ಮಕ್ಕಳ ಅಭಿರುಚಿ, ಆಸಕ್ತಿಗೆ ತಕ್ಕಂತೆ ಬೋಧನೆ ಮಾಡಬೇಕು, ಮಕ್ಕಳು ನಾಡಿನ ಉತ್ತಮ ಪ್ರಜೆಗಳಾಗಲು ವಿದ್ಯೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು.
ಮೈಸೂರು (ನ.04): ಮಕ್ಕಳ ಅಭಿರುಚಿ, ಆಸಕ್ತಿಗೆ ತಕ್ಕಂತೆ ಬೋಧನೆ ಮಾಡಬೇಕು, ಮಕ್ಕಳು ನಾಡಿನ ಉತ್ತಮ ಪ್ರಜೆಗಳಾಗಲು ವಿದ್ಯೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಸಕ ತನ್ವೀರ್‌ಸೇಠ್ ಹೇಳಿದರು.
ನಗರದ ಎನ್.ಆರ್. ಮೊಹಲ್ಲಾದ ಸಂತ ಜೋಸೆಫರ ಪ್ರೌಢಶಾಲೆ (School) ಸಭಾಂಗಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣ ಮತ್ತು ಇಲಾಖೆ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಸಂಪನ್ಮೂಲ ಸಮನ್ವಯಾಧಿಕಾರಿ ಕಚೇರಿಯ ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯೆ (Education) ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಾದರೂ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ ಎಂದರು.
undefined
ಶಿಕ್ಷಣದಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಹೊಸ ಶಿಕ್ಷಣ ನೀತಿಗೆ ಕರ್ನಾಟಕ ಅಡಿಪಾಯವಾಗಿದೆ. ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ಹಿಂದಿ ಮತ್ತು ಇಂಗ್ಲಿಷ್‌ಗೆ ಆದ್ಯತೆ ನೀಡಿದರೆ ಮಾತೃಭಾಷೆಯ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಂದು ಮಕ್ಕಳಿಗೂ, ಪ್ರತಿಭೆ ಮತ್ತು ಶಿಸ್ತು ಮುಖ್ಯ. ಮಕ್ಕಳಿಗೆ ಅವಕಾಶ ಒದಗಿಸಿ ಪ್ರತಿಭೆ ಹೊರತರಬೇಕು ಎಂದು ಅವರು ಹೇಳಿದರು.
ಉತ್ತಮ ಸಮಾಜ ನಿರ್ವಾಣವಾಗಬೇಕಾದರೆ ಮಕ್ಕಳ ಜೊತೆಗೆ ಪೋಷಕರ ಪಾತ್ರವು ಮುಖ್ಯ. ಪಠ್ಯ ಪುಸ್ತಕದ ಜೊತೆ ಸಮಾಜದಲ್ಲಿ ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಶಿಕ್ಷಣ ಇಲಾಖೆ ಸಹ ನಿರ್ದೇಶಕಿ ಗೀತಾ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಹೊರ ತೆಗೆಯಬೇಕು. ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ನೀಡಿ ಪೋ›ತ್ಸಾಹ ನೀಡಬೇಕು. ಶಾಲಾ ಮಟ್ಟದಿಂದ ರಾಜ್ಯಮಟ್ಟದ ತನಕ ಭಾಗವಹಿಸಿ ಗೆಲ್ಲಬೇಕು. ಸೋಲು ಗೆಲುವಿನ ಬಗ್ಗೆ ಯೋಚಿಸದೆ ಭಾಗವಹಿಸುವುದೇ ಮುಂದಿನ ಗೆಲುವಿಗೆ ಪ್ರೇರಣೆ ಆಗಲಿದೆ ಎಂದು ು ಹೇಳಿದರು.
