Kolar: ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಕನ್ನಡವೇ ಸಾರ್ವಭೌಮ

By Govindaraj S  |  First Published Jul 30, 2022, 11:26 PM IST

ಅಲ್ಲಿ ಹೆಚ್ಚಾಗಿ ಕನ್ನಡಕ್ಕಿಂತ ಜನರ ನಾಲಿಗೆ ಮೇಲೆ ತೆಲುಗು ತಮಿಳು ಭಷೆಯೇ ಕುಣಿದಾಡುತ್ತದೆ, ಆಂದ್ರ ಮತ್ತು ತಮಿಳುನಾಡಿನ ಗಡಿಗಳು ಅಲ್ಲಿಗೆ ಕೂಗಳತೆ ದೂರದಲ್ಲಿವೆ. ಇಂಥ ಪ್ರದೇಶದಲ್ಲಿ ಅಧಿಕಾರಿಯೊಬ್ಬನ ಕನ್ನಡ ಪ್ರೇಮ ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡುತ್ತಿದೆ. 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಜು.30): ಅಲ್ಲಿ ಹೆಚ್ಚಾಗಿ ಕನ್ನಡಕ್ಕಿಂತ ಜನರ ನಾಲಿಗೆ ಮೇಲೆ ತೆಲುಗು ತಮಿಳು ಭಷೆಯೇ ಕುಣಿದಾಡುತ್ತದೆ, ಆಂದ್ರ ಮತ್ತು ತಮಿಳುನಾಡಿನ ಗಡಿಗಳು ಅಲ್ಲಿಗೆ ಕೂಗಳತೆ ದೂರದಲ್ಲಿವೆ. ಇಂಥ ಪ್ರದೇಶದಲ್ಲಿ ಅಧಿಕಾರಿಯೊಬ್ಬನ ಕನ್ನಡ ಪ್ರೇಮ ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡುತ್ತಿದೆ. ಎಲ್ಲೆಡೆ ಕನ್ನಡ ಮಯವಾದ ವಾತಾವರಣ ಗಮನ ಸೆಳೆಯುತ್ತಿದೆ. ಸರ್ಕಾರಿ ಕಚೇರಿ ಎದುರು ಕಂಡು ಬರುವ ಕನ್ನಡದಲ್ಲಿನ ವಿಶೇಷವಾದ ಬರಹಗಳು, ಸುಂದರ ಹಾಗೂ ಸ್ವಚ್ಚವಾದ ವಾತಾವರಣ, ಕಚೇರಿಯಲ್ಲಿ ಕನ್ನಡವೇ ಸೌರ್ವಭೌಮ ಎನ್ನಿಸುವಂತಿರುವ ಆಡಳಿತ ಭಾಷೆ ಇಂಥಾದೊಂದು ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲಿ. 

Tap to resize

Latest Videos

ಹೌದು! ಬಂಗಾರಪೇಟೆ ತಾಲೂಕು ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳೊಂದಿಗೆ ತಮ್ಮ ಗಡಿಯನ್ನು ಹಂಚಿಕೊಂಡಿರುವ ತಾಲ್ಲೂಕು,ಈ ಎರಡು ರಾಜ್ಯಗಳಿಗೆ ಕೇವಲ ಕೂಗಳತೆ ದೂರದಲ್ಲಿರುವ ಈ ಪ್ರದೇಶದಲ್ಲಿ ಜನರು ಹೃದಯದ ಭಾಷೆ ಕನ್ನಡವೇ ಆದರೂ ಹೆಚ್ಚಾಗಿ ಜನರು ತೆಲುಗು ಹಾಗೂ ತಮಿಳು ಬಾಷೆಗಳನ್ನು ತಮ್ಮ ಆಡು ಭಾಷೆಯನ್ನಾಗಿ ಬಳಸುತ್ತಾರೆ ಇಂಥ ಪರಿಸ್ಥಿತಿಯಲ್ಲಿ ಈ ಭಾಗದಲ್ಲಿ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಮೂಡುವಂತದ್ದು, ಹೀಗಿರುವಾಗ ಬಂಗಾರಪೇಟೆಯ ತಾಲ್ಲೂಕು ಕಚೇರಿಯ ತಹಶೀಲ್ದಾರ್​ ದಯಾನಂದ್​ ತನ್ನ ಇಡೀ ಕಚೇರಿಯನ್ನು ಕನ್ನಡಮಯವನ್ನಾಗಿಸಿದ್ದಾರೆ.

ಕೋಲಾರದಲ್ಲಿ ಕೈ-ಕೈ ಮಿಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು: ಪತ್ರಕರ್ತರ ಮೇಲೆ ರಮೇಶ್ ಕುಮಾರ್ ಹಲ್ಲೆ

ತಾಲ್ಲೂಕು ಕಚೇರಿಯ ಒಳಗೆ ಕಾಲಿಟ್ಟರೆ ಸಾಕು ಹೊರಗಿನ ಆವರಣದಿಂದ ಹಿಡಿದು ಒಳಗಿನ ಎಲ್ಲಾ ಪ್ರತ್ಯೇಕ ವಿಭಾಗಗಳು ಎಲ್ಲೆಡೆ ಶುದ್ದ ಕನ್ನಡದ ನಾಮಫಲಕಗಳು ಗಮನ ಸೆಳೆಯುತ್ತಿವೆ. ಎಲ್ಲೆಡೆ ಸುಂದರ ಹಾಗೂ ಸ್ವಚ್ಚವಾದ ವಾತಾವರಣ ಜೊತೆಗೆ ಮರಗಿಡಳನ್ನು ಹಾಕಿ ಬಂದ ಜನರಿಗೆ ನೆರಳಲ್ಲಿ ಕುಳಿತುಕೊಳ್ಳಲು ಬೇಕಾದ ವಾತಾವರಣ ನಿರ್ಮಾಣ ಮಾಡಿದ್ದಾರೆ. ವೈಯಕ್ತಿಕವಾಗಿ ಕನ್ನಡ ಅಭಿಮಾನಿಯಾಗಿರುವ ತಹಶೀಲ್ದಾರ್ ದಯಾನಂದ್​ ಕರ್ನಾಟಕದಲ್ಲಿ ಎಂದಿಗೂ ಕನ್ನಡಕ್ಕೇ ಸಾರ್ವಭೌಮತ್ವ ಇರಬೇಕು ಎನ್ನುತ್ತಾರೆ. ಇದಿಷ್ಟು ತಾಲ್ಲೂಕು ಕಚೇರಿ ಹೊರಗಿನ ವಿಚಾರವಾದರೆ ತಾಲ್ಲೂಕು ಕಚೇರಿಯ ಒಳಗೂ ಅಷ್ಟೇ ಇಲ್ಲಿಗೆ ಬರುವ ಜನರಿಗೆ ಯಾವ ವಿಭಾಗ ಎಲ್ಲಿದೆ.

ತಮಗೆ ಎಲ್ಲಿ ಕೆಲಸ ಆಗಬೇಕು ಯಾರ ಬಳಿ ಕೆಲಸ ಆಗಬೇಕು ಎಂದು ಜನರಿಗೆ ಗೊಂದಲವಾಗದಂತೆ ಪ್ರತಿಯೊಂದನ್ನೂ ಕನ್ನಡದಲ್ಲೇ ನಾಮಫಲಕ ಬರೆಸಿದ್ದಾರೆ, ಕಟ್ಟಡದ ಮೊದಲ ಮಹಡಿಯಲ್ಲಿ ಯಾವೆಲ್ಲಾ ಅಧಿಕಾರಿಗಳು ಸಿಗ್ತಾರೆ, ಕೆಳ ಮಹಡಿಯಲ್ಲಿ ಯಾರು ಸಿಗುತ್ತಾರೆ ಹೀಗೆ ಎಲ್ಲಾ ಮಾಹಿತಿ ತಾಲೂಕು ಕಚೇರಿ ಪ್ರವೇಶ ಮಾಡುವ ಜನರಿಗೆ ಕನ್ನಡದ ಬರವಣಿಗೆಗಳು ಮಾಹಿತಿ ನೀಡಿ ಅವರನ್ನು ಸಂಬಂಧ ಪಟ್ಟ ಅಧಿಕಾರಿ ಬಳಿಗೆ ಕರೆದುಕೊಂಡು ಹೋಗುತ್ತವೆ. ಹೀಗೆ ತಹಶೀಲ್ದಾರ್ ದಯಾನಂದ್​ ಅವರ ಕನ್ನಡ ಪ್ರೇಮ ಇಲ್ಲಿ ಎದ್ದು ಕಾಣುತ್ತದೆ. ಅಷ್ಟೇ ಅಲ್ಲದೆ ತಹಶೀಲ್ದಾರ್ ಅವರ ನ್ಯಾಯಾಲಯದ ಸಭಾಂಗಣಕ್ಕೆ ಅಂಬೇಡ್ಕರ್​ ಅವರ ನೆನಪಿನಲ್ಲಿ ಭೀಮ ಸಭಾಂಗಣ ಎಂದು ಹೆಸರಿಟ್ಟು ಸಭಾಂಗಣದಲ್ಲಿ ಬೃಹತ್ತಾದ ಬಾಬಾ ಸಾಹೇಬ್​ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕಿದ್ದಾರೆ.

ಜೆಡಿಎಸ್ ಪಕ್ಷದ ಹೆಸರಿನಲ್ಲಿ ಕಟಿಂಗ್ ಶಾಪ್ ಓಪನ್: ಅಭಿಮಾನಿಯಿಂದ ವಿನೂತನ ಕಾರ್ಯಕ್ರಮ

ಈ ಮೂಲಕ ಸಂವಿಧಾನ ಶಿಲ್ಪಿಗೂ ವಿಶೇಷ ಗೌರವ ನೀಡಿದ್ದಾರೆ. ಇದು ಸ್ಥಳೀಯ ಕನ್ನಡಾಭಿಮಾನಿಗಳು ಹಾಗೂ ಕನ್ನಡ ಮನಸ್ಸುಗಳಿಗೆ ಕನ್ನಡ ಹೋರಾಟಗಾರರ ಪ್ರಶಂಸೆಗೆ ಕಾರಣವಾಗಿದೆ. ಒಟ್ಟಾರೆ ಕರ್ನಾಟಕದಲ್ಲಿ ಕನ್ನಡಕ್ಕಿಂತ ಬೇರೆ ಭಾಷೆಗಳದ್ದೇ ಕಾರುಬಾರು ಹೆಚ್ಚಾಗಿರುವಾಗ, ಅದರಲ್ಲೂ ಆಂಧ್ರ ಮತ್ತು ತಮಿಳುನಾಡಿನ ಗಡಿಯಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನ ಮಾನ ಗೌರವ ಸಿಗುವಂತೆ ನೋಡಿಕೊಂಡಿರುವ ಅಧಿಕಾರಿಗಳ ಕನ್ನಡ ಪ್ರೇಮ ನಿಜಕ್ಕೂ ಮೆಚ್ಚುವಂತದ್ದು. ಕನ್ನಡ ಕಡ್ಡಾಯ ಎನ್ನುವ ಮಾತನ್ನ ಎಲ್ಲರೂ ಇದೇ ರೀತಿ ಜಾರಿಗೆ ತಂದರೆ ಕರ್ನಾಟಕದಲ್ಲಿ ಕನ್ನಡದ ಸೌರ್ವಭೌಮತ್ವಕ್ಕೆ ಎಂದಿಗೂ ಧಕ್ಕೆ ಆಗೋದಿಲ್ಲ.

click me!