ಶಿರಸಿ-ಸಿದ್ದಾಪುರ ಜನರಿಗೆ ಬಿಗ್ ನ್ಯೂಸ್ ಕೊಟ್ಟ ಸ್ಪೀಕರ್ ಕಾಗೇರಿ

By Suvarna News  |  First Published Jan 29, 2021, 8:51 PM IST

ತಾಳಗುಪ್ಪಾದಿಂದ - ಸಿದ್ದಾಪುರ - ಶಿರಸಿ - ಹುಬ್ಬಳ್ಳಿ ರೈಲು ಮಾರ್ಗ ವಿಸ್ತರಣೆ ಯೋಜನೆಯ ಸರ್ವೇ ಟೆಂಡರ್ ಪೂರ್ಣ/ ಮಾಹಿತಿ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ/ ಸಾರ್ವಜನಿಕರ ಸಹಕಾರಕ್ಕೆ ಕೋರಿಕೆ


ಬೆಂಗಳೂರು/ ಶಿರಸಿ(ಜ.  29) ತಾಳಗುಪ್ಪಾದಿಂದ - ಸಿದ್ದಾಪುರ - ಶಿರಸಿ - ಹುಬ್ಬಳ್ಳಿ ರೈಲು ಮಾರ್ಗ ವಿಸ್ತರಣೆ ಯೋಜನೆಯ ಸರ್ವೇ ಕಾರ್ಯದ ಟೆಂಡರ್ ಪ್ರಕ್ರಿಯೆ ಇಂದು ಪೂರ್ಣಗೊಂಡಿದ್ದು, ಒಮೇಗಾ ಅನಾಲೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಇವರಿಗೆ ಟೆಂಡರ್ ಆಗಿರುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.

ಈ ಸರ್ವೇ ಪ್ರಕ್ರಿಯೆಯಲ್ಲಿ ಯೋಜನೆಯ ವೆಚ್ಚ, ಯೋಜನೆಗೆ ಬೇಕಾಗುವ ಭೂಮಿಯ ಅವಶ್ಯಕತೆ, ಅವಶ್ಯವಿರುವ ರೈಲ್ವೇ ಸ್ಟೇಷನ್ ಗಳ ಸಂಖ್ಯೆ, ರೈಲ್ವೇ ಮಾರ್ಗ ಜೋಡಣೆ ಹಾಗೂ ಇನ್ನಿತರ ಅಂಶವು ಒಳಗೊಂಡಿರುತ್ತದೆ‌. ಈ ಸರ್ವೇ ಪ್ರಕ್ರಿಯೆಯನ್ನು ಮುಂದಿನ 6  ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಕೇಂದ್ರ ರೈಲ್ವೇ ಸಚಿವಾಲಯಕ್ಕೆ  ವರದಿ ಸಲ್ಲಿಸಲಿದ್ದಾರೆ. ಯೋಜನೆ ಅನುಷ್ಠಾನ ಹಂತದಲ್ಲಿ ಸಾರ್ವಜನಿಕರು ಸಹಕರಿಸಬೇಕಾಗಿ ಕೋರುತ್ತಿದ್ದೇನೆ ಎಂದು ಶಿರಸಿ ಸಿದ್ದಾಪುರ ಶಾಸಕರಾಗಿರುವ ಕಾಗೇರಿ  ಮನವಿ ಮಾಡಿಕೊಂಡಿದ್ದಾರೆ. 

Latest Videos

undefined

ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣಕ್ಕೆ ರೈಲು..ಲಾಭಗಳು ಒಂದೇ-ಎರಡೇ

ಈ ಮಾರ್ಗ ವಿಸ್ತರಣೆ ಬಹುದಿನಗಳ ಬೇಡಿಕೆಯಾಗಿತ್ತು.  ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಭಾಗಕ್ಕೆ ರೈಲಲ್ವೆ ಸಂಪರ್ಕ ಇನ್ನುವರೆಗೆ ಕನಸಾಗಿಯೇ ಉಳಿದುಕೊಂಡಿದೆ. ಈ ಮಾರ್ಗ ಪ್ರಗತಿಯಾದರೆ  ಬೇಡಿಕೆ ನೆರವೇರಲಿದೆ. ಇನ್ನೊಂದು ಕಡೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಸಹ ಬಹಳ ವರ್ಷದಿಂದ ಚರ್ಚೆಯಲ್ಲಿದೆ .

click me!