪೇಗೌಡರ ಕಂಚಿನ ಪ್ರತಿಮೆಗಾಗಿ ಮುಡುಕುತೊರೆಯಲ್ಲಿ ಮೃತ್ತಿಕೆ ಸಂಗ್ರಹ

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಸುವರ್ಣಾ ಶಂಕರ್‌, ಜಿ.ಪಂ ಸಿಇಓ ಎನ್‌.ಡಿ.ಪ್ರಕಾಶ್‌, ಅಪರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್‌. ಹೊನ್ನಳ್ಳಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು, ಮತ್ತಿತರರು ಹಾಜರಿದ್ದರು.

click me!