ತೆಲಂಗಾಣದ ಬಾನಂಗಳದಲ್ಲಿ ಹಾರಾಡಲಿದೆ ‘ಕಥಕ್ಕಳಿ’ ಗಾಳಿಪಟ

By Kannadaprabha News  |  First Published Jan 8, 2024, 1:00 AM IST

ಈ ಗಾಳಿಪಟವನ್ನು ವರ್ಣವೈವಿಧ್ಯತೆಯ ಬದಲಾವಣೆ ಸೇರಿದಂತೆ ಹಿಂದಿನ ಕಥಕ್ಕಳಿಗಿಂತ ಈ ಬಾರಿ ವಿಭಿನ್ನವಾಗಿ ರಚಿಸಲಾಗುತ್ತಿದೆ. ಗಾಳಿಪಟಕ್ಕೆ ಬೇಕಾದ ಬಟ್ಟೆ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್‍ನ್ನು ಇಂಗ್ಲೆಂಡ್‍ನಿಂದ ತರಿಸಲಾಗಿದೆ. ಗಾಳಿಪಟಕ್ಕೆ ಬಟ್ಟೆ, ಬಿದಿರು, ಡೆಕ್ಲಾನ್ ಥ್ರೆಡ್ (ಪ್ಯಾರಚೂಟ್ ಮೆಟಿರಿಯಲ್) ಬಳಸಲಾಗಿದೆ. ಇದಕ್ಕೆ ಬೇಕಾದ ಬಿದಿರನ್ನು ಗೋವಾ ರತ್ನಗಿರಿಯ ವೆನ್‍ರೂಲಾದಿಂದ ತರಿಸಲಾಗಿದೆ.


ಮಂಗಳೂರು(ಜ.08): ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಪ್ರದರ್ಶನದ ಮೂಲಕ ಸಾಧನೆ ಮಾಡಿದ ಟೀಮ್ ಮಂಗಳೂರು ತಂಡ ಈ ಬಾರಿ ಮತ್ತೊಂದು ಕಥಕ್ಕಳಿ ಗಾಳಿಪಟವನ್ನು ರಚಿಸಿದ್ದು, ಜನವರಿ 14ರ ಮಕರ ಸಂಕ್ರಾಂತಿಯಂದು ತೆಲಂಗಾಣದ ಬಾನಂಗಳದಲ್ಲಿ ಹಾರಾಡಲಿದೆ

ತೆಲಂಗಾಣದಲ್ಲಿ ಜ.13ರಿಂದ 14ರ ವರೆಗೆ ಗಾಳಿಪಟ ಉತ್ಸವ ನಡೆಯಲಿದ್ದು, ಇದರಲ್ಲಿ ರಾಜ್ಯದ ಪರವಾಗಿ ಟೀಮ್ ಮಂಗಳೂರು ತಂಡ ಭಾಗವಹಿಸುತ್ತಿದೆ. `ಟೀಮ್ ಮಂಗಳೂರು'''' ತಂಡದ ಈ ಹಿಂದಿನ ಕಥಕ್ಕಳಿ ಗಾಳಿಪಟ ಲಿಮ್ಕಾ ದಾಖಲೆ ಮಾಡಿತ್ತು. ಇದೀಗ ಹೊಸ ಕಥಕ್ಕಳಿಯನ್ನು ಟೀಮ್ ಮಂಗಳೂರು ತಂಡದ ಮುಖ್ಯಸ್ಥ ಸರ್ವೇಶ್ ರಾವ್ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದೆ. ಈ ಗಾಳಿಪಟ ಸುಮಾರು 12 ಅಡಿ ಅಗಲ, 38 ಅಡಿ ಉದ್ದವಿದೆ.

Tap to resize

Latest Videos

ರೈತ ಆತ್ಮಹತ್ಯೆಗೆ ಸರ್ಕಾರ, ಕೃಷಿ ವಿಜ್ಞಾನಿಗಳು ನೇರ ಹೊಣೆ: ರೈತ ಸಂಘ ಆರೋಪ

ಈ ಗಾಳಿಪಟವನ್ನು ವರ್ಣವೈವಿಧ್ಯತೆಯ ಬದಲಾವಣೆ ಸೇರಿದಂತೆ ಹಿಂದಿನ ಕಥಕ್ಕಳಿಗಿಂತ ಈ ಬಾರಿ ವಿಭಿನ್ನವಾಗಿ ರಚಿಸಲಾಗುತ್ತಿದೆ. ಗಾಳಿಪಟಕ್ಕೆ ಬೇಕಾದ ಬಟ್ಟೆ ರಿಪ್ ಸ್ಟಾಕ್ ನೈಲಾನ್ ಫ್ಯಾಬ್ರಿಕ್‍ನ್ನು ಇಂಗ್ಲೆಂಡ್‍ನಿಂದ ತರಿಸಲಾಗಿದೆ. ಗಾಳಿಪಟಕ್ಕೆ ಬಟ್ಟೆ, ಬಿದಿರು, ಡೆಕ್ಲಾನ್ ಥ್ರೆಡ್ (ಪ್ಯಾರಚೂಟ್ ಮೆಟಿರಿಯಲ್) ಬಳಸಲಾಗಿದೆ. ಇದಕ್ಕೆ ಬೇಕಾದ ಬಿದಿರನ್ನು ಗೋವಾ ರತ್ನಗಿರಿಯ ವೆನ್‍ರೂಲಾದಿಂದ ತರಿಸಲಾಗಿದೆ. ಕಲಾವಿದ ದಿನೇಶ್ ಹೊಳ್ಳ ಅವರು ಕಥಕ್ಕಳಿಯ ನಕಾಶೆ ತಯಾರಿಸಿದರೆ, ಸರ್ವೇಶ್ ರಾವ್ ಮಾರ್ಗದರ್ಶನದಲ್ಲಿ ಪ್ರಾಣೇಶ್ ರಾವ್ ಮತ್ತು ಸತೀಶ್ ರಾವ್, ಪ್ರಶಾಂತ್ ಉಪಾಧ್ಯಾಯ ಮತ್ತು ಅರುಣ್ ಗಾಳಿಪಟ ರಚಿಸಿದ್ದಾರೆ.

