ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್ ಕಚೇರಿ ಚೇಂಬರ್‌ನಲ್ಲೇ ತಮ್ಮ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟಿದ್ದ ತಹಶೀಲ್ದಾರ್ ಗುರುಬಸವರಾಜ| ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ನೊಂದ ಮಹಿಳೆ| ಪ್ರಕರಣವನ್ನ ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಅಧಿಕಾರ ಘನತೆಗೆ ಚ್ಯುತಿ ತಂದಿದ್ದ ಹಿನ್ನಲೆಯಲ್ಲಿ ತಹಶೀಲ್ದಾರ್ ಅಮಾನತ್ತು|
ಕೊಪ್ಪಳ(ನ.28): ಕಚೇರಿಯಲ್ಲಿಯೇ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ಅವರನ್ನ ಅಮಾನತ್ತು ಮಾಡಿ ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿ ನಾಗರಾಜ ಅವರು ಆದೇಶ ಹೊರಡಿಸಿದ್ದಾರೆ.
ಬಡ ವಿದ್ಯಾರ್ಥಿ ವೈದ್ಯನಾಗುವ ಕನಸಿಗೆ ನೀರೆರದ ಸುವರ್ಣ ನ್ಯೂಸ್: ಹರಿದು ಬಂದ ನೆರವಿನ ಮಹಾಪೂರ
ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್ ಕಚೇರಿ ಚೇಂಬರ್‌ನಲ್ಲೇ ತಮ್ಮ ಮಹಿಳಾ ಸಿಬ್ಬಂದಿಗೆ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ಮುತ್ತಿಟ್ಟಿದ್ದರು. ಗುರುಬಸವರಾಜ ಅವರು ಕುಷ್ಟಗಿಯಿಂದ ವರ್ಗಾವಣೆಗೊಂಡು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ಕಾರ್ಯನಿರ್ವಹಿಸುವಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಸಂಬಂಧ ನೊಂದ ಮಹಿಳೆ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನ ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಅಧಿಕಾರ ಘನತೆಗೆ ಚ್ಯುತಿ ತಂದಿದ್ದ ಹಿನ್ನಲೆಯಲ್ಲಿ ತಹಶೀಲ್ದಾರ್ ಕೆ.ಎಂ.ಗುರುಬಸವರಾಜ ಅವರನ್ನ ಅಮಾನತು ಮಾಡಲಾಗಿದೆ. ಅಮಾನತ್ತುಗೊಂಡ ಗುರುಬಸವರಾಜ ಸದ್ಯ ಬೀದರ್‌ನಲ್ಲಿ ಚುನಾವಣಾ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.