ಚುನಾವಣೆಗೆ : ಬಿಜೆಪಿ ಅಭ್ಯರ್ಥಿ ಅತ್ಯಂತ ಶ್ರೀಮಂತ- ಕೈ ಅಭ್ಯರ್ಥಿ ಬಳಿ ಸ್ವಂತ ಮನೆಯೂ ಇಲ್ಲ

By Kannadaprabha News  |  First Published Oct 12, 2020, 12:37 PM IST

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿ ಅಭ್ಯರ್ಥಿ ಶ್ರೀಮಂತರಾಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಬಳಿ ಒಂದು ಮನೆಯೂ ಇಲ್ಲ.


ರಾಮ​ನ​ಗ​ರ (ಅ.12):  ವಿಧಾನ ಪರಿಷತ್‌ನ ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ​ದಿಂದ ಸ್ಪರ್ಧೆ ಬಯ​ಸಿ​ರುವ ಪ್ರಮುಖ ರಾಜ​ಕೀಯ ಪಕ್ಷ​ಗಳ ಅಭ್ಯ​ರ್ಥಿಗಳ ಪೈಕಿ ಬಿಜೆಪಿಯ ಪುಟ್ಟಣ್ಣ ​ಅತಿ ಹೆಚ್ಚು ಆಸ್ತಿ ಘೋಷಿ​ಸಿ​ಕೊಂಡು ಸಿರಿ​ವಂತ ಅಭ್ಯ​ರ್ಥಿ ಎನಿ​ಸಿ​ಕೊಂಡಿ​ದ್ದಾ​ರೆ.

ಚುನಾ​ವಣಾ ಆಯೋ​ಗಕ್ಕೆ ಸಲ್ಲಿ​ಸಿ​ರುವ ಅಫಿ​ಡೆ​ವಿಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ 44 ಕೋಟಿ 70 ಲಕ್ಷ ರು., ಜೆಡಿ​ಎಸ್‌ ಅಭ್ಯರ್ಥಿ ಎ.ಪಿ.​ರಂಗನಾಥ್‌ 10.43 ಕೋಟಿ ಹಾಗೂ ಕಾಂಗ್ರೆಸ್‌ ಅಭ್ಯ​ರ್ಥಿ ಪ್ರವೀಣ್‌ ಪೀಟರ್‌ 22 ಲಕ್ಷ ಆಸ್ತಿ ಘೋಷಿ​ಸಿ​ಕೊಂಡಿ​ದ್ದಾ​ರೆ.

Tap to resize

Latest Videos

ಸಾಲ​ಗಾರ​ನಾ​ದರು ಸಾಹು​ಕಾ​ರ: ಪುಟ್ಟಣ್ಣರವರು 2018-19ನೇ ಸಾಲಿಗೆ 1 ಕೋಟಿ 25 ಲಕ್ಷ ರು.ಗ​ಳಿದ್ದ ಆದಾಯವನ್ನು 2019-20ನೇ ಸಾಲಿಗೆ ವಾರ್ಷಿಕ 62 ಲಕ್ಷ ರುಪಾಯಿ ಎಂದು ಘೋಷಿ​ಸಿ​ಕೊಂಡಿ​ದ್ದಾರೆ. ಚರಾಸ್ಥಿ 18,48,41,097 ರು., ಸ್ಥಿರಾಸ್ತಿಗಳ ಸದ್ಯದ ಮಾರು​ಕಟ್ಟೆಮೌಲ್ಯ 26,22,54,578 ರು. ಸೇರಿ ಒಟ್ಟು 44 ಕೋಟಿ 70 ಲಕ್ಷ ರು. ಮೌಲ್ಯದ ಆಸ್ತಿಯನ್ನು ಹೊಂದಿ​ದ್ದಾ​ರೆ. ಬ್ಯಾಂಕು, ಕ್ರೆಡಿಟ್‌ ಕೋ-ಆಪ​ರೇ​ಟಿವ್‌ ಸೊಸೈ​ಟಿ​ ಹಾಗೂ ಖಾಸಗಿ ವ್ಯಕ್ತಿ​ಗ​ಳಿಂದ ​ಪು​ಟ್ಟ​ಣ್ಣ​ರ​ವರು, 9,07,14,116 ರು. ಸಾಲ ಪಡೆ​ದು​ಕೊಂಡಿ​ದ್ದಾರೆ. ಚನ್ನ​ಪ​ಟ್ಟಣ ಹಾಗೂ ಬೆಂಗ​ಳೂರು ಮಲ್ಲೇ​ಶ್ವರಂನಲ್ಲಿ ಮನೆ ಹೊಂದಿ​ದ್ದಾರೆ. ಚನ್ನ​ಪ​ಟ್ಟ​ಣ​ದಲ್ಲಿ ಮತ್ತು ಕೆಂಗೇರಿ ಹೋಬ​ಳಿ​ಯಲ್ಲಿ ಕೃಷಿ ಭೂಮಿ ಇದೆ. ಟೊಯೋಟಾ ಫಾರ್ಚು​ನರ್‌ ಕಾರು ಮತ್ತು ಮೆರ್ಸಿ​ಡಿಸ್‌ ಬೆನ್‌್ಜ ಕಾರಿನ ಮಾಲೀ​ಕರು. ಇವರ ಬಳಿ 550 ಗ್ರಾಂ ಚಿನ್ನ, 4 ಕೆ.ಜಿ. ಬೆಳ್ಳಿ ಆಭ​ರಣ ಇದೆ ಎಂದು ಪುಟ್ಟಣ್ಣ ಘೋಷಿ​ಸಿ​ಕೊಂಡಿ​ದ್ದಾ​ರೆ.

