Bengaluru: ಸುಡು ಸುಡು ಬಿಸಿಲಿಗೆ ತತ್ತರಿಸಿದ ಬೆಂಗ್ಳೂರಿನ ಜನತೆ: ಮತ್ತಷ್ಟು ಧಗೆ ಹೆಚ್ಚಳ?

Published : Mar 31, 2022, 06:48 AM IST
Bengaluru: ಸುಡು ಸುಡು ಬಿಸಿಲಿಗೆ ತತ್ತರಿಸಿದ ಬೆಂಗ್ಳೂರಿನ ಜನತೆ: ಮತ್ತಷ್ಟು ಧಗೆ ಹೆಚ್ಚಳ?

ಸಾರಾಂಶ

*  ರಾಜಧಾನಿಯಲ್ಲಿ ಬಿಸಿಲಿನ ಬೇಗೆ ಶುರು *  ಮಾ.29ರಂದು 35.3 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲೆ, ಕನಿಷ್ಠ 23.3 ಡಿ.ಸೆ. *  ರಾತ್ರಿಯೂ ಸೆಖೆಯ ಅನುಭವ  

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಮಾ.31):  ರಾಜ್ಯ ರಾಜಧಾನಿಯಲ್ಲಿ ಕಳೆದ ಐದಾರು ದಿನಗಳಿಂದ ಭಾರಿ ಧಗೆಯ ವಾತಾವರಣವಿದ್ದು, ಮಂಗಳವಾರ ಈ ವರ್ಷ ಮೊದಲ ಬಾರಿಗೆ ದಿನದ ಉಷ್ಣತೆ 35 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ವಾರದ ಹಿಂದೆ ಮಳೆ(Rain) ಸುರಿದು ತಂಪು ಭಾವ ಮೂಡಿಸಿದ್ದ ನಗರದ ವಾತಾವರಣ(Atmosphere) ಆ ಬಳಿಕ ದಿನದಿಂದ ದಿನಕ್ಕೆ ಕಾವೇರ ತೊಡಗಿದ್ದು, ಮಂಗಳವಾರ 35.3 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಿದೆ. ನಗರದ ಕನಿಷ್ಠ ಉಷ್ಣತೆ 23.3 ಡಿಗ್ರಿ ಸೆಲ್ಸಿಯಸ್‌ಗೆ ಏರಿದ್ದು, ರಾತ್ರಿಯೂ ಸೆಖೆ ಹೆಚ್ಚಿದೆ.

ಹವಾಮಾನ ಇಲಾಖೆಯ(Department of Meteorology) ಮೂಲಗಳ ಪ್ರಕಾರ ಬೇಸಿಗೆಯ(Summer) ಆರಂಭದ ತಿಂಗಳಲ್ಲೇ ಸೆಖೆ ಹೆಚ್ಚಿದೆ. ಇನ್ನು ಏಪ್ರಿಲ್‌, ಮೇ ತಿಂಗಳಲ್ಲಿ ಧಗೆ ಮತ್ತಷ್ಟು ಹೆಚ್ಚಬಹುದು. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. 1996ರಲ್ಲಿ 37.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿರುವುದು ಮಾಚ್‌ರ್‍ನ ಗರಿಷ್ಠ ತಾಪಮಾನ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬೀಸುತ್ತಿರುವ ಉಷ್ಣ ಹವೆಯ ಪ್ರಭಾವ ಬೆಂಗಳೂರಿನ(Bengaluru) ಮೇಲೆ ಆಗಿಲ್ಲ. ಆದರೂ ಉಷ್ಣತೆ ವಾಡಿಕೆಗಿಂತ ಹೆಚ್ಚಿದೆ ಎಂದು ಹವಾಮಾನ ಕೇಂದ್ರದ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚುತ್ತಿರುವ ಬಿಸಿ; 2100ರ ವೇಳೆ ಒಂದೂವರೆ ಮಿಲಿಯನ್ ಭಾರತೀಯರ ಸಾವು!

ಆರೋಗ್ಯದ ರಕ್ಷಣೆಗೆ ಒತ್ತು ಅಗತ್ಯ

ಬಿಸಿಲು ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್‌ ಗೂಳೂರು, ಬೇಸಗೆಯ ಸಂದರ್ಭದಲ್ಲಿ ಹೀಟ್‌ ಸ್ಟೊ್ರೕಕ್‌, ನಿರ್ಜಲೀಕರಣ ಆಗುವುದು ಸಾಮಾನ್ಯ. ಅದರ ಜೊತೆಗೆ ಮಲೀನ ನೀರು ಸೇವಿಸಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ.

ವಾಂತಿಬೇಧಿ ಪ್ರಕರಣ ಹೆಚ್ಚಾಗುತ್ತದೆ, ಆದ್ದರಿಂದ ಜನರು ಹೊರಗೆ ಹೋಗುವಾಗ ಬಿಳಿಯ, ಖಾದಿಯ ಬಟ್ಟೆಧರಿಸಬೇಕು. ಮಸಾಲೆ ರಹಿತ ಆಹಾರ ಸೇವನೆ ಮಾಡಬೇಕು. ಶುದ್ಧ ಕುಡಿಯುವ(Water) ನೀರಿನ ಸೇವನೆ ಮಾಡಬೇಕು. ನೀರಿನ ಶುದ್ಧತೆ ಬಗ್ಗೆ ಸಂಶಯಗಳಿದ್ದರೆ ತಕ್ಷಣ ನೀರಿನ ನಮೂನೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆಗೆದುಕೊಂಡು ಬಂದರೆ ಅಲ್ಲಿ ನೀರಿನ ಮಾಲಿನ್ಯತೆಯನ್ನು ಪತ್ತೆ ಹಚ್ಚುತ್ತೇವೆ. ಅದೇ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಪ್ರಮಾಣದಲ್ಲಿ ಒಆರ್‌ಎಸ್‌ ಮುಂತಾದ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತಾರೆ.

Health Tips: ಆಹಾರ ತಿಂದ ಮೇಲೆ ಚಳಿಯಾಗುತ್ತಾ ? ಇದೇ ಕಾರಣವಿರಬಹುದು

ಬುಧವಾರ ನಗರದ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆಯಾದರೆ ನಗರದ ಗರಿಷ್ಠ ಉಷ್ಣಾಂಶದಲ್ಲಿ ತುಸು ಇಳಿಕೆ ದಾಖಲಾಗುವ ಸಾಧ್ಯತೆಯಿದೆ.

ಬಿಸಿಲಿನ ಹೊಡೆತದಿಂದ ಪಾರಾಗಲು ಹೀಗೆ ಮಾಡಿ

-ಬೇಸಗೆಯಲ್ಲಿ ದೇಹದಲ್ಲಿನ ಜಲದ ಅಂಶವನ್ನು ಕಾಯ್ದುಕೊಳ್ಳಿ.
-ಹೊರಗೆ ಹೋಗುವಾಗ ನೀರಿನ ಬಾಟಲ್‌ ಇಟ್ಟುಕೊಳ್ಳಿ.
-ನೀರಿನಾಂಶ ಜಾಸ್ತಿ ಇರುವ ಹಣ್ಣು ಹಂಪಲುಗಳ ಸೇವನೆ ಮಾಡಿ.
-ಖನಿಜಾಂಶ ಹೆಚ್ಚಿರುವ ಎಳನೀರು, ಸಕ್ಕರೆ, ಉಪ್ಪು ಮಿಶ್ರಿತ ನಿಂಬೆ ಜ್ಯೂಸ್‌, ಮಜ್ಜಿಗೆ ಹೆಚ್ಚು ಸೇವಿಸಿ.
-ಹೊರಗೆ ಓಡಾಡುವಾಗ ಕೊಡೆ ಬಳಸಿ.
-ಮಧ್ಯಾಹ್ನ ಅನಗತ್ಯವಾಗಿ ಹೊರಗೆ ಹೋಗಬೇಡಿ.
-ಅಗತ್ಯ ಕೆಲಸಗಳಿಗೆ ಬೆಳಗ್ಗೆ ಅಥವಾ ಸಂಜೆ ಹೊರಗೆ ಹೋಗಿ.
-ಮನೆಯ ಸಮೀಪ ಒಣಹುಲ್ಲು, ಒಣ ತ್ಯಾಜ್ಯಕ್ಕೆ ಅವಕಾಶ ನೀಡಬೇಡಿ. ವಾಹನಗಳನ್ನು ಪಾರ್ಕ್ ಮಾಡುವಾಗ ಜಾಗರೂಕರಾಗಿರಿ.

ರಾಜ್ಯದಲ್ಲಿ ಈ ಬಾರಿ ರಣಬಿಸಿಲು ಇಲ್ಲ: ಹವಾಮಾನ ಇಲಾಖೆ

ರಾಜ್ಯದೆಲ್ಲೆಡೆ(Karnataka) ಸದ್ಯ ಚಳಿಯ(Cold) ವಾತಾವರಣವಿದ್ದರೂ ನಿಧಾನವಾಗಿ ಉಷ್ಣತೆ ಏರುತ್ತಿದೆ. ಫೆ. 20ರ ಬಳಿಕ ಬೇಸಿಗೆ ಕಾಲ(Summer Season) ಆರಂಭವಾಗಲಿದೆ. ಈ ಬಾರಿ ಬೇಸಿಗೆಯಲ್ಲಿ ವಾಡಿಕೆಯ ತಾಪಮಾನ(Temperature) ಇರಲಿದೆ. ಆದರೆ, ತೀರಾ ಉಷ್ಣಾಂಶ ಹೆಚ್ಚಾಗುವಂತಹ ಅತಿರೇಕದ ವಾತಾವರಣ ಉಷ್ಣತೆ ದಾಖಲಾಗುವ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆಯ(Department of Meteorology) ಅಧಿಕಾರಿಗಳು ಹೇಳುತ್ತಾರೆ.

PREV
Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್