ಟೀಮ್ ಮಂಗಳೂರು ಆಕರ್ಷಣೆ:

ಟೀಮ್ ಮಂಗಳೂರು ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿದ 60 ಮಾದರಿಯ ಗಾಳಿಪಟಗಳಿದ್ದು, ಅವುಗಳಲ್ಲಿ ಕಥಕ್ಕಳಿ, ತೆಂಕು- ಬಡಗುತಿಟ್ಟು ಯಕ್ಷಗಾನ ಗಾಳಿಪಟ, ಗರುಡ, ಡೇವಿಲ್‍ಡೇರ್, ಟ್ರೈನ್ ಸೀರಿಸ್, ಬಟರ್‍ಫ್ಲೈ, ಚಾರ್ಲಿ ಚಾಪ್ಲಿನ್ ಗಾಳಿಪಟಗಳು ವಿಶೇಷ ಆಕರ್ಷಣೆಯಾಗಿವೆ.

ಟೀಮ್ ಮಂಗಳೂರು ತಂಡ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಪಟ ಪ್ರದರ್ಶನ ನೀಡುವ ಮೂಲಕ ರಾಜ್ಯ, ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದೆ. ಫ್ರಾನ್ಸ್, ಜಪಾನ್, ಥಾಯ್ಲೆಂಡ್ ಸೇರಿದಂತೆ ವಿದೇಶದಲ್ಲಿ ಟೀಮ್ ಮಂಗಳೂರು ಗಾಳಿಪಟಕ್ಕೆ ಭಾರಿ ಬೇಡಿಕೆ ಮತ್ತು ಗೌರವ ಇದೆ. ವಿದೇಶಿ ಪ್ರವಾಸ ವೇಳೆ ಈ ತಂಡ ಗಾಳಿಪಟ ತರಬೇತಿ ಮಾತ್ರವಲ್ಲದೆ ದಿನೇಶ್ ಹೊಳ್ಳ ಅವರು ಚಿತ್ರಕಲೆಯ ಮೂಲಕ ಗಮನ ಸೆಳೆದಿದ್ದರು.

ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಏಕೆ?: ಪದ್ಮರಾಜ್‌

ಅಂತಾರಾಷ್ಟ್ರೀಯವಾಗಿ ಮಿಂಚಿದ ‘ಟೀಮ್’

ಗಾಳಿಪಟಗಳ ಬಗ್ಗೆ ಆಸಕ್ತಿ ಮತ್ತು ಅವುಗಳನ್ನು ತಯಾರಿಸಿ ಹಾರಿಸುವ ಹವ್ಯಾಸವಿರುವ ಸಮಾನ ಮನಸ್ಕರ ತಂಡ ‘ಟೀಮ್‌ ಮಂಗಳೂರು’. ಗಾಳಿಪಟದ ಹವ್ಯಾಸವಾಗಿ ಜನರಲ್ಲಿ ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಯುವ ಜನಾಂಗದಲ್ಲಿ ಬೆಳೆಸಬೇಕು ಎಂಬ ಪ್ರಮುಖ ಉದ್ದೇಶದಿಂದ 1998ರಲ್ಲಿ ‘ಟೀಮ್‌ ಮಂಗಳೂರು’ ಅಸ್ತಿತ್ವಕ್ಕೆ ಬಂತು. ಯುವಜನರಲ್ಲಿ ಪ್ರಕೃತಿಯ ಬಗ್ಗೆ ಪ್ರೀತಿ ಹಾಗೂ ಗೌರವ ಬೆಳೆಸುವುದು ಮತ್ತು ಭಾರತದ ಶ್ರೀಮಂತ ಸಂಸ್ಕøತಿಯನ್ನು ತನ್ನ ಗಾಳಿಪಟಗಳ ಮೂಲಕ ಜಗತ್ತಿನೆಲ್ಲೆಡೆ ಸಾರುವುದು ತಂಡದ ಉದ್ದೇಶವಾಗಿದೆ.

ಈ ತಂಡ ಈಗಾಗಲೇ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ನೆದರ್‌ಲ್ಯಾಂಡ್‌, ಕಾಂಬೋಡಿಯಾ, ಉಕ್ರೇನ್, ಕುವೈಟ್, ಥಾಯ್ಲೆಡ್ ಸೇರಿದಂತೆ ನಾನಾ ರಾಷ್ಟ್ರಗಳಿಗೆ ತೆರಳಿ ಗಾಳಿಪಟ ಪ್ರದರ್ಶನ ನೀಡಿದೆ.

click me!