ಕಾಫಿನಾಡಲ್ಲಿThangka Painting; ಬೌದ್ಧ ಧರ್ಮ ಪ್ರಚಾರಕ್ಕೆ ಬಳಕೆ?

By Ravi Janekal  |  First Published Nov 14, 2022, 9:14 PM IST

ಚಿಕ್ಕಮಗಳೂರು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಟಿಬೇಟ್ ಶೈಲಿಯ ರಾಷ್ಟ್ರ ಮಟ್ಟದ ಪ್ರಸಿದ್ಧ ಕಲಾವಿದ ನಾಮ್ಗೆಲ್ ನೇತೃತ್ವದಲ್ಲಿ ಟಿಬೇಟ್ ಶೈಲಿಯ Thangka Painting ಚಿತ್ರಕಲಾ ಶಿಬಿರ ಆರಂಭಗೊಂಡಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿತ್ರದುರ್ಗ (ನ.14): ಚಿಕ್ಕಮಗಳೂರು ನಗರದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಟಿಬೇಟ್ ಶೈಲಿಯ ರಾಷ್ಟ್ರ ಮಟ್ಟದ ಪ್ರಸಿದ್ಧ ಕಲಾವಿದ ನಾಮ್ಗೆಲ್ ನೇತೃತ್ವದಲ್ಲಿ ಟಿಬೇಟ್ ಶೈಲಿಯ Thangka Painting ಚಿತ್ರಕಲಾ ಶಿಬಿರ ಆರಂಭಗೊಂಡಿದೆ. ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿರುವ ಶಾಂತಿನಿಕೇತನ ಆರ್ಟ್ ಫೌಂಡೇಷನ್ ಮತ್ತು ಕನ್ನ ಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನವೆಂಬರ್ 11ರಿಂದ ನ.17ರ ವರೆಗೂ ಶಿಬಿರ ನಡೆಯಲಿದೆ. ನಾಮ್ಗೆಲ್ ಶಿಷ್ಯ ಫುರ್ಸಿಂಗ್ ನೇತೃತ್ವದಲ್ಲಿ ಶಿಬಿರ ನಡೆಯುತ್ತಿದ್ದು, ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು, ಹಿರಿಯ ಕಲಾವಿದರು, ಕಲಾ ಆಸಕ್ತರು ಸೇರಿದಂತೆ 23 ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 

Tap to resize

Latest Videos

ಬೌದ್ಧಧರ್ಮ ಪ್ರಚಾರಕ್ಕೆ ಬಳಕೆ:

ಟಂಕಾ ಶೈಲಿಯ ಚಿತ್ರಪಟಗಳು ಬಳಕೆಯಲ್ಲಿದ್ದು, ಬೌದ್ಧಧರ್ಮ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ರೇಷ್ಮೆ ಮತ್ತು ಕಾಟನ್ ಬಟ್ಟೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಬುದ್ಧನ ಜನನ, ಯೌವನ, ಕಾಡಿಗೆ ಪಯಣ, ಬೋಧಿವೃಕ್ಷದ ಕೆಳಗೆ ತಪಸ್ಸು ಮಾಡುತ್ತಿರುವ ಮತ್ತು ಜ್ಞಾನೋದಯ ಪಡೆದ ಚಿತ್ರಗಳು ಸೇರಿದಂತೆ ಬುದ್ಧನ ಕಥನಗಳನ್ನು ಟಂಕಾ ಪೈಂಟಿಂಗ್ ಮೂಲಕ ವಿಸ್ತೃತವಾಗಿ ತಿಳಿಸಿಕೊಡಲಾಗುತ್ತಿದೆ. 

Chikkamagaluru: ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿ ಘೋಷಣೆ ಕೂಗಿದ ಕಿಡಿಗೇಡಿಗಳು!

