ಕೋಲಾರ: ಅನ್ಯರಾಜ್ಯದ ವಾಹನಗಳಿಗೆ ಗಡಿ ಬಂದ್..!

Kannadaprabha News   | Asianet News
Published : May 14, 2020, 01:55 PM IST
ಕೋಲಾರ: ಅನ್ಯರಾಜ್ಯದ ವಾಹನಗಳಿಗೆ ಗಡಿ ಬಂದ್..!

ಸಾರಾಂಶ

ಬಂಗಾರಪೇಟೆ ತಾಲೂಕಿನ ಗಡಿ ಭಾಗದಲ್ಲಿರುವ ಬಲಮಂದೆ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಸತ್ಯಭಾಮ ರವರು ಬುಧವಾರ ಸಂಜೆ ದಿಢೀರನೆ ಭೇಟಿ ನೀಡಿ ಅಲ್ಲಿನ ಪೊಲೀಸರ ಕಾರ‍್ಯನಿರ್ವಾಹಣೆ ಬಗ್ಗೆ ಪರಿಶೀಲಿಸಿ ಯಾವುದೇ ಹೊರ ರಾಜ್ಯದ ವಾಹನಗಳು ಗಡಿ ದಾಟಿ ಬಾರದಂತೆ ಮತ್ತಷ್ಟುಬಿಗಿಗೊಳಿಸಬೇಕೆಂದು ಸೂಚಿಸಿದ್ದಾರೆ.

ಕೋಲಾರ(ಮೇ 14): ಬಂಗಾರಪೇಟೆ ತಾಲೂಕಿನ ಗಡಿ ಭಾಗದಲ್ಲಿರುವ ಬಲಮಂದೆ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಸತ್ಯಭಾಮ ರವರು ಬುಧವಾರ ಸಂಜೆ ದಿಢೀರನೆ ಭೇಟಿ ನೀಡಿ ಅಲ್ಲಿನ ಪೊಲೀಸರ ಕಾರ‍್ಯನಿರ್ವಾಹಣೆ ಬಗ್ಗೆ ಪರಿಶೀಲಿಸಿ ಯಾವುದೇ ಹೊರ ರಾಜ್ಯದ ವಾಹನಗಳು ಗಡಿ ದಾಟಿ ಬಾರದಂತೆ ಮತ್ತಷ್ಟುಬಿಗಿಗೊಳಿಸಬೇಕೆಂದು ಸೂಚಿಸಿದರು.

ಗಡಿಯಲ್ಲಿ ಕಟ್ಟೆಚ್ಚರ

ಕೋಲಾರ ಜಿಲ್ಲೆ ಸುತ್ತಲೂ ಸೋಂಕಿತ ನಗರಗಳಿದ್ದರೂ ಆತಂಕದ ನಡುವೆ ಯಾವುದೇ ಕೊರೊನಾ ಸೋಂಕಿಲ್ಲದೆ ಜನರು ನೆಮ್ಮದಿಯಾಗಿದ್ದರು,ಈಗ ಇಲ್ಲಿಗೂ ಸೋಂಕು ಕಾಲಿಸಿ ಜನರನ್ನು ಮತ್ತಷ್ಟುಭೀತಿಗೊಳಿಸಿದೆ. ಆದ್ದರಿಂದ ಬಲಮಂದೆ ಗ್ರಾಮ ತಮಿಳುನಾಡಿನ ಗಡಿಯಾಗಿದ್ದು ಇದರ ಮೂಲಕ ನಿತ್ಯ ಹತ್ತಾರು ವಾಹನಗಳು ಪಟ್ಟಣಕ್ಕೆ ಬರುತ್ತಿದ್ದವು, ಅವುಗಳು ಬಾರದಂತೆ ತಡೆಯಲಾಗಿದೆ. ತುರ್ತು ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳು ಬಂದರೂ ಬಿಡದೆ ವಾಪಸ್‌ ಕಳುಹಿಸಬೇಕು ಎಂದು ಪೊಲೀಸರಿಗೆ ಕಟ್ಟುನಿಟ್ಟಾಗಿ ತಿಳಿಸಿದರು.

