ಸಸ್ಯಕಾಶಿ ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ; 10 ಹೇಕ್ಟರ್ ಪ್ರದೇಶದ ಗಿಡಮೂಲಿಕೆ ಸುಟ್ಟು ಕರಕಲು!

By Ravi Janekal  |  First Published Mar 4, 2023, 1:06 PM IST

 ಉತ್ತರ ಕರ್ನಾಟಕದ ಸಹ್ಯಾದ್ರಿ, ಅಪಾರ ನೈಸರ್ಗಿಕ ಸಂಪತ್ತಿನಿಂದ ಕೂಡಿರುವ  ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನೈಸರ್ಗಿಕ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.


ಗದಗ (ಮಾ.4) : ಉತ್ತರ ಕರ್ನಾಟಕದ ಸಹ್ಯಾದ್ರಿ, ಅಪಾರ ನೈಸರ್ಗಿಕ ಸಂಪತ್ತಿನ ಕೂಡಿರುವ  ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ ಬಿದ್ದಿರುವ ದುರ್ಘಟನೆ ನಡೆದಿದೆ. 

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ಇರುವ ಕಪ್ಪತ್ತಗುಡ್ಡಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣ ಔಷಧೀಯ ಗಿಡಮೂಲಿಕೆ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡದಲ್ಲಿ ಡೋಣಿ ಗ್ರಾಮದ ಬಳಿ ಸುಮಾರು 10 ಹೆಕ್ಟೇರ್ ಪ್ರದೇಶದ ಔಷಧೀಯ ಸಸ್ಯಗಳು ಹಾನಿಯಾದ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

Tap to resize

Latest Videos

undefined

ಗದಗ: ನಿಯಂತ್ರಣಕ್ಕೆ ಬಾರದ ಕಪ್ಪತ್ತಗುಡ್ಡ ಬೆಂಕಿ, ಅಪಾರ ಅರಣ್ಯ ಸಂಪತ್ತು ನಾಶ

ಕಪ್ಪತ್ತಗುಡ್ಡಕ್ಕೆ ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ತಿಳಿದು ಶೀಘ್ರ ಕಾರ್ಯಪ್ರವೃತ್ತರಾಗಿದ್ದಾರೆ. 25 ಜನರ ಅರಣ್ಯ ಸಿಬ್ಬಂದಿ ತಂಡ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. 

ಅರಣ್ಯ ಸಿಬ್ಬಂದಿ ಅಸಹಾಯಕತೆ:

ಪ್ರತಿವರ್ಷ ಬೇಸಗೆ ಆರಂಭಗೊಂಡರೆ ಕಪ್ಪತ್ತಗಿರಿಗೆ ಬೆಂಕಿಯದ್ದೇ ಆತಂಕ. ಆಕಸ್ಮಿಕ ಬೆಂಕಿಗೆ ಸಸ್ಯಸಂಪತ್ತು ಸುಟ್ಟು ಕರಕಲಾಗುತ್ತಿದೆ. ಬೇಸರದ ಸಂಗತಿಯೆಂದರೆ ಕೆಲವೊಮ್ಮೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಾರೆ. ಬೆಟ್ಟದ ಪ್ರದೇಶ ಉತ್ತರ ಭಾಗದಲ್ಲಿ ಬೆಂಕಿ ಆವರಿಸಿದಾಗ ಕಲ್ಲು-ಮುಳ್ಳುಗಳಲ್ಲಿ ಹೋಗಿ ಬೆಂಕಿ ನಂದಿಸುವುದು ಕಷ್ಟಕರ. ಇಂಥ ಅವಘಡಗಳು ಸಂಭವಿಸಿದಾಗ ಬೆಂಕಿ ನಂದಿಸಲು ಬೇಕಾದ ಹೊಸ ಪರಿಕರಗಳು, ವಾಹನ ವ್ಯವಸ್ಥೆ ಇಲ್ಲದೆ ಅರಣ್ಯ ಸಿಬ್ಬಂದಿ ಅಸಹಾಯಕರಾಗಿ ನೋಡುವಂತಾಗುತ್ತದೆ.

ಮತ್ತೆ ಕಪ್ಪತ್ತಗುಡ್ಡಕ್ಕೆ ಬೆಂಕಿ: ಬೆಂಕಿಗೆ ಆಹುತಿಯಾದ ಮೂಕ ಪ್ರಾಣಿಗಳು

ಪರಿಸರ ಪ್ರೇಮಿಗಳು ಆಕ್ರೋಶ:

ಕಪ್ಪತ್ತಗುಡ್ಡವನ್ನು ಪಶ್ಚಿಮ ಘಟ್ಟಗಳ ಸೆರಗು ಎನ್ನಲಾಗುತ್ತಿದೆ. ಪಶ್ಚಿಮ ಘಟ್ಟದ ರೀತಿಯಲ್ಲಿ ಇದನ್ನು ಸಂರಕ್ಷಿಸಬೇಕಾಗಿದೆ. ಇಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಖನಿಜ ಸಂಪತ್ತು ಇದೆ. ಸರ್ಕಾರವು ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿ 2019ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಆದರೆ ಕಪ್ಪತ್ತಗುಡ್ಡವನ್ನು ಕಾಡ್ಗಿಚ್ಚಿನಿಂದ ರಕ್ಷಿಸುವಲ್ಲಿ ವಿಫಲವಾಗಿರುವ ಸರ್ಕಾರ.. ಪ್ರತಿ ವರ್ಷ ಕಪ್ಪತ್ತಗುಡ್ಡ ಕಾಡ್ಗಿಚ್ಚಿಗೆ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟು ಕರಕಲಾಗುತ್ತಿದ್ದು ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಪರಿಸರ ಪ್ರೇಮಿಗಳ ಆಕ್ರೋಶ ಕಾರಣವಾಗಿದೆ. 

click me!