ಟಂಕಾ ಶೈಲಿಯ ಚಿತ್ರಪಟ ರಚಿಸಲು ಶಿಸ್ತು, ತಾಳ್ಮೆ, ಶ್ರದ್ಧೆಯಿಂದ ಪೈಂಟಿಂಗ್ ಮಾಡಬೇಕಿದ್ದು, ಚಿನ್ನದ ಬಣ್ಣ ಹಾಗೂ ನೈಸರ್ಗಿಕ ಬಣ್ಣವನ್ನೇ ಬಳಕೆ ಮಾಡಬೇಕಿದೆ. ಶಿಬಿರದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಟಂಕಾ ಪೈಂಟಿಂಗ್ ರೆಡಿಯಾಗುತ್ತಿದೆ. 

ವಿದ್ಯಾರ್ಥಿ ಚಂದನ್ ಮಾತನಾಡಿ, ಟಿಬೆಟ್ ಶೈಲಿಯ ಟಂಕಾ ಚಿತ್ರಗಳನ್ನು ಲೆಕ್ಕಾಚಾರದಲ್ಲಿ ಬಿಡಿಸಬೇಕು. ಶ್ರದ್ಧೆ, ಭಕ್ತಿ ಮತ್ತು ಆಸಕ್ತಿಯಿಂದ ಮಾತ್ರ ಬಿಡಿಸಿದಾಗ ಮಾತ್ರ ಚಿತ್ರಗಳು ಸುಂದರವಾಗಿ ಮೂಡಿ ಬರಲಿವೆ ಎಂದರು.  ಶಾಂತಿನಿಕೇತನ ಚಿತ್ರಕಲಾ ಶಾಲೆಯ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಈ ಚಿತ್ರಕಲೆ ನನಗೆ ಹೊಸದು, ಟಂಕಾ ಚಿತ್ರಶೈಲಿಯನ್ನು ಲೆಕ್ಕಚಾರದಲ್ಲಿ ಬಿಡಿಸಬೇಕೆಂದರು. 

ಶಿಬಿರದ ಮುಖ್ಯಸ್ಥ ನ್ಯಾಮ್ಗೆಲ್ ಸುದ್ದಿಗಾರರ ಜೊತೆ ಮಾತನಾಡಿ, 30ವರ್ಷಗಳಿಂದ ಟಂಕಾ ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದು, ಚಿತ್ರಕಲಾ ಶಾಲೆಯನ್ನು ನಡೆಸುತ್ತಿಲ್ಲ. ಗುರುಮುಖಿ ಶಿಕ್ಷಣವನ್ನು ನೀಡುತ್ತಿದ್ದೇವೆ. ಧಾರ್ಮಿಕ ಭಾವನೆಗೆ ಒತ್ತುಕೊಟ್ಟು ಚಿತ್ರಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.

ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಹುಬ್ಬಳ್ಳಿ,  ಕೊಳ್ಳೇಗಾಲ, ಮಡಿಕೇರಿ ಕುಶಾಲನಗರದ ಬಯಲುಕುಪ್ಪೆ, ಒಡೆಯರಪಾಳ್ಯ, ಮುಂಡಗೋಡು ಗಳಲ್ಲಿ ಶಿಬಿರಗಳನ್ನು ನಡೆಸಲಾಗಿದೆ. ಟಂಕಾ ಶೈಲಿಯಲ್ಲಿ ಚಿತ್ರಗಳನ್ನು ಬಿಡಿಸಬೇಕಾದರೆ ಲೆಕ್ಕಾಚಾರದ ಪ್ರಕಾರವೇ ಮೂಡಿಬರಬೇಕು. ಹೀಗಾಗಿ ಈ ಪ್ರಕಾರದ ಚಿತ್ರಕಲೆಯಲ್ಲಿ ಆಸಕ್ತಿ, ಶ್ರದ್ಧೆ ಇರಬೇಕು ಎಂದರು. ಒಟ್ಟಾರೆ ಟಿಬೆಟ್ ಶೈಲಿಯ ಟಂಕಾ ಚಿತ್ರಗಳು ಕಲೆಗಾರರ ಕೈಚಳಕದಲ್ಲಿ ಸುಂದರವಾಗಿ ಮೂಡಿ ಬರುತ್ತಿದೆ.

click me!