ವಂದೇ ಭಾರತ್ ಮಿಷನ್ ವಿಮಾನ ಅರಬ್ಬೀ ಸಮುದ್ರದ ಮೇಲೆ ಹಾರುವಾಗ ಭಾವುಕರಾದ ಪೈಲಟ್..!

ಬರೀ ಪೊಲೀಸರು ಆರೋಗ್ಯ ಅಧಿಕಾರಿಗಳು ಕೆಲಸ ಮಾಡಿದರೆ ಸಾಲದು ಗ್ರಾಮಸ್ಥರು ಸಹ ಹಗಲು ರಾತ್ರಿ ತಂಡಗಳನ್ನು ರಚಿಸಿಕೊಂಡು ಸಂಶಯ ವ್ಯಕ್ತಿಗಳು ಹಾಗೂ ಹೊರ ರಾಜ್ಯದವರು ಬಂದರೆ ಅವರನ್ನು ವಾಪಸ್‌ ಕಳುಹಿಸಬೇಕು. ಅಲ್ಲದೆ ಕೂಡಲೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು, ಸ್ವಲ್ಪ ಎಚ್ಚರ ತಪ್ಪಿದ್ದಕ್ಕೆ ಮುಳಬಾಗಿಲಿನಲ್ಲಿ 5 ಮಂದಿಗೆ ಸೋಂಕು ಬಂದಿದೆ ಇದು ಬೇರೆ ತಾಲೂಕುಗಳಲ್ಲಿ ಅಬ್ಬದಂತೆ ನೋಡಿಕೊಳ್ಳಬೇಕು ಎಂದರು.

ಎಲ್ಲ ಅಡ್ಡದಾರಿಗಳನ್ನು ಬಂದ್‌ ಮಾಡಿ

ಚೆಕ್‌ಪೋಸ್ಟ್‌ ಬಿಟ್ಟು ಅಡ್ಡದಾರಿಗಳ ಮೂಲಕ ದ್ವಿಚಕ್ರ ವಹನಗಳಲ್ಲಿ ಹೊರ ರಾಜ್ಯದವರು ಬರಬಹುದು ಆ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಬೇಕು ಅನಿವಾರ್ಯ ಕಾರ‍್ಯಗಳಿಗೆ ಬರುವವರನ್ನು ಚೆಕ್‌ ಪೋಸ್ಟ್‌ ಬಳಿಯೇ ಸಂಚಾರಿ ಆಸ್ಪತ್ರೆಯನ್ನು ತೆರೆಯಲಾಗಿದ್ದು ಅಲ್ಲಿ ತಪಾಸಣೆಯಾದ ಬಳಿಕವಷ್ಟೇ ಒಳಗೆ ಬಿಡಬೇಕೆಂದು ತಿಳಿಸಿದರು.

ತಹಸಿಲ್ದಾರ್‌ ಚಂದ್ರಮೌಳೇಶ್ವರ, ಆರೋಗ್ಯಾಧಿಕಾರಿ ವಿಜಯಕುಮಾರಿ, ನೋಡಲ್‌ ಅಧಿಕಾರಿ ನಾರಾಯಣಸ್ವಾಮಿ, ಚೆಕ್‌ಪೋಸ್ಟ್‌ ನೋಡಲ್‌ ಅಧಿಕಾರಿ ಬಾಲಾಜಿ, ಆರ್‌.ಐ ಗೋಪಾಲ್‌ ಮತ್ತಿತರರು ಇದ್ದರು. 13ಕೆಬಿಪಿಟಿ.2.ಬಂಗಾರಪೇಟೆ ತಾ. ಗಡಿ ಭಾಗ ಬಲಮಂದೆ ಚೆಕ್‌ ಪೋಸ್ಟ್‌ಗೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ನೀಡಿ ಪರಿಶೀಲಿಸಿದರು.

PREV
click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
ಹಿಂದೂ, ಧರ್ಮವೇ ಅಲ್ಲ, ಅದೊಂದು ಬೈಗುಳ ಶಬ್ದ : ಬಿ.ಜಿ ಕೋಳ್ಸೆ