ಆಟೋ - ಟೆಂಪೋ ನಡುವೆ ಭೀಕರ ಅಪಘಾತ : ಶಿಕ್ಷಕಿ ಸಾವು

Published : Dec 02, 2019, 10:27 AM ISTUpdated : Dec 02, 2019, 10:29 AM IST
ಆಟೋ - ಟೆಂಪೋ ನಡುವೆ ಭೀಕರ ಅಪಘಾತ : ಶಿಕ್ಷಕಿ ಸಾವು

ಸಾರಾಂಶ

ಆಟೋ ಹಾಗೂ ಟೆಂಪೊ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಶಿಕ್ಷಕಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಮಂಗಳೂರು[ಡಿ.02]: ನಗರದ ಕದ್ರಿ ಕಂಬಳ ರಸ್ತೆಯಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಪಣಂಬೂರು ಕೇಂದ್ರೀಯ ವಿದ್ಯಾಲಯದ ಶಿಕ್ಷಕಿಯಾಗಿರುವ ಬಿಜೈ ನಿವಾಸಿ ಶೈಲಜಾ ರಾವ್‌(55) ಎಂದು ಗುರುತಿಸಲಾಗಿದೆ.

ಇವರು ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಗೂಡ್ಸ್‌ ಟೆಂಪೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅತಿಯಾದ ವೇಗದಲ್ಲಿದ್ದ ಟೆಂಪೋ ಇನ್ನೊಂದು ರಿಕ್ಷಾಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಮತ್ತೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಟೆಂಪೋ ಡಿಕ್ಕಿ ಹೊಡೆದ ಬಳಿಕ ರಿಕ್ಷಾವನ್ನು ತಳ್ಳಿಕೊಂಡು ಹೋಗಿದೆ. ಈ ಭೀಕರ ಅಪಘಾತಕ್ಕೆ ಸಿಲುಕಿದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಶೈಲಜಾ ರಾವ್‌ ಅವರು ಗಂಭೀರ ಗಾಯಗೊಂಡು ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರಿಕ್ಷಾ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳೂರು ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು