ಕ್ರೀಡಾಕೂಟದ ಸಂದರ್ಭ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಗಲಾಟೆ ನಡೆದಿರುವ ಗಟನೆ ಮೈಸೂರಿನಲ್ಲಿ ನಡೆದಿದೆ. ಅಧ್ಯಾಪಕಿ ರಂಜಿತಾ ಅವರು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿರುವುದುದರಿಂದ ಗಲಾಟೆ ನಡೆದಿದೆ.
ಮೈಸೂರು(ಮಾ.03): ಕ್ರೀಡಾಕೂಟದ ಸಂದರ್ಭ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಗಲಾಟೆ ನಡೆದಿರುವ ಗಟನೆ ಮೈಸೂರಿನಲ್ಲಿ ನಡೆದಿದೆ. ಅಧ್ಯಾಪಕಿ ರಂಜಿತಾ ಅವರು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ಮಾಡಿರುವುದುದರಿಂದ ಗಲಾಟೆ ನಡೆದಿದೆ.
ಕ್ರೀಡಾಕೂಟ ಸಂದರ್ಭ ವಿದ್ಯಾರ್ಥಿಗಳು, ಶಿಕ್ಷಕರ ಮಧ್ಯೆ ಗಲಾಟೆ ನಡೆದಿದ್ದು, ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದೆ. ಮೈಸೂರು-ನಂಜನಗೂಡು ರಸ್ತೆ ತಾಂಡವಪುರ ಬಳಿಯ ಕಾಲೇಜಿನಲ್ಲಿ ಅಧ್ಯಾಪಕಿ ರಂಜಿತಾರಿಂದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ.
ಚಾಮರಾಜನಗರ: ಮೂಕ ಮಹಿಳೆ ಮೇಲೆ ಅತ್ಯಾಚಾರ
ಹಲ್ಲೆ ಮಾಡಿದ್ದಕ್ಕೆ ತಿರುಗಿಬಿದ್ದ ವಿದ್ಯಾರ್ಥಿಗಳು ತರಗತಿ ಮತ್ತು ಕ್ರೀಡಾಕೂಟ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪರ ನಿಂತಿದ್ದಕ್ಕೆ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ನಾಗೇಂದ್ರ ಪ್ರಸಾದ್‌ಗೆ ರಂಜಿತಾ ಪತಿ ಚೇತನ್ ಕಪಾಳಮೋಕ್ಷ ಮಾಡಿದ್ದಾರೆ.
ಕಾಲೇಜಿನ ಜಂಟಿ ಕಾರ್ಯದರ್ಶಿ ಆಗಿರೋ ಚೇತನ್ ಎಚ್ಓಡಿ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆಗಿಳಿದಿದ್ದಾರೆ. ಪತಿ, ಪತ್ನಿಯಿಂದ ಸಿಎಸ್ ವಿಭಾಗದ ವಿದ್ಯಾರ್ಥಿಗಳ ಮೇಲೆ ದ್ವೇಷ ಮಾಡ್ತಾರೆಂದು ವಿದ್ಯಾರ್ಥಿಗಳ ಆರೋಪಿಸಿದ್ದಾರೆ. ವಿಚಾರ ತಿಳಿದು ನಂಜನಗೂಡು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನೀರು ಒಯ್ಯಲು ಬಂದ ಯುವತಿ ಗುಪ್ತಾಂಗಕ್ಕೆ ಕೈ ಹಾಕಿ ಕಿರುಕುಳ
ಹಲ್ಲೆ ಪ್ರಕರಣದ ಬಗ್ಗೆ ನಾಗೇಂದ್ರ ಪ್ರಸಾದ್ ಅವರಿಂದ ಪೊಲೀಸರು ದೂರು ಸ್ವೀಕರಿಸಿದ್ದಾರೆ. ಆಡಳಿತ ಮಂಡಳಿ ಹಲ್ಲೆ ಮಾಡಿದ ದೃಶ್ಯವನ್ನು ಸಿಸಿಟಿವಿಯಲ್ಲಿ ಡಿಲಿಟ್ ಮಾಡಿದೆ. ವಿದ್ಯಾರ್ಥಿಗಳು ರೊಚ್ಚಿಗೆದ್ದ ಕಾರಣ ಇಂದು ಮತ್ತು ನಾಳೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.