ಗದಗ: ಭೀಕರ ಬರ ಪರಿಸ್ಥಿತಿ ಮಧ್ಯೆ ತಹಶೀಲ್ದಾರ್ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್..!

By Girish GoudarFirst Published Nov 10, 2023, 11:13 AM IST
Highlights

ಗದಗ ಜಿಲ್ಲೆಯ ಏಳೂ ತಾಲೂಕಿಗಳೂ ಬರ ಪೀಡಿತ ಅಂತಾ ಸರ್ಕಾರ ಘಷಣೆ ಮಾಡದೆ. ಬರ ಪರಿಸ್ಥಿತಿ ಬಗ್ಗೆ ಗಮನ ಕೊಡಬೇಕಿದ್ದ ತಹಶೀಲ್ದಾರ್ ಸಾಹೇಬರು ಅದ್ಧೂರಿ ಹುಟ್ಟು ಹಬ್ಬದ ಮಾಡ್ಕೊಂಡಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿದೆ.‌

ಗದಗ(ನ.10): ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಬರ ತಾಂಡವಾಡ್ತಿದ್ದು, ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಅದ್ಧೂರಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.. 

ತಹಶೀಲ್ದಾರ್ ಧನಂಜಯ್ ಮಾಲಗತ್ತಿ ಅವರ 48 ನೇ ವರ್ಷದ ಹುಟ್ಟು ಹಬ್ಬವನ್ನ ಸಂಜೆ ತಹಶೀಲ್ದಾರ್ ಕ್ವಾಟರ್ಸ್ ನಲ್ಲಿ ಮಾಡ್ಲಾಗಿದೆ.. ಫಯರ್ ವರ್ಕ್ ಸ್ವಾಗತದೊಂದಿದೆ ತಹಶೀಲ್ದಾರ್ ಸಾಹೇಬರಿಗೆ ಸ್ವಾಗತಿಸಿ ಕೇಕ್ ಕಟ್ ಮಾಡ್ಲಾಗಿದೆ.. ತಹಶೀಲ್ದಾರ್ ಅವರು ಹಾಡು ಹಾಡುವ ಮೂಲಕ ಸಭಿಕರನ್ನ ರಂಜಿಸುವ ಕೆಲಸವನ್ನೂ ಮಾಡಿದ್ದಾರೆ.. ಬೆಳಗ್ಗೆಯಿಂದ ತಹಶೀಲ್ದಾರ್ ಅವರಿಗೆ ಸಾರ್ವಜನಿಕರು ಸಂಘಟನೆ ಸದಸ್ಯರು, ಕಚೇರಿಗೆ ಬಂದು ವಿಶ್ ಮಾಡಿದ್ರು.. ಇಷ್ಟಕ್ಕೆ ಸಮೀತಿವಾಗಿದ್ರೆ ಧನಂಜಯ್ ಅವರ ಹುಟ್ಟು ಹಬ್ಬದ ಆಚರಣೆ ಚರ್ಚೆಯಲ್ಲಿ ಇರ್ತಿರಲಿಲ್ಲ.. ಆದ್ರೆ, ಸಂಜೆ ತಹಶೀಲ್ದಾರ್ ನಿವಾಸದಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಿದ್ದು ಸದ್ಯ ಚರ್ಚೆಗೆ ಕಾರಣವಾಗಿದೆ.

ರೈತನಿಗೆ ಮಹಾ ಮೋಸ ಮಾಡಿದ ಬ್ಯಾಂಕ್ ಮ್ಯಾನೇಜರ್: 3 ವರ್ಷಗಳ ಬಳಿಕ ಮನೆಗೆ ಬಂದಿತ್ತು ನೋಟಿಸ್..!

ಮರಳು ದಂಧೆಕೋರರಿಗೂ ಕಾರ್ಯಕ್ರಮದಲ್ಲಿ ಆಹ್ವಾನ..?

ತಾಲೂಕುನಲ್ಲಿ ಮರಳು ದಂಧೆಯಲ್ಲಿ‌ ತೊಡಗಿದ ಕೆಲವರು ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು ಎಂಬ ಮಾಹಿತಿ ಇದೆ.. ಕಕ್ಕೂರು, ರಾಮೇನಹಳ್ಳಿ ಗ್ರಾಮ ಸೇರಿದಂತೆ ಮಂಡರಗಿಯ ನಾಲ್ವರು ದಂಧೆಕೋರರು ತಹಶೀಲ್ದಾರ್ ಸಾಹೇಬರ ಮನೆಗೆ ಭೇಟಿ ಮಾಡಿ ವಿಶ್ ಮಾಡಿದ್ದು, ಸಾಮಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗ್ತಿವೆ.. 

ಗದಗ ಜಿಲ್ಲೆಯ ಏಳೂ ತಾಲೂಕಿಗಳೂ ಬರ ಪೀಡಿತ ಅಂತಾ ಸರ್ಕಾರ ಘಷಣೆ ಮಾಡದೆ. ಬರ ಪರಿಸ್ಥಿತಿ ಬಗ್ಗೆ ಗಮನ ಕೊಡಬೇಕಿದ್ದ ತಹಶೀಲ್ದಾರ್ ಸಾಹೇಬರು ಅದ್ಧೂರಿ ಹುಟ್ಟು ಹಬ್ಬದ ಮಾಡ್ಕೊಂಡಿರೋದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿದೆ.‌

click me!