ಅಮ್ಮ ಬೇಕು ಎಂದ ಮಗುವಿನ ಬೆನ್ನಿಗೆ ಬರೆ ಹಾಕಿದ ಹುಬ್ಬಳ್ಳಿ ಶಿಕ್ಷಕಿ

Published : Aug 29, 2018, 06:21 PM ISTUpdated : Sep 09, 2018, 10:14 PM IST
ಅಮ್ಮ ಬೇಕು ಎಂದ ಮಗುವಿನ ಬೆನ್ನಿಗೆ ಬರೆ ಹಾಕಿದ ಹುಬ್ಬಳ್ಳಿ ಶಿಕ್ಷಕಿ

ಸಾರಾಂಶ

ನರ್ಸರಿ ಶಾಲೆಗೆ ಹೋಗಿದ್ದ ಮಗು ಅಮ್ಮ ಬೇಕು ಎಂದು ಹಠ ಮಾಡಿತ್ತು. ಒಂದು ಚೂರು ರಚ್ಚೆ ಹಿಡಿದಿತ್ತು. ಆ ಮಗುವನ್ನು ಸಮಾಧಾನಪಡಿಸಿ, ಸಂತೈಸಬೇಕಿದ್ದ ನರ್ಸರಿ ಶಿಕ್ಷಕಿ ಮಾಡಿದ್ದು ಮಾತ್ರ ಅಮಾನವೀಯ ಕೆಲಸ. ಏನೂ ಅರಿಯದ ಮುಗ್ಧ ಮಗುವಿನ ಬೆನ್ನಿಗೆ ಬರೆ ಹಾಕಿದ್ದಾಳೆ.

ಹುಬ್ಬಳ್ಳಿ[ಆ.29]  ಅಮ್ಮ ಬೇಕು ಎಂದು ಹಠ ಹಿಡಿದಿದ್ದ ನಾಲ್ಕು ವರ್ಷದ ಬಾಲಕನ ಬೆನ್ನು ಊದಿಕೊಂಡಿದೆ. ನರ್ಸರಿ ಶಿಕ್ಷಕಿ ಬರೆ ಹಾಕಿದ್ದಾಳೆ. ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಪ್ರಕರಣ ನಡೆದಿದೆ. 

ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಬಾಲಕನ ತಾಯಿ ಕಾವೇರಿ ಆರೋಪ ಮಾಡಿದ್ದಾರೆ. ಆದರೆ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಹಾಗೂ ಆಯಾ ಅಲ್ಲಗಳೆದಿದ್ದಾರೆ.

ಬಾಲಕನ ತಾಯಿ ಕಾವೇರಿ ಶಿಕ್ಷಕ ಸತೀಶ್ ಹಾಗೂ ಆಯಾ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

PREV
click me!

Recommended Stories

ರಾಜ್ಯಕ್ಕೆ ಹಿಂಗಾರು ಪ್ರವೇಶ: ಕರಾವಳಿಯಲ್ಲಿ ಮೋಡ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅ.21ರ ವರೆಗೆ ಮಳೆ ಮುನ್ಸೂಚನೆ,
ಸ್ಟಿಂಗ್ ಆಪರೇಷನ್ ಫುಲ್ ಡಿಟೇಲ್ಸ್ ಅವರ ಹತ್ರನೇ ಇರೋದಾ? ಸಿಟಿ ರವಿ ಹೇಳಿದ ಆ ನಾಯಕ ಯಾರು?