ಡಿಡಿಪಿಐ ಬಿ.ಎಸ್. ರಾಮಚಂದ್ರ ರಾಜೇ ಅರಸ್ ಮಾತನಾಡಿ, ಮಕ್ಕಳು ಹಲವು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದನ್ನು ನೋಡಿದರೆ ಅವರಲ್ಲಿನ ಉತ್ಸಾಹ ಕಾಣಿಸುತ್ತದೆ. ತನ್ವೀರ್‌ಸೇಠ್ ಅವರು ಶಿಕ್ಷಣ ಸಚಿವರಾಗಿದ್ದಾಗ ಹಲವು ಬದಲಾವಣೆ ತರುವ ಮೂಲಕ ಶಿಕ್ಷಕರ ಪರವಾಗಿ ಕೆಲಸ ಮಾಡಿದರು. ಶಿಕ್ಷಕರ ವರ್ಗಾವಣೆ ಮಾಡುವಾಗ ಏಕಪಕ್ಷೀಯ ನಿರ್ಧಾರ ಮಾಡದೆ ಎಲ್ಲರೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಟ್ಟಿರುವುದಾಗಿ ಹೇಳಿದರು.
ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಆಯೋಜಿಸಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಪಾಲ್ಗೊಂಡಿದ್ದ ನೂರಾರು ಮಕ್ಕಳು ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ರಾಜಕುಮಾರ್, ಭಕ್ತ ಪ್ರಹ್ಲಾದ ಮುಂತಾದ ವೇಷ ಭೂಷಣದಲ್ಲಿ ಕಂಗೊಳಿಸಿದರು.
ಅಲ್ಲದೆ ಮಕ್ಕಳು ಪ್ಲಾಸ್ಟಿಕ್ ವಿರುದ್ಧದ ಹೋರಾಟದ ಕುರಿತು ಅರಿವು ಮೂಡಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಸಿ.ಆರ್. ನಾಗರಾಜಯ್ಯ, ಬಿಇಡಿ ಕಾಲೇಜಿನ ಪ್ರಾಂಶುಪಾಲೆ ಗೀತಾ, ಮೈಸೂರು ಉತ್ತರ ವಲಯ ಬಿಇಒ ಕೃಷ್ಣ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ರೇವಣ್ಣ ಇದ್ದರು.
ಕೇವಲ ಪರೀಕ್ಷೆಗಾಗಿ ಓದಿಸುವುದು ಅಪಾಯಕಾರಿ
ಸಿದ್ದಾಪುರ : ಇಂದಿನ ಬದಲಾದ ಸ್ಥಿತಿಯಲ್ಲಿ ಪಾಲಕರು, ಶಿಕ್ಷಕರು ತಮ್ಮ ಮಕ್ಕಳು ಹೆಚ್ಚು ಅಂಕ ಗಳಿಸಬೇಕೆಂದು ಬಯಸಿ ಕೇವಲ ಪರೀಕ್ಷೆಗಾಗಿ ಓದಿಸುವ ಪ್ರವೃತ್ತಿ ಬೆಳೆದಿದ್ದು ಇದು ತುಂಬ ಅಪಾಯಕಾರಿ ಎಂದು ಸಿದ್ದಾಪುರ ಕ್ಷೇತ್ರಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಹೇಳಿದರು.
ಪಟ್ಟಣದ ಹಾಳದಕಟ್ಟಾಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕಿನ ಕನ್ನಡ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಅಭಿರುಚಿಗೆ ತಕ್ಕಂತೆ ಜ್ಞಾನ ಗಳಿಸುವ ದೃಷ್ಟಿಯಿಂದ ಪಠ್ಯವಲ್ಲದೆ ಇತರ ಪುಸ್ತಕಗಳನ್ನೂ ಓದಿಸಿದರೆ ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗುತ್ತದೆ. ಮಕ್ಕಳನ್ನು ಅಂಕ ಗಳಿಕೆಗೆ ಓದಿಸದೇ ಜ್ಞಾನ ಸಂಪಾದನೆಗಾಗಿ ಓದಿಸಲು ತೊಡಗಿಸಬೇಕೆಂದು ಹೇಳಿದರು.
ಬಿಆರ್‌ಸಿ ಸಮನ್ವಯಾಧಿಕಾರಿ ಚೈತನ್ಯ ಕುಮಾರ ಕಲಿಕಾ ಚೇತರಿಕೆ ಅನುಷ್ಠಾನ ಕುರಿತು ಮಾತನಾಡಿದರು. ಹಾಳದಕಟ್ಟಾಪ್ರೌಢಶಾಲೆಯ ಮುಖ್ಯಾಧ್ಯಾಪಕ ಜಿ.ಐ. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.