ಕ್ರೈಸ್ತ ಧರ್ಮ ಬೋಧಿಸಿದ ಶಿಕ್ಷಕಿ: ದೇವರ ಫೋಟೋ ಎಸೆದ ಬಾಲಕಿ

By Kannadaprabha NewsFirst Published Jul 30, 2019, 2:25 PM IST
Highlights

ಶಿಕ್ಷಕಿ ಮಕ್ಕಳಿಗೆ ಕ್ರೈಸ್ತ ಧರ್ಮದ ಬಗ್ಗೆ ಬೋಧನೆ ಮಾಡಿ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಬಾಲಕಿಯರ ಶಾಲೆಗೆ ಮುತ್ತಿಗೆ ಹಾಕಿ ಶಾಲೆ ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಂಡ್ಯ(ಜು.30): ಪಾಂಡವಪುರದಲ್ಲಿ ಶಿಕ್ಷಕಿ ಮಕ್ಕಳಿಗೆ ಕ್ರೈಸ್ತ ಧರ್ಮದ ಬಗ್ಗೆ ಬೋಧನೆ ಮಾಡಿ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಟ್ಟಣದ ಬಾಲಕಿಯರ ಶಾಲೆಗೆ ಮುತ್ತಿಗೆ ಹಾಕಿ ಶಾಲೆ ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು.

ಶಾಲೆಯ ಎಲಿಜಬೆತ್‌ ಮರ್ಸಿ ಎಂಬ ಶಿಕ್ಷಕಿಯು ಮಕ್ಕಳಿಗೆ ಪಠ್ಯಕ್ರಮದ ಶಿಕ್ಷಣದ ಬಗ್ಗೆ ಬೋಧನೆ ಮಾಡುವುದನ್ನು ಬಿಟ್ಟು ಕ್ರಿಶ್ಚಿಯನ್‌ ಧರ್ಮ ಹಾಗೂ ಏಸುಕ್ರಿಸ್ತನ ಬಗ್ಗೆ ಭೋದನೆ ಮಾಡಿ ಮಕ್ಕಳಿಗೆ ಹಿಂದೂ ಧರ್ಮದ ಬಗ್ಗೆ ಮಕ್ಕಳಿಗೆ ಕೀಳಿರಿಮೆ ಹುಟ್ಟುವಂತೆ ಮನಪರಿವರ್ತನೆ ಮಾಡುತ್ತಿದ್ದಾರೆ ಎಂದು ದೂರಿದರು.

ದೇವರ ಫೋಟೋ ಎಸೆದು ಶಿಲುಬೆ ಧರಿಸಿದ ಬಾಲಕಿ:

ಶಿಕ್ಷಕರ ಪಾಠದಿಂದ ಪ್ರೇರಿತರಾದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ಹಿಂದೂ ಧರ್ಮದ ಎಲ್ಲಾ ದೇವರ ಪೋಟೊಗಳು, ಅರಿಶಿಣ- ಕುಂಕುಮ ಎಸೆದು, ಏಸ್ತುಕ್ರಿಸ್ತನ ಶಿಲುಬೆಯ ಡಾಲರ್‌ ಹಾಕಿಕೊಂಡಿದ್ದಾಳೆ. ಯಾವುದೇ ಕಾರಣಕ್ಕೂ ಮಕ್ಕಳ ಮತಾಂತರ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಇಂತಹ ಶಿಕ್ಷಕಿಯ ಬಗ್ಗೆ ಇಲ್ಲಿನ ಆಡಳಿತ ಮಂಡಳಿಯವರು ಸೂಕ್ತ ಕ್ರಮತೆಗೆದುಕೊಳ್ಳಬೇಕು. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಶಿಕ್ಷಕಿ ತಿದ್ದಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತವಾಗಿ ಶಾಲೆಯ ಮುಖ್ಯದ್ವಾರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೊಡ​ಗು ಶಾಲೆ​ಗ​ಳಿಗೆ ‘ಮಿಷ​ನರಿ ಪುಸ್ತ​ಕ’ ರವಾನೆ, ವಿವಾ​ದ!

ಮುಖ್ಯಶಿಕ್ಷಕಿ ಬಿ.ಮಂಜುಳಾ ಮಾತನಾಡಿ, ಶಿಕ್ಷಕಿ ಧರ್ಮದ ಬಗ್ಗೆ ಬೋಧನೆ ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಶಿಕ್ಷಕಿ ಇಂದು ಶಾಲೆಗೆ ರಜೆ ಹಾಕಿದ್ದಾರೆ. ಅವರು ಬಂದ ತಕ್ಷಣ ಈ ಬಗ್ಗೆ ವಿಚಾರಣೆ ನಡೆಸಿ ಕ್ರಮತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಟ್ಟರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಎಚ್‌.ಎನ್‌.ಮಂಜುನಾಥ್‌, ಧನಂಜಯ, ಶ್ರೀನಿವಾಸ್‌ ನಾಯಕ್‌, ಶ್ರೀನಿವಾಸ್‌, ಹಿಂದೂಜಾರಗಣ ವೇದಿಕೆಯ ಮುಖಂಡರಾದ ಪಾಂಡಿದೊರೆ, ಮಾರ್ಕಾಂಡಯ್ಯ, ಕೇಶವ ಹಾಜರಿದ್ದರು.

click me!