ಸಮುದಾಯ ಭವನವನ್ನು ಕ್ವಾರಂಟೈನ್ ಬಳಕೆ ಮಾಡಲು ಕೀ ಕೇಳಿದ ಪೊಲೀಸ್ ಪೇದೆಯ ಕಿವಿಕಚ್ಚಿ ಹಲ್ಲೆ ಮಾಡಿದ ಶಿಕ್ಷಕ| ಶಿಕ್ಷಕನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು| ವಿಜಯಪುರ ನಗರದ ಮಹಾಲ್ ಐನಾಪುರ ತಾಂಡಾದಲ್ಲಿ ನಡೆದ ಘಟನೆ|
ವಿಜಯಪುರ(ಮೇ.14): ಸಮುದಾಯ ಭವನವನ್ನು ಕ್ವಾರಂಟೈನ್ ಬಳಕೆ ಮಾಡಲು ಕೀ ಕೇಳಿದ ಪೊಲೀಸ್ ಪೇದೆಯ ಕಿವಿ ಕಚ್ಚಿ ಹಲ್ಲೆ ಮಾಡಿದ ಶಿಕ್ಷಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ತಾಲೂಕಿನ ಮಹಾಲ್ ಐನಾಪುರ ತಾಂಡಾದಲ್ಲಿ ಬುಧವಾರ ನಡೆದಿದೆ.
ಮಹಲ್ ಐನಾಪುರ ತಾಂಡಾದ ಮಹಾಲ್ ನಿವಾಸಿ ಖಾಸಗಿ ಶಾಲೆಯ ಶಿಕ್ಷಕ ಸುರೇಶ ಚವ್ಹಾಣ ಬಂಧಿತ ಆರೋಪಿ. ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದ ಕಾರ್ಮಿಕರನ್ನು ಕ್ವಾರೈಂಟೈನ್‌ನಲ್ಲಿಡಲು ಗ್ರಾಮದ ಸರ್ಕಾರಿ ಸಮುದಾಯ ಭವನದ ಅವಶ್ಯಕತೆಯಿತ್ತು. ಆದರ ಕೀ ಆರೋಪಿ ಸುರೇಶ್ ಚವ್ಹಾಣ್ ಕೈಯ್ಯಲ್ಲಿದ್ದುದರಿಂದ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೀ ಕೊಡವಂತೆ ಕೇಳಿದ್ದಾರೆ.
ವಿಜಯಪುರ ಜಿಲ್ಲೆಗೆ ವಿವಿಧ ರಾಜ್ಯಗಳಿಂದ 4159 ವಲಸೆ ಕಾರ್ಮಿಕರ ಆಗಮನ
ಅದಕ್ಕೆ ಒಪ್ಪದ ಆತ ಪೊಲೀಸ್ ಕಾನ್‌ಸ್ಟೇಬಲ್ ಕಿವಿ ಕಚ್ಚಿ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಕಂದಾಯ ಇಲಾಖೆ ಸಿಬ್ಬಂದಿ ಮೇಲೆಯೂ ಆತ ಹಲ್ಲೆ ಮಾಡಿದ್ದಾನೆ. ತಹಸೀಲ್ದಾರ್ ಮೋಹನಕುಮಾರಿ ಆತನ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.