10 ಕೋಟಿ ಆಸ್ತಿಯ ಒಡೆ​ಯ:  ಜೆಡಿ​ಎಸ್‌ ಅಭ್ಯರ್ಥಿ ಎ.ಪಿ.​ ರಂಗ​ನಾಥ್‌ ಅವರು ಚರಾಸ್ತಿ ಮೌಲ್ಯ 35,55,103 ರು., ಸ್ಥಿರಾಸ್ತಿಯ ಸದ್ಯದ ಮಾರು​ಕಟ್ಟೆಮೌಲ್ಯ 10,07,50,000 ರು. ಸೇರಿ ಒಟ್ಟು 10.43 ಕೋಟಿ ರುಪಾ​ಯಿ ಆಸ್ತಿಯ ಒಡೆ​ಯ​ರಾ​ಗಿ​ದ್ದಾರೆ.

2018-19ನೇ ಸಾಲಿಗೆ 3.54 ಲಕ್ಷ ರು. ಆದಾಯವಿತ್ತು. ಅದು 2019-20ನೇ ಸಾಲಿಗೆ 5.99 ಲಕ್ಷ ರು.ಗ​ಳ​ಷ್ಟಾ​ಗಿದೆ. ಬ್ಯಾಂಕು​ಗಳು ಸೇರಿ​ದಂತೆ ವಿವಿಧ ಮೂಲ​ಗ​ಳಿಂದ ಪಡೆ​ದಿ​ರುವ 23,79,626 ರು. ಸಾಲ​ವನ್ನು ಬಾಕಿ ಉಳಿ​ಸಿ​ಕೊಂಡಿ​ದ್ದಾರೆ. ಕೆಂಗೇರಿ ಹೋಬಳಿ, ಸೇರಿ​ದಂತೆ ವಿವಿ​ಧೆಡೆ ಇವ​ರಿಗೆ ಕೃಷಿ ಭೂಮಿ ಇದೆ. ಇನ್ನೋವಾ ಕಾರು, 150 ಗ್ರಾಂ ಚಿನ್ನ ಮತ್ತು 3.5 ಕೇಜಿ ಬೆಳ್ಳಿ ಆಭ​ರ​ಣ​ಗ​ಳಿವೆ ಎಂದು ಹೇಳಿ​ಕೊಂಡಿ​ದ್ದಾರೆ.

ನಮ್ಮಿಂದಲೇ ಯಡಿಯೂರಪ್ಪ ಸಿಎಂ ಆಗಿದ್ದು: ಎಂಟಿಬಿ ...

ಸ್ವಂತ ಮನೆಯೂ ಇಲ್ಲ:  ಕಾಂಗ್ರೆಸ್‌ ಅಭ್ಯರ್ಥಿ ಆರ್‌ .ಪ್ರ​ವೀಣ್‌ ಕುಮಾರ್‌ ಅವರ ಹೆಸ​ರಿ​ನ​ಲ್ಲಾ​ಗಲಿ ಅಥವಾ ಪತ್ನಿಯ ಹೆಸ​ರಿ​ನ​ಲ್ಲಾಗಲಿ ಸ್ವಂತ ಮನೆ​ಯನ್ನೂ ಹೊಂದಿಲ್ಲ. 22,37,683 ರು.ಮೌಲ್ಯದ ಚ​ರಾಸ್ಥಿ ಹೊಂದಿ​ದ್ದಾ​ರೆ.

2019-18ನೇ ಸಾಲಿಗೆ 4.16 ಲಕ್ಷ ರು., 2018-19ನೇ ಸಾಲಿಗೆ 3.94 ಲಕ್ಷ ರು. ವಾರ್ಷಿಕ ಆದಾಯ ಘೋಷಿ​ಸಿ​ಕೊಂಡಿ​ದ್ದಾ​ರೆ. ಬ್ಯಾಂಕಿ​ನಿಂದ ಪಡೆ​ದಿ​ರುವ 15 ಸಾವಿ​ರದ 704 ರು. ಮಾತ್ರ ಸಾಲ ಮರು​ಪಾ​ವತಿ ಮಾಡ​ಬೇ​ಕಾ​ಗಿದೆ. ಟೊಯೋಟಾ ಇನ್ನೋವಾ ಕಾರು, 200 ಗ್ರಾಂ ಚಿನ್ನ ಮತ್ತು 1 ಕೆಜಿ ಬೆಳ್ಳಿ ಆಭ​ರ​ಣ​ಗ​ಳಿವೆ ಎಂದು ಪ್ರವೀಣ್‌ ಘೋಷ​ಣೆ ಮಾಡಿ​ಕೊಂಡಿ​ದ್ದಾರೆ.

click me!