Chikkamagaluru: ಕರಾವಳಿಯಲ್ಲಿ ಪ್ರವೀಣ್ ಹತ್ಯೆ ಪ್ರಕರಣ: ಇಸ್ಲಾಮಿಕ್ ರಾಷ್ಟ್ರ ಮಾಡಲು ಸಂಚು

By Govindaraj SFirst Published Jul 30, 2022, 10:29 PM IST
Highlights

ಕರಾವಳಿಯಲ್ಲಿ ನಡೆದ ಪ್ರವೀಣ್ ಹತ್ಯೆಯ ಪ್ರಕರಣವನ್ನು ಸರ್ಕಾರ ಎನ್ಐಎ ತನಿಖೆಗೆ ಹಸ್ತಾಂತರ ಮಾಡಿದೆ. ಈ ಪ್ರಕರಣ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಸಾಕಷ್ಟು ತಲ್ಲಣ ಮೂಡಿಸಿದೆ. ಇದರ ನಡುವೆ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಪ್ರಕರಣದ ಬಗ್ಗೆ ಸ್ಟೋಟಕ ಹೇಳಿಕೆಯನ್ನು ನೀಡಿ ಹತ್ಯೆ ಹಿಂದೆ ಇಸ್ಲಾಮಿಕ್ ರಾಷ್ಟ್ರ ಮಾಡುವ ಸಂಚು ಎಂದು ಟೀಕಿಸಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜು.30): ಕರಾವಳಿಯಲ್ಲಿ ನಡೆದ ಪ್ರವೀಣ್ ಹತ್ಯೆಯ ಪ್ರಕರಣವನ್ನು ಸರ್ಕಾರ ಎನ್ಐಎ ತನಿಖೆಗೆ ಹಸ್ತಾಂತರ ಮಾಡಿದೆ. ಈ ಪ್ರಕರಣ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಸಾಕಷ್ಟು ತಲ್ಲಣ ಮೂಡಿಸಿದೆ. ಇದರ ನಡುವೆ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಪ್ರಕರಣದ ಬಗ್ಗೆ ಸ್ಟೋಟಕ ಹೇಳಿಕೆಯನ್ನು ನೀಡಿ ಹತ್ಯೆ ಹಿಂದೆ ಇಸ್ಲಾಮಿಕ್ ರಾಷ್ಟ್ರ ಮಾಡುವ ಸಂಚು ಎಂದು ಟೀಕಿಸಿದ್ದಾರೆ. 

ಇಸ್ಲಾಮಿಕ್ ಮಾಡಲು ಭಯೋತ್ಪಾದಕ ಕೃತ್ಯಗಳು: ಪ್ರಪಂಚವನ್ನೇ ಇಸ್ಲಾಮಿಕ್ ಮಾಡಲು ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಡಿ.ಎನ್.ಜೀವರಾಜ್ ದೇಶದಲ್ಲಿ ಇಸ್ಲಾಂ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಿವೆ. ಭಾರತ ಮಾತ್ರವಲ್ಲ ಇಡೀ ಪ್ರಪಂಚವನ್ನೆ 2047ರ ವೇಳೆಗೆ ಇಸ್ಲಾಮಿಕ್ ಮಾಡಲು ಸಂಚು ನಡೆಯುತ್ತಿದೆ. 

ಬಿಜೆಪಿ ಮುಖಂಡ ಅನ್ವರ್ ಹತ್ಯೆಯಾಗಿ ನಾಲ್ಕು ವರ್ಷ: ಇನ್ನೂ ಸಿಕ್ಕಿಲ್ಲ ಹಂತಕರು

ಇದಕ್ಕಾಗಿ ಹೇಯ ಕೃತ್ಯಗಳನ್ನು ಮಾಡಲಾಗುತ್ತಿದೆ. ಈ ದೇಶ ಧರ್ಮದ ಆಧಾರದ ಮೇಲೆ ವಿಭಜನೆ ಮಾಡಲಾಗಿದೆ. ಮುಸ್ಲಿಂರಿಗಾಗಿಯೇ ಪಾಕಿಸ್ತಾನ ವಿಭಜನೆಯಾಗಿದ್ದು ಆದರೂ ಭಾರತದಲ್ಲಿ ಅಧಿಪತ್ಯ ಸಾಧಿಸಲು ಮುಸ್ಲಿಮರು ತಮ್ಮ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾಮನ್ ಸಿವಿಲ್ ಕೋಡ್‌ಗೆ ಒತ್ತಾಯ: ದೇಶದಲ್ಲಿ ಜನಸಂಖ್ಯೆ ಕಡಿಮೆ ಮಾಡಲು ಜನಸಂಖ್ಯೆ ನಿಯಂತ್ರಣ ಸೇರಿದಂತೆ  ಕಾಮನ್ ಸಿವಿಲ್ ಕೋಡ್ ಜಾರಿಯಾಗಬೇಕೆಂದು ಒತ್ತಾಯಿಸಿದರು. ನಮ್ಮ ಹಿಂದೂ ಸಹೋದರರ ಹತ್ಯೆಯನ್ನು ನಾವೆಂದೂ ಸಹಿಸುವುದಿಲ್ಲ, ಎಲ್ಲಾ ಹಿಂದೂಗಳು ಒಂದಾಗಿ ನಮ್ಮ ಹಿಂದೂ ಕಾರ್ಯಕರ್ತರನ್ನು ರಕ್ಷಿಸಿಕೊಳ್ಳುತ್ತೇವೆ. ಬಿಜೆಪಿ ಕಾರ್ಯಕರ್ತರು ಸಾಮೂಹಿಕ ರಾಜಿನಾಮೆ ಅದು ಸಾತ್ವಿಕತೆಯ ಆಕ್ರೋಶವಾಗಿದೆ ಅಷ್ಟೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷದವರು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಬೇಡ. 

Praveen Nettaru Murder Case: ಬಾಳೆಹೊನ್ನೂರು ಪಟ್ಟಣ ಬಂದ್

ನಮ್ಮ ಸರ್ಕಾರವಿದ್ದರೂ ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಲಾಗಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆಯೇ ಹೊರತು, ಅಂತಹ ಕಾರ್ಯಕರ್ತರು ಎಂದಿಗೂ ಕಾಂಗ್ರೆಸ್, ಜೆಡಿಎಸ್‌ನ್ನು ಬೆಂಬಲಿಸುವುದಿಲ್ಲ. ಆ ಭ್ರಮೆಯನ್ನು ವಿರೋಧ ಪಕ್ಷದವರು ಬಿಡಬೇಕೆಂದರು. ಕಾಂಗ್ರೆಸ್‌ನವರು ಈ ಹತ್ಯೆಯನ್ನು ವಿರೋಧಿಸುತ್ತಿಲ್ಲ, ಇಸ್ಲಾಮಿಕ್‌ನ್ನು ವಿರೋಧಿಸುತ್ತಿಲ್ಲ. ಆದರೆ ಮುಂದೊಂದು ದಿನ ನಿಮ್ಮ ಮಕ್ಕಳು ಬದುಕುವುದು ದುಸ್ತವಾರವಾಗುವ ಸ್ಥಿತಿ ನಿರ್ಮಾಣವಾಗಲಿದೆ ಎನ್ನುವ  ಎಚ್ಚರಿಕೆ ನೀಡಿದರು.

click me!