ಜನರ ಒತ್ತಾಯದಿಂದ ಸಿದ್ದು ಸಿಎಂ ಆಗುವ ಇಂಗಿತ

By Web DeskFirst Published Aug 27, 2018, 6:09 PM IST
Highlights

 ಮೋದಿಯವರು ಹಗಲು ದರೋಡೆ ‌ಮಾಡುತ್ತಿದ್ದಾರೆ. ಒಂದಡೆ ರಾಷ್ಟ್ರದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮ ಸೈನಿಕರು ಪ್ರತಿದಿನ ಸಾಯುತ್ತಿದ್ದಾರೆ. ದುಷ್ಟ ಶಕ್ತಿಗಳ ವಿರುದ್ಧ, ನಮ್ಮ ಪಕ್ಷವನ್ನ ಬಲಪಡಿಸಬೇಕಿದೆ - ದಿನೇಶ್ ಗುಂಡೂರಾವ್

ಹುಬ್ಬಳ್ಳಿ[ಆ.27]: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆ ಕಾಪಡುತ್ತಿದ್ದಾರೆ. ಮತ್ತೊಮ್ಮೆ ಸಿಎಂ ಆಗುವ ಹಿಂಗಿತ ವ್ಯಕ್ತಪಡಿಸಿದ್ದು, ಜನರ ಒತ್ತಾಯದಿಂದ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಹುಬ್ಭಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಭಾಷಣ ಮಧ್ಯೆ ಮಾತನಾಡಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸ್ಥಳೀಯ ಚುನಾವಣೆಗೆ ಪ್ರಚಾರಕ್ಕೆ ನಾಳೆ ಕೊನೆಯ ದಿನವಾಗಿದ್ದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ - ಧಾರಾವಾಡ ಅವಳಿ ನಗರಕ್ಕೆ ಬರಬೇಕಾದ 150 ಕೋಟಿ ಪಿಂಚಣಿ ಹಣದ ಬಿಡುಗಡೆಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಕೇಂದ್ರ ಸರ್ಕಾರವನ್ನ ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ದೇಶದಲ್ಲಿ ಕೋಮುವಾದಿ ಜನರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೋದಿ ಸರ್ಕಾರ ಭ್ರಷ್ಟಾಚಾರ ತಡೆಯುವಲ್ಲಿ ವಿಫಲವಾಗಿದೆ. ನಮ್ಮ ದೇಶದ ಬ್ಯಾಂಕ್'ನಲ್ಲಿರುವ ಹಣ ಲೂಟಿ ಆಗಿದೆ. ಹಣ ಲೂಟಿ ಹೊಡೆದವರು ಮೋದಿ ಆಪ್ತರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿಯಿಂದ ಹಗಲು ದರೋಡೆ
ಲೋಕಪಾಲ ‌ಮಸೂದೆ ಜಾರಿಗೆ ಆಗುತ್ತಿಲ್ಲ, ಇನ್ನೂ ಭ್ರಷ್ಟಾಚಾರ ಎಲ್ಲಿಂದ ನಿಲ್ಲಬೇಕು. ಮೋದಿಯವರು ಹಗಲು ದರೋಡೆ ‌ಮಾಡುತ್ತಿದ್ದಾರೆ. ಒಂದಡೆ ರಾಷ್ಟ್ರದ ಭದ್ರತೆ ಬಗ್ಗೆ ಮಾತನಾಡುತ್ತಾರೆ. ಆದರೆ ನಮ್ಮ ಸೈನಿಕರು ಪ್ರತಿದಿನ ಸಾಯುತ್ತಿದ್ದಾರೆ. ದುಷ್ಟ ಶಕ್ತಿಗಳ ವಿರುದ್ಧ, ನಮ್ಮ ಪಕ್ಷವನ್ನ ಬಲಪಡಿಸಬೇಕಿದೆ. ಸಮ್ಮಿಶ್ರ ಸರ್ಕಾರವನ್ನ ಬಿಳಿಸಲು ಬಿಜೆಪಿಯವರು ಷಡ್ಯಂತ್ರ ಮಾಡುತ್ತಿದ್ದಾರೆ‌. ಕೆಲ ಬಿಜೆಪಿ ನಾಯಕರು ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಸಿದ್ದರಾಮಯ್ಯ ಅವರಿಂದ ಸರ್ಕಾರ ರಚನೆ
ಸಿದ್ದರಾಮಯ್ಯನವರು ಈ ಸರ್ಕಾರ ರಚನೆಯಾಗಲು ಕಾರಣ. ಪ್ರಹ್ಲಾದ ಜೋಶಿ ಒಬ್ಬ ಮುತ್ಸದ್ದಿ ನಾಯಕರು, ಅವರು ಈ ರೀತಿ ಮಾತನಾಡಬಾರದು. ರಾಹುಲ್ ಗಾಂಧಿ ಹುಚ್ಚ ಹುಚ್ಚ ಅಂತಿದ್ದಾರೆ. ಒಬ್ಬ ರಾಷ್ಟ್ರೀಯ ನಾಯಕರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ಬಲಪಂಥೀಯವಾದ ಉಗ್ರ ಮಟ್ಟಕ್ಕೆ ಹೋಗ್ತಾ ಇದೆ. ದೇಶದಲ್ಲಿ ವಿಚಾರವಾದಿಗಳ ಕೊಲೆ ನಡೆಯುತ್ತಿದೆ. ಬಲಪಂಥೀಯ ವಿರುದ್ದ ಮಾತನಾಡಿದವರನ್ನ ಮುಗಿಸಲು ಹೋಗ್ತಾ ಇದ್ದಾರೆ.

ಕೆಲವು ಪ್ರಕರಣಗಳನ್ನ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.  ಪರಮೇಶ ಮೇಸ್ತಾ ಪ್ರಕರಣ ಸಿಬಿಐಗೆ ಕೊಟ್ಟಿದ್ದು ಸಿಬಿಐ ವಿಚಾರಣೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
 

click me!