ST ಪ್ರಮಾಣ ಪತ್ರಕ್ಕಾಗಿ ಹೋರಾಟ: ಶಾಸಕ ಮನಗೂಳಿ ನಿವಾಸಕ್ಕೆ ಮುತ್ತಿಗೆ

Suvarna News   | Asianet News
Published : Aug 30, 2020, 01:54 PM ISTUpdated : Aug 30, 2020, 01:58 PM IST
ST ಪ್ರಮಾಣ ಪತ್ರಕ್ಕಾಗಿ ಹೋರಾಟ: ಶಾಸಕ ಮನಗೂಳಿ ನಿವಾಸಕ್ಕೆ ಮುತ್ತಿಗೆ

ಸಾರಾಂಶ

ತಳವಾರ, ಪರಿವಾರ ಸಮುದಾಯದಿಂದ ಪ್ರತಿಭಟನೆ| ಶಾಸಕ ಎಂ.ಸಿ. ಮನಗೂಳಿ ಅವರ ಮನೆಗೆ ಪ್ರತಿಭಟನಾಕಾರರಿಂದ ಮುತ್ತಿಗೆ| ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿರುವ ಶಾಸಕ ಮನಗೂಳಿ ಮನೆ| ವಿಜಯಪುರ ನಗರದಲ್ಲೂ ಪ್ರತಿಭಟನೆ| 

ವಿಜಯಪುರ(ಆ.30): ತಳವಾರ ಮತ್ತು ಪರಿವಾರ ಎಸ್‌ಟಿ ಮೀಸಲು ಪತ್ರಕ್ಕೆ ಹೋರಾಟಕ್ಕೆ ಬೆಂಬಲಿಸುವಂತೆ ಆಗ್ರಹಿಸಿ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಜೆಡಿಎಸ್‌ ಶಾಸಕ ಎಂ.ಸಿ. ಮನಗೂಳಿ ಅವರ ಮನೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ಘಟನೆ ಇಂದು(ಭಾನುವಾರ) ನಡೆದಿದೆ.

ಪಟ್ಟಣದಲ್ಲಿ ಇಂದು ಪ್ರತಿಭಟನೆ ನಡೆಸಿದ ತಳವಾರ ಮತ್ತು ಪರಿವಾರ ಸಮಾಜದ ಮುಖಂಡರು ಸದನದಲ್ಲಿ ತಳವಾರ ಮತ್ತು ಪರಿವಾರಕ್ಕೆ ಎಸ್‌ಟಿ ಪತ್ರ ನೀಡುವಂತೆ ಧ್ವನಿ ಎತ್ತುವಂತೆ ಶಾಸಕ ಎಂ.ಸಿ. ಮನಗೂಳಿ ಅವರಿಗೆ ಈ ಮೂಳಕ ಒತ್ತಾಯಿಸಲಾಗಿದೆ. 

ಸಿಂದಗಿ: 'ದೇವಸ್ಥಾನದಲ್ಲಿ ಸರಿಸಮ ಕುತಿದ್ದಕ್ಕೆ ದಲಿತ ಯುವಕನ ಹತ್ಯೆ'

ನಮ್ಮೊಂದಿಗೆ ಶಾಸಕ ಎಂ.ಸಿ. ಮನಗೂಳಿ ಕೈ ಜೋಡಿಸಿ ನಮ್ಮ ಬೆಂಬಲಕ್ಕೆ ನಿಲ್ಲುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಎಸ್‌ಟಿ ಪ್ರಮಾಣ ಪತ್ರ ನೀಡದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಇನ್ನು ST ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ವಿಜಯಪುರ ನಗರದ ಅಂಬೇಡ್ಕರ್ ವೃತ್ತದಲ್ಲಿಯೂ ಪ್ರತಿಭಟನೆ ನಡೆಸಲಾಗಿದೆ. ಅಂಬೇಡ್ಕರ್ ವೃತ್ತದಿಂದ ಆಯಾ ಕ್ಷೇತ್ರಗಳ ಶಾಸಕರ ಮನೆಗಳ ಎದುರು ಹೋರಾಟಗಾರರು ಪ್ರತಿಭಟನೆ ಮಾಡಿದ್ದಾರೆ. ಈಗಾಗಲೇ ಸಿಂದಗಿ ಶಾಸಕ ಎಂ ಸಿ ಮನಗೂಳಿ ನಿವಾಸಕ್ಕೆ ಮುತ್ತಿಗೆ ಹಾಕಲಾಗಿದೆ.
 

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC