ಹೆಣ್ಣಿನ ಪ್ರಮಾಣ ಕಡಿಮೆ ಇರುವ ಕಾರಣ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ತಾಯಿ-ಮಡದಿಯಾಗಿ ಹೆಣ್ಣನ್ನು ಗೌರವಿಸುವಂತಹ ಸಮಾಜ ಮಗಳನ್ನು ಕೂಡ ಅಷ್ಟೇ ಗೌರವದಿಂದ ಕಾಣುವಂತಹ ಸಂಸ್ಕಾರವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ಇದೆ ಎಂದು ಅಧಿಕ ಸಿವಿಲ್ ನ್ಯಾಯಾಧೀಶರಾದ ಎಂ.ವಿ. ಲಕ್ಷ್ಮಿ ಹೇಳಿದರು.
ಶಿರಾ : ಹೆಣ್ಣಿನ ಪ್ರಮಾಣ ಕಡಿಮೆ ಇರುವ ಕಾರಣ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ತಾಯಿ-ಮಡದಿಯಾಗಿ ಹೆಣ್ಣನ್ನು ಗೌರವಿಸುವಂತಹ ಸಮಾಜ ಮಗಳನ್ನು ಕೂಡ ಅಷ್ಟೇ ಗೌರವದಿಂದ ಕಾಣುವಂತಹ ಸಂಸ್ಕಾರವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಪಾಲು ಇದೆ ಎಂದು ಅಧಿಕ ಸಿವಿಲ್ ನ್ಯಾಯಾಧೀಶರಾದ ಎಂ.ವಿ. ಲಕ್ಷ್ಮಿ ಹೇಳಿದರು.
ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀ ಗಣೇಶಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವೆಗಳ ಸಮಿತಿ, ತಾವರೆಕೆರೆ ಗ್ರಾಮ ಪಂಚಾಯತಿ, ವಕೀಲರ ಸಂಘ ಶಿರಾ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಕಾನೂನು ಅರಿವು ಮತ್ತು ನೆರವು, ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸಕ್ತ ಸಂದರ್ಭದಲ್ಲಿ ಮಕ್ಕಳು ತಂದೆ ತಾಯಿಯನ್ನು ಸಾಕಿ ಪೋಷಣೆ ಮಾಡಲು ಸಾಧ್ಯವಿಲ್ಲ ಎಂದು ಬೀದಿಗೆ ತಳ್ಳಿದ ಪ್ರಕರಣಗಳಿವೆ, ತವರು ಮನೆಯಲ್ಲಿ ಇದ್ದರು ತಂದೆಯ ತಾಯಿಯ ಮೇಲೆ ಹೆಚ್ಚು ಮಮತೆ ತೋರಿಸುವ ಕರುಣಾಮಯಿ ಹೆಣ್ಣು. ಎಲ್ಲಾ ಕ್ಷೇತ್ರದಲ್ಲೂ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಪ್ರತಿ ಹೆಣ್ಣು ಮಕ್ಕಳು ಹೊಂದಿದ್ದಾರೆ ಎಂದರು.
ಪ್ರಸೂತಿ ತಜ್ಞ ಡಾ.ಡಿ.ಎಂ.ಗೌಡ ಮಾತನಾಡಿ, ಪೋಷಕಾಂಶ ಇರುವ ಆಹಾರವನ್ನು ಗರ್ಭಿಣಿಯರು ಹೆಚ್ಚು ಸೇವನೆ ಮಾಡಬೇಕು. ಅಪೌಷ್ಟಿಕತೆ ರಕ್ತ ಹೀನತೆಗೆ ಕಾರಣವಾಗಲಿದ್ದು ಆರೋಗ್ಯ ಸಮಸ್ಯೆ ಉಂಟಾಗಲಿದ್ದು, ಆಹಾರ ಸೇವನೆ ಬಗ್ಗೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಪೋಷಕರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಆಸಕ್ತಿ ವಹಿಸಬೇಕು, ಚಿಕ್ಕ ವಯಸ್ಸಿಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ವೈವಾಹಿಕ ಜೀವನದಲ್ಲಿ ಅಪೌಷ್ಟಿಕತೆಯಿಂದ ಬಳಲುವಂತೆ ಮಾಡಬಾರದು ಎಂದರು.
ಇದೇ ಸಂದರ್ಭದಲ್ಲಿ ತಾವರೆಕೆರೆ ಗ್ರಾಮ ಪಂಚಾಯತಿ ವತಿಯಿಂದ ಸಾಮೂಹಿಕ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು. ತಾವರೆಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಷ್ಮಾ ಯಶೋಧರ ಗೌಡ, ಉಪಾಧ್ಯಕ್ಷ ಟಿ.ಬಿ. ಶಿವಕುಮಾರ್, ಶಿರಾ ವಕೀಲರ ಸಂಘದ ಅಧ್ಯಕ್ಷ ಎಚ್.ಪಿ .ಧರಣೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಎಚ್. ಗುರುಮೂರ್ತಿ ಗೌಡ, ಪಿಡಿಒ ಎನ್. ನಾಗರಾಜ್, ಅಭಿಲಾಶ, ಭೂಮಿಕ ಕೃಷ್ಣಮೂರ್ತಿ, ಶಿಕ್ಷಕಿ ರಶ್ಮಿ, ತಾವರೆಕೆರೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತರು ಹಾಜರಿದ್ದರು.
ಹೆಣ್ಣು ಮಕ್ಕಳಿಗೆ ಆಸ್ತಿ
ತಿರುವನಂತಪುರ (ಮಾರ್ಚ್ 9, 2023): ಷರಿಯಾ ಕಾನೂನು ಪ್ರಕಾರ ವಿವಾಹವಾಗಿದ್ದ ವಕೀಲ ಹಾಗೂ ನಟ ಸಿ. ಶುಕ್ಕೂರ್ ಮತ್ತು ಅವರ ಪತ್ನಿ ಶೀನಾ ಅವರು ವಿಶೇಷ ವಿವಾಹ ಕಾಯ್ದೆಯಡಿ ಮತ್ತೆ ಮದುವೆಯಾಗಿದ್ದಾರೆ. ಕೇರಳದ ಪ್ರತಿಷ್ಠಿತ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಪ್ರೊ ವೈಸ್ ಚಾನ್ಸೆಲರ್ ಆಗಿದ್ದ ಶೀನಾ ಅವರನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಸಬ್ - ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ. 29 ವರ್ಷಗಳ ಮುನ್ನ ಇವರ ಮದುವೆಯಾಗಿದ್ದು, ಈಗ ಮತ್ತೆ ಅವರನ್ನೇ ಮದುವೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಕ್ಕೆ ಕಾರಣವಾಗಿದೆ. ಇನ್ನು, ದಂಪತಿಯ ಮರು ಮದುವೆಯಾಗಿರುವ ಉದ್ದೇಶದ ಕಾರಣವೂ ಟೀಕೆಗೆ ಗುರಿಯಾಗುತ್ತಿದೆ.
ಹಾಗಾದ್ರೆ, ಈ ಮರು ಮದುವೆಯ (Marriage) ಕಾರಣವೇನು ಅಂತೀರಾ, ತಮ್ಮ ಹೆಣ್ಣು ಮಕ್ಕಳಿಗೆ (Daughter) ಪೂರ್ಣ ಆಸ್ತಿಯನ್ನು ವರ್ಗಾಯಿಸಲು (Inheritance of Property). ಹೌದು, ಷರಿಯಾ ಮುಸ್ಲಿಂ ಕಾನೂನಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ವರ್ಗಾಯಿಸಲು ಅನುಮತಿ ಇಲ್ಲ. ಈ ಹಿನ್ನೆಲೆ, ತಮ್ಮ ಮಗಳ 'ಆರ್ಥಿಕ ಭದ್ರತೆ'ಯನ್ನು ಖಚಿತಪಡಿಸಿಕೊಳ್ಳಲು ಅವರು ಮರುಮದುವೆಯಾಗಿದ್ದು, ಅವರ ಮೂವರು ಹೆಣ್ಣುಮಕ್ಕಳು ಕೂಡ ಈ ಮರು ಮದುವೆಯಲ್ಲಿ ಪಾಲ್ಗೊಂಡಿದ